IND vs ENG: ಮತ್ತೆ ನಿರಾಸೆ ಮೂಡಿಸಿದ ವಿರಾಟ್ ಕೊಹ್ಲಿ; ಹೀಗಾದರೆ ಭವಿಷ್ಯದ ಕಥೆಯೇನು?

ಮ್ಯಾಂಚೆಸ್ಟರ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಏಕದಿನ ಪಂದ್ಯದಲ್ಲಿ ಕೇವಲ 17 ರನ್ ಗಳಿಸಿ ಒಂದು ರನ್ ಮಷಿನ್ ಎನಿಸಿಕೊಂಡಿದ್ದ ವಿರಾಟ್ ಕೊಹ್ಲಿ ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ಮುಂದುವರೆಸಿದರು. ಭಾರತದ ಸ್ಟಾರ್ ವಿಕೆಟ್ ಪತನವಾಗುತ್ತಿದ್ದಂತೆ ಪಂದ್ಯ ಸೋಲುವುದರೊಂದಿಗೆ ಸರಣಿಯು ಕೈತಪ್ಪಿ ಹೋಗುವ ಆತಂಕ ಎದುರಾಗಿದೆ.
ಓಲ್ಡ್ ಟ್ರಾಫರ್ಡ್‌ನಲ್ಲಿ ತುಂಬಿದ ಕ್ರೀಡಾಂಗಣದಲ್ಲಿ ಆತಿಥೇಯ ಇಂಗ್ಲೆಂಡ್ ತಂಡದ ಎಡಗೈ ವೇಗಿ ರೀಸ್ ಟೋಪ್ಲೆ ಅವರ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕೀಪರ್ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿ ಸಪ್ಪೆ ಮೊರೆ ಹೊತ್ತು ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡು ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ ಕೇವಲ 32 ರನ್ ಗಳಿಸಲು ಸಾಧ್ಯವಾಗಿದೆ.
ಆರಂಭದಲ್ಲಿ ವಿರಾಟ್ ಕೊಹ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದರು, ಆದರೆ ಆರಂಭದ ನಂತರ ಕುಸಿದರು. ರೀಸ್ ಟೋಪ್ಲಿ ಎಸೆದ ಸುಂದರ ಎಸೆತವನ್ನು ವಿರಾಟ್ ಕೊಹ್ಲಿ ಮುಂದಕ್ಕೆ ಬಾಗಿ ರಕ್ಷಿಸಲು ನೋಡಿದರು, ಆದರೆ ಚೆಂಡು ಬ್ಯಾಟ್ ಹೊರಗಿನ ಅಂಚನ್ನು ಸವರಿಕೊಂಡು ಹೋಗಿ ಜೋಸ್ ಬಟ್ಲರ್ ಗ್ಲೌಸ್ ಸೇರಿತು ಮತ್ತು ಅದನ್ನು ಹಿಡಿಯುವಲ್ಲಿ ಅವರು ಯಾವದೇ ತಪ್ಪು ಮಾಡಲಿಲ್ಲ.

ಮಸುಕಾದ ವಿರಾಟ್ ಕೊಹ್ಲಿ ಕ್ರಿಕೆಟ್ ಭವಿಷ್ಯ
ಕಳೆದ ಎರಡೂವರೆ ವರ್ಷಗಳಿಂದ ಶತಕ ಗಳಿಸಲು ಪರದಾಡುತ್ತಿರುವ ವಿರಾಟ್ ಕೊಹ್ಲಿ, ಐಪಿಎಲ್ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ಮುಂದುವರೆಸುತ್ತಲೇ ಇದ್ದಾರೆ. ಮುಂಬರುವ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ದೃಷ್ಟಿಯಿಂದ ವಿರಾಟ್ ಕೊಹ್ಲಿ ಮತ್ತೆ ಬ್ಯಾಟಿಂಗ್ ಫಾರ್ಮ್ ಕಂಡುಕೊಳ್ಳಬೇಕಿದೆ.
ಜುಲೈ ಅಂತ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಕೊಹ್ಲಿ, ಈ ವೇಳೆಯಲ್ಲಿ ಮಾನಸಿಕವಾಗಿ ಸಿದ್ಧರಾಗಬೇಕಿದೆ. ಇದೇ ಬ್ಯಾಟಿಂಗ್ ಫಾರ್ಮ್ ಮುಂದುವರೆದರೆ ಅವರ ಕ್ರಿಕೆಟ್ ಭವಿಷ್ಯಕ್ಕೆ ಹೊಡೆತ ಬೀಳಲಿದೆ.

4 ಓವರ್‌ಗಳು ಬಾಕಿ ಇರುವಂತೆಯೇ 259 ರನ್‌ಗಳಿಗೆ ಆಲೌಟ್
ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಪಂದ್ಯಕ್ಕೆ ಬರುವುದಾದರೆ, ಸರಣಿಯ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 4/24 ವೃತ್ತಿಜೀವನದ ಅತ್ಯಂತ ಶಿಸ್ತುಬದ್ಧ ಬೌಲಿಂಗ್‌ನಿಂದ ಭಾರತವು ಇಂಗ್ಲೆಂಡ್ ಅನ್ನು 4 ಓವರ್‌ಗಳು ಬಾಕಿ ಇರುವಂತೆಯೇ 259 ರನ್‌ಗಳಿಗೆ ಆಲೌಟ್ ಮಾಡಿದೆ.
ನಾಯಕ ಜೋಸ್ ಬಟ್ಲರ್ ಇಂಗ್ಲೆಂಡ್ ಪರ 80 ಎಸೆತಗಳಲ್ಲಿ 60 ರನ್ ಗಳಿಸಿ ಟಾಪ್ ಸ್ಕೋರ್ ಎನಿಸಿದರು. ಆದರೆ ಗುಜರಾತ್ ಮೂಲದ ಬೌಲಿಂಗ್ ಅಬ್ಬರದ ಮುಂದೆ ಆತಿಥೇಯರು ಮಂಕಾದರು. ಪಾಂಡ್ಯ ಪಂದ್ಯದ ಮೊದಲಾರ್ಧದಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್‌ನಿಂದ ಪ್ರಾಬಲ್ಯ ಸಾಧಿಸಿದರು ಮತ್ತು ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಎದುರಾಳಿಗಳಿಗೆ ಎಚ್ಚರಿಕೆ ನೀಡಿದರು.
ಗಾಯಗೊಂಡ ಜಸ್ಪ್ರೀತ್ ಬುಮ್ರಾ ಅವರ ಸ್ಥಾನದಲ್ಲಿ ಆಡುತ್ತಿರುವ ಮೊಹಮ್ಮದ್ ಸಿರಾಜ್ ಅವರು ದಿನದ ಮೂರನೇ ಎಸೆತದಲ್ಲಿ ಜಾನಿ ಬೈರ್‌ಸ್ಟೋವ್ ಅವರನ್ನು ಔಟ್ ಮಾಡಿ ಭಾರತಕ್ಕೆ ಆರಂಭದಲ್ಲಿಯೇ ಭಾರೀ ಆತ್ಮವಿಶ್ವಾಸವನ್ನು ಹೆಚ್ಚಿಸಿದರು.

ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮ ಜೊತೆಯಾಟ
ಇಂಗ್ಲೆಂಡ್ ಓಪನರ್ ಜಾನಿ ಬೈರ್‌ಸ್ಟೋವ್ ಅವರು ಲೆಗ್-ಸೈಡ್‌ನಲ್ಲಿ ಆಡಲು ಯೋಚಿಸಿದಾಗ, ಬ್ಯಾಟ್ ಅವರ ಕೈಯಲ್ಲಿ ತಿರುಗಿತು ಮತ್ತು ಬಾಲ್ ಮಿಡ್-ಆಫ್‌ನಲ್ಲಿ ಪ್ರಮುಖ ಅಂಚನ್ನು ಅನುಸರಿಸಿ ಶ್ರೇಯಸ್ ಅಯ್ಯರ್ ಕೈ ಸೇರಿತು. ಅನಂತರ ಸಿರಾಜ್ ಅವರು ಅಪಾಯಕಾರಿ ಬ್ಯಾಟ್ಸ್‌ಮನ್ ಜೋ ರೂಟ್‌ಗೆ ಪೆವಿಲಿಯನ್ ದಾರಿ ತೋರಿಸಿದರು.
ಸದ್ಯ ಭಾರತ 260 ಗುರಿ ಬೆನ್ನತ್ತಿದ್ದು, 27 ಓವರ್‌ಗಳಲ್ಲಿ 137 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. ಕ್ರೀಸ್‌ನಲ್ಲಿ ರಿಷಭ್ ಪಂತ್ (35) ಮತ್ತು ಹಾರ್ದಿಕ್ ಪಾಂಡ್ಯ (45) ರನ್ ಗಳಿಸಿ ಉತ್ತಮ ಜೊತೆಯಾಟ ನೀಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications