India vs England: ಲಕ್ನೋಗೆ ಬಂದಿಳಿದ ಭಾರತ ತಂಡಕ್ಕೆ ಮುತ್ತಿನಮಾಲೆಯ ಸ್ವಾಗತ!
ಟೀಮ್ ಇಂಡಿಯಾದ ವಿಶ್ವಕಪ್ ಟೂರ್ನಿಯ ಅಭಿಯಾನ ಈವರೆಗೆ ಅದ್ಭುತವಾಗಿ ಸಾಗಿದೆ. ಮೊದಲ ಐದು ಪಂದ್ಯಗಳಲ್ಲಿ ಐದು ಗೆಲುವು ಸಾಧಿಸಿರುವ ಭಾರತ ಟೂರ್ನಿಯ ಏಕೈಕ ಅಜೇಯ ತಂಡವಾಗಿ ಉಳಿದುಕೊಂಡಿದೆ. ಇದೀಗ ಮುಂದಿನ ಪಂದ್ಯಕ್ಕಾಗಿ ಭಾರತ ತಂಡ ಸಿದ್ಧವಾಗಿದ್ದು ಅದಕ್ಕಾಗಿ ಉತ್ತರ ಪ್ರದೇಶದ ಲಕ್ನೋಗೆ ಬಂದಿಳಿದಿದೆ ಭಾರತ ತಂಡ.
ಟೀಮ್ ಇಂಡಿಯಾದ ಮುಂದಿನ ಪಂದ್ಯ ಇಂಗ್ಲೆಂಡ್ ವಿರುದ್ಧ ಮುಂದಿನ ಭಾನುವಾರ ನಡೆಯಲಿದೆ. ಲಕ್ನೋದಲ್ಲಿರುವ ಏಕಾನ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದ್ದು ಇದಕ್ಕಾಗಿ ತಂಡ ತನ್ನ ಸಿದ್ಧತೆ ನಡೆಸಲಿದೆ. ಸುಮಾರು ಒಂದು ವಾರಗಳ ಅಂತರವಿದ್ದ ಕಾರಣ ಟೀಮ್ ಇಂಡಿಯಾ ಆಟಗಾರರು ಧರ್ಮಶಾಲಾದಲ್ಲಿ ಎರಡು ದಿನಗಳ ಕಾಲ ಉಳಿದುಕೊಂಡಿದ್ದು ಕೆಲ ಪ್ರೇಕ್ಷಣೀಯ ತಾಣಗಳಿಗೆ ಭೇಟಿಕೊಟ್ಟಿದ್ದರು.

ಇದೀಗ ವಿಶ್ರಾಂತಿ ಅವಧಿ ಮುಗಿದಿದ್ದು ಟೀಮ್ ಇಂಡಿಯಾ ಲಕ್ನೋಗೆ ಬಂದಿಳಿದಿದೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ಲಕ್ನೋದಲ್ಲಿ ಅದ್ಭುತವಾದ ಸ್ವಾಗತ ದೊರೆತಿದೆ. ಭಾರತ ತಂಡದ ಎಲ್ಲಾ ಆಟಗಾರರಿಗೆ ಸಾಂಪ್ರದಾಯಿಕವಾಗಿ ಸ್ವಾಗತ ನೀಡಲಾಗಿದ್ದು ಮುತ್ತಿನ ಮಾಲೆಯನ್ನು ಧರಿಸಿ ಸ್ವಾಗತಿಸಿದ್ದು ಗಮನಸೆಳೆದಿದೆ. ಬಿಸಿಸಿಐ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ.
ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್ ಟೂರ್ನಿಯನ್ನು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸುವ ಮೂಲಕ ಶುಭಾರಂಭ ಮಾಡಿತ್ತು. ಅದಾದ ಬಳಿಕ ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಹೇಯವಾಗಿದ್ದ ನ್ಯೂಜಿಲೆಂಡ್ ತಂಡವನ್ನು ಕೂಡ ಮಣಿಸಿದೆ.
ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು 2003ರ ಬಳಿಕ ಮೊದಲ ಬಾರಿಗೆ ಮಣಿಸುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿಯಲಿದೆ. 2019ರಲ್ಲಿನ ವಿಶ್ವಕಪ್‌ನಲ್ಲಿ ಭಾರತ ಇಂಗ್ಲೆಂಡ್ ತಂಡದ ವಿರುದ್ಧ 31 ರನ್‌ಗಳ ಅಂತರದಿಂದ ಸೋಲು ಅನುಭವಿಸಿತ್ತು. 2011ರಲ್ಲಿ ಮುಖಾಮುಖಿಯಾಗಿದ್ದಾಗ ಪಂದ್ಯ ಟೈನಲ್ಲಿ ಅಂತ್ಯವಾಗಿತ್ತು. ಇದೀಗ ಆತಿಥೇಯ ಭಾರತ ತಂಡ ಇಂಗ್ಲೆಂಡ್‌ಗೆ ತಿರುಗೇಟು ನೀಡುವ ಆತ್ಮವಿಶ್ವಾಸದಲ್ಲಿದೆ.
ಇನ್ನು ಮತ್ತೊಂದೆಡೆ ಇಂಗ್ಲೆಂಡ್ ತಂಡದ ಈ ಬಾರಿಯ ವಿಶ್ವಕಪ್ ಅಭಿಯಾನ ಅತ್ಯಂತ ಕಳಪೆಯಾಗಿ ಆರಂಭವಾಗಿದೆ. ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿದ ಇಂಗ್ಲೆಂಡ್ ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸಿದರೂ ನಂತರ ನಡೆದ ಅಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಭಾರೀ ಅಂತರದಿಂದ ಸೋಲು ಅನುಭವಿಸಿದೆ. ಈ ಮೂಲಕ ಈವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಇಂಗ್ಲೆಂಡ್ ಮೂರು ಸೋಲು ಅನುಭವಿಸಿದ್ದು ಒಂದು ಗೆಲುವು ಮಾತ್ರವೇ ಸಾಧಿಸಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಪ್ರಸ್ತುತ 8ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications