IND vs IRE 1st T20: ಚೊಚ್ಚಲ ಟಿ20 ಪಂದ್ಯ ಆಡುತ್ತಾರಾ ರಿಂಕು, ಜಿತೇಶ್?; ಸಂಭಾವ್ಯ ಆಡುವ 11 ಬಳಗ
ಶುಕ್ರವಾರ, ಆಗಸ್ಟ್ 18ರಂದು ಡಬ್ಲಿನ್‌ನ ದಿ ವಿಲೇಜ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಭಾರತ ಮತ್ತು ಆತಿಥೇಯ ಐರ್ಲೆಂಡ್ ತಂಡಗಳು ಮುಖಾಮುಖಿಯಾಗಲು ಸಜ್ಜಾಗಿವೆ.
ಭಾರತ ತಂಡವು ಹೆಚ್ಚಿನ ಯುವ ಆಟಗಾರರನ್ನು ಹೊಂದಿದ್ದು, ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾ ಪ್ರವಾಸಿ ತಂಡವನ್ನು ಮುನ್ನಡೆಸಲಿದ್ದಾರೆ. ಸುದೀರ್ಘ ಗಾಯದ ನಂತರ ಜಸ್ಪ್ರೀತ್ ಬುಮ್ರಾ ಪುನರಾಗಮನ ಮಾಡುತ್ತಿದ್ದಾರೆ ಮತ್ತು 2023ರ ಏಷ್ಯಾ ಕಪ್ ಹಾಗೂ 2023ರ ವಿಶ್ವಕಪ್‌ಗೆ ಮೊದಲು ಅವರು ಹೊಂದಿರುವ ಫಿಟ್‌ನೆಸ್ ಮತ್ತು ಕೌಶಲ್ಯವನ್ನು ನೋಡಬೇಕಿದೆ.

ಇನ್ನು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರವಾಗಿ ಅದ್ಭುತ ಪ್ರದರ್ಶನದ ನಂತರ ರಿಂಕು ಸಿಂಗ್ ಭಾರತ ರಾಷ್ಟ್ರೀಯ ತಂಡದಿಂದ ಚೊಚ್ಚಲ ಕರೆ ಸ್ವೀಕರಿಸಿದ್ದಾರೆ.
ರಿಂಕು ಸಿಂಗ್ ಅವರು ಕೆಕೆಆರ್ ತಂಡದ ಪರ ಪ್ರಮುಖ ರನ್ ಗಳಿಸಿದ ಆಟಗಾರನಾಗಿದ್ದರು ಮತ್ತು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಲು ನೆರವಾದರು. ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತದ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.
ಐಪಿಎಲ್‌ನ ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಜಿತೇಶ್ ಶರ್ಮಾಗೆ ಭಾರತ ತಂಡದ ಪರ ಆಡಲು ಚೊಚ್ಚಲ ಅವಕಾಶ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸಂಜು ಸ್ಯಾಮ್ಸನ್ ಹೆಚ್ಚಿನ ಅವಕಾಶಗಳನ್ನು ಪಡೆದರು. ಆದರೆ, ತಂಡದ ಮ್ಯಾನೇಜ್‌ಮೆಂಟ್ ಅವರ ಮೇಲಿಟ್ಟ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಅವರು ವಿಫಲರಾದರು. ವೈಟ್‌ಬಾಲ್ ಸರಣಿಗಳಲ್ಲಿ ಏಕೈಕ ಅರ್ಧಶತಕ ಮಾತ್ರ ಗಳಿಸಿದರು. ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೊದಲ ಆಯ್ಕೆಯ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದಾರೆ.
ಮತ್ತೊಂದೆಡೆ, ಐರ್ಲೆಂಡ್ ತಂಡದ ಕುರಿತು ಹೇಳುವುದಾದರೆ, ಅನುಭವಿ ಬ್ಯಾಟರ್ ಪಾಲ್ ಸ್ಟಿರ್ಲಿಂಗ್ ನಾಯಕತ್ವದಲ್ಲಿ ಪವರ್-ಪ್ಯಾಕ್ಡ್ ತಂಡವನ್ನು ಹೊಂದಿದ್ದಾರೆ. ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್ ಮತ್ತು ಜಾರ್ಜ್ ಡಾಕ್ರೆಲ್ ಅವರು ಯಾವುದೇ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಬಲ್ಲರು. ಆತಿಥೇಯ ತಂಡದ ಮಧ್ಯಮ ಕ್ರಮಾಂಕವು ಬಲಾಢ್ಯವಾಗಿ ಕಾಣುತ್ತಿದೆ.
ಐಪಿಎಲ್‌ನಲ್ಲಿ ಜೋಶ್ ಲಿಟಲ್ ಅವರು ಭಾರತೀಯ ಆಟಗಾರರ ವಿರುದ್ಧ ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅವರು ತಮ್ಮ ಎಲ್ಲಾ ಅನುಭವವನ್ನು ತರಲಿದ್ದಾರೆ.
ಮೊದಲ ಟಿ20 ಪಂದ್ಯಕ್ಕೆ ಭಾರತ vs ಐರ್ಲೆಂಡ್ ಸಂಭಾವ್ಯ ಆಡುವ 11ರ ಬಳಗ
ಭಾರತ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ರವಿ ಬಿಷ್ಣೋಯ್, ಮುಖೇಶ್ ಕುಮಾರ್.
ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಗರೆಥ್ ಡೆಲಾನಿ, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಜೋಶ್ ಲಿಟಲ್, ಕ್ರೇಗ್ ಯಂಗ್, ಬ್ಯಾರಿ ಮೆಕಾರ್ಥಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications