IND vs ENG 2ನೇ ಟಿ20; ಫಾರ್ಮ್‌ನಲ್ಲಿದ್ದ ಹೂಡಾ ಬದಲಿಗೆ ಕೊಹ್ಲಿ ಆಯ್ಕೆ; ನೆಟಿಜನ್ಸ್ ಹೇಳಿದ್ದೇನು?

ವಿರಾಟ್ ಕೊಹ್ಲಿ, ರಿಷಭ್ ಪಂತ್, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಇವರಂತಹ ಅನುಭವಿ ಆಟಗಾರರಿಲ್ಲದಿದ್ದರೂ ಮೊದಲ ಟಿ20 ಗೆದ್ದಿದ್ದ ಭಾರತ ತಂಡ 2ನೇ ಟಿ20 ಆಡುವ 11ರ ಬಳಗದಲ್ಲಿ 4 ಬದಲಾವಣೆಗಳನ್ನು ಮಾಡಿರುವುದನ್ನು ನೋಡಿ ಅನೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಶ್ಚರ್ಯಚಕಿತರಾದರು.
ಮಾಜಿ ವೇಗಿ ಜಹೀರ್ ಖಾನ್ ಮತ್ತು ಮಾಜಿ ನಾಯಕ ಕಪಿಲ್ ದೇವ್ ಕೂಡ ಗೆಲುವಿನ ಸಂಯೋಜನೆಯನ್ನು ಬದಲಾವಣೆ ಮಾಡುವುದಕ್ಕೆ ಯಾವುದೇ ಕಾರಣವಿದ್ದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
2ನೇ ಟಿ20 ಪಂದ್ಯದಲ್ಲಿ ಟಾಸ್ ಸೋತ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ನಂತರ ತಂಡದ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದ ಅವರು, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಮತ್ತು ರಿಷಭ್ ಪಂತ್ ಆಡುವ 11ರ ಬಳಗಕ್ಕೆ ಮರಳಿದ್ದಾರೆ ಎಂದು ಹೇಳಿದರು.

2ನೇ ಟಿ20ಯಲ್ಲಿ ಚೊಚ್ಚಲ ಶತಕ ಸಿಡಿಸಿದ್ದರು
ದೀಪಕ್ ಹೂಡಾ, ಇಶಾನ್ ಕಿಶನ್, ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ಅವರು ಮಿಸ್ ಆಗಿರುವ ಆಟಗಾರರು. ಜಸ್ಪ್ರೀತ್ ಬುಮ್ರಾ ಅವರಿಗೆ 2ನೇ ಮತ್ತು 3ನೇ ಟಿ20 ತಂಡದ ಭಾಗವಾಗಿಲ್ಲದ ಕಾರಣ ಅರ್ಶ್‌ದೀಪ್ ಸಿಂಗ್ ಅವರು ಖಂಡಿತವಾಗಿಯೂ ಅವರಿಗೆ ದಾರಿ ಮಾಡಿಕೊಟ್ಟಿದ್ದಾರೆ. ಕಿಶನ್ ಮತ್ತು ಹೂಡಾ ಅವರನ್ನು ಕೈಬಿಟ್ಟಿದ್ದು ಅನೇಕರಿಗೆ ಆಘಾತಕಾರಿಯಾಗಿದೆ, ಏಕೆಂದರೆ ಈ ಇಬ್ಬರು ಉತ್ತಮ ಫಾರ್ಮ್‌ನಲ್ಲಿದ್ದರು.
ಐರ್ಲೆಂಡ್‌ನಲ್ಲಿ ದೀಪಕ್ ಹೂಡಾ ಮೊದಲ ಟಿ20 ಪಂದ್ಯದಲ್ಲೇ 47 ರನ್ ಸಿಡಿಸಿದ ಅವರು ನಂತರ 2ನೇ ಟಿ20ಯಲ್ಲಿ ಚೊಚ್ಚಲ ಶತಕ ಸಿಡಿಸಿದ್ದರು. ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಔಟಾಗುವ ಮೊದಲು ಇನ್ನಿಂಗ್ಸ್‌ನಲ್ಲಿ ಅಗತ್ಯ ರನ್ ಗಳಿಸಿ ತಂಡಕ್ಕೆ ಕೊಡುಗೆ ನೀಡಿದ್ದರು.

ಇಶಾನ್ ಕಿಶನ್ ಕೂಡ ಉತ್ತಮ ಲಯದಲ್ಲಿದ್ದರು
ವಿರಾಟ್ ಕೊಹ್ಲಿ ಬಹಳ ಸಮಯದಿಂದ ಫಾರ್ಮ್‌ನಿಂದ ಹೊರಗುಳಿದಿರುವ ಕಾರಣ, ಇನ್‌ಫಾರ್ಮ್ ಬ್ಯಾಟರ್ ದೀಪಕ್ ಹೂಡಾರನ್ನು ಏಕೆ ಕೈ ಬಿಡಬೇಕು ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಖ್ಯಾತಿಯು ದೊಡ್ಡ ಪಾತ್ರವನ್ನು ವಹಿಸುತ್ತದೆ ಮತ್ತು ಉತ್ತಮ ಫಾರ್ಮ್ ಅಲ್ಲ ಎಂದು ಕೆಲವರು ಹೇಳಿದ್ದಾರೆ.
ಅಂತೆಯೇ, ಇಶಾನ್ ಕಿಶನ್ ಕೂಡ ಉತ್ತಮ ಲಯದಲ್ಲಿದ್ದಾರೆ, ಆದರೆ ಅವರನ್ನು ಕೈಬಿಡಲಾಯಿತು ಮತ್ತು ಇನ್ನಿಂಗ್ಸ್ ತೆರೆಯುವಲ್ಲಿ ರಿಷಭ್ ಪಂತ್ ಅವರಿಗೆ ಅವಕಾಶ ನೀಡಲಾಯಿತು. ಅವರೂ ಈ ಪಂದ್ಯದಲ್ಲಿ ದೊಡ್ಡ ಗಳಿಸಲು ವಿಫಲರಾದರು.

ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ನಿರಾಸೆ ಮೂಡಿಸಿದರು
ಇನ್ನು ಫಾರ್ಮ್‌ನಲ್ಲಿದ್ದ ದೀಪಕ್ ಹೂಡಾ ಬದಲಿಗೆ ಅವಕಾಶ ಪಡೆದಿದ್ದ ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಿ ನಿರಾಸೆ ಮೂಡಿಸಿದರು. ಗ್ಲೆಸನ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತ ಬೀಸಲು ಹೋಗಿ ಡೇವಿಡ್ ಮಲಾನ್‌ಗೆ ಕ್ಯಾಚ್ ನೀಡಿದರು. ಕಳೆದ ಎರಡು ವರ್ಷಗಳಿಂದ ವಿರಾಟ್ ಕೊಹ್ಲಿ ವಿಚಾರದಲ್ಲಿ ಎಲ್ಲವೂ ಉಲ್ಟಾ ಆಗುತ್ತಿದೆ. ಇದು ವಿರಾಟ್ ಕೊಹ್ಲಿ ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸುವಂತದ್ದಾಗಿದೆ.
ದೀಪಕ್ ಹೂಡಾಗೆ ಇನ್ನೂ ಕೆಲವು ಪಂದ್ಯಗಳನ್ನು ಆಡಲು ಅವಕಾಶ ನೀಡಬೇಕಾಗಿತ್ತು, ಕೈ ಬಿಟ್ಟಿರುವುದು ಅವರ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಬಹುದು ಎಂದು ಸಚಿನ್ ಭಾಟಿ ಟ್ವೀಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಭಾರಿ ಒತ್ತಡದಲ್ಲಿದ್ದಾರೆ
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೇಗೆ ಆಡುತ್ತಾರೆ ಎಂಬುದು ಕುತೂಹಲಕಾರಿ ಇತ್ತು. ಅವರು ಈ ಪಂದ್ಯದಲ್ಲೂ ರನ್‌ಗಾಗಿ ಪರದಾಡಿದರು. ರನ್ ಗಳಿಸಲು ವಿಫಲರಾದ ವಿರಾಟ್ ಕೊಹ್ಲಿ ಬದಲಿಗೆ ದೀಪಕ್ ಹೂಡಾ ಮೂರನೇ ಪಂದ್ಯದಲ್ಲಿ ಮತ್ತೆ ಮರಳುತ್ತಾರಾ? ಎಂಬುದಕ್ಕೆ ಕಾಲವೇ ಉತ್ತರಿಸುತ್ತದೆ. ಒಂದಂತೂ ಖಚಿತವಾಗಿದ್ದು, ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಭಾರಿ ಒತ್ತಡದಲ್ಲಿದ್ದಾರೆ ಮತ್ತು ಖಂಡಿತವಾಗಲೂ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications