Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs IRE 2nd T20: ಗೆಲುವಿನ ಒತ್ತಡದಲ್ಲಿ ಟೀಮ್ ಇಂಡಿಯಾ; ವೈಭವ್ ಸೂರ್ಯವಂಶಿಗೆ ಸಿಗುತ್ತಾ ಚಾನ್ಸ್‌?

ಐಸಿಸಿ ಟಿ20 ವಿಶ್ವಕಪ್ 2026 ಜಯಿಸಿದ ಸಂಭ್ರಮದಲ್ಲಿದ್ದ ಟೀಮ್ ಇಂಡಿಯಾಗೆ ಐರ್ಲೆಂಡ್ ನೆಲದಲ್ಲಿ ಭಾರಿ ಆಘಾತವಾಗಿದೆ. ಟಿ20 ತಂಡದ ನೂತನ ನಾಯಕ ಶ್ರೇಯಸ್ ಅಯ್ಯರ್ ಅವರ ಆರಂಭಕ್ಕೆ ಪೆಟ್ಟು ಬಿದ್ದಿದೆ. ಈ ಸೋಲಿನ ಕಹಿಯನ್ನು ಮರೆತು ಭರ್ಜರಿ ಕಮ್‌ಬ್ಯಾಕ್‌ ಮಾಡುವ ಆಸೆಯನ್ನು ಭಾರತ ತಂಡ ಇಟ್ಟುಕೊಂಡಿದೆ. ಭಾನುವಾರ ಭಾರತ ಹಾಗೂ ಐರ್ಲೆಂಡ್‌ ನಡುವಣ ಎರಡನೇ ಟಿ20 ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ನಗೆ ಬೀರುವುದು ಅನಿವಾರ್ಯವಾಗಿದೆ.

ಐರ್ಲೆಂಡ್‌ ಪ್ರವಾಸದಲ್ಲಿ ಎರಡು ಪಂದ್ಯಗಳ ಟಿ20 ಸರಣಿ ಆಯೋಜಿಸಲಾಗಿದೆ. ಹೀಗಾಗಿ ಭಾನುವಾರ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿ ಸರಣಿಯನ್ನು ಸಮಬಲ ಸಾಧಿಸುವ ಆಸೆಯನ್ನು ಹೊಂದಿದೆ. ಮೊದಲ ಪಂದ್ಯದಲ್ಲಿ ಕಳಪೆ ಆಟ ಮತ್ತು ತಪ್ಪು ತಂತ್ರಗಾರಿಕೆಗಳಿಂದ ಎದುರಾದ ಈ ಸೋಲು ತಂಡದ ನಾಯಕತ್ವ ಮಾತ್ರವಲ್ಲದೆ ಹೊಸ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ಮೇಲೂ ಒತ್ತಡ ಹೆಚ್ಚಿಸಿದೆ.

IND vs IRE 2nd T20

ಭಾರತ ಕ್ರಿಕೆಟ್ ಇತಿಹಾಸದಲ್ಲೇ ಐರ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸೋಲುಂಡಿರುವುದು ಇದೇ ಮೊದಲು. ಟೀಮ್ ಇಂಡಿಯಾ ಎರಡನೇ ಟಿ20 ಪಂದ್ಯಕ್ಕಾಗಿ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ.

ವೈಭವ್ ಸೂರ್ಯವಂಶಿಗೆ ಲಕ್ಕಿ ಚಾನ್ಸ್?

ಮೊದಲ ಟಿ20 ಯಲ್ಲಿ ಭಾರತದ ಬ್ಯಾಟಿಂಗ್ ಪ್ರದರ್ಶನವು ಅತ್ಯಂತ ಕಳಪೆಯಾಗಿತ್ತು. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರನ್ನು ಹೊರತು ಪಡಿಸಿದರೆ ಬೇರೆಯಾವೊಬ್ಬ ಬ್ಯಾಟರ್‌ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ತಂಡದ ಸ್ಟಾರ್ ಆಟಗಾರರು ಕೇವಲ ಒಂದಕ್ಕಿ ಮೊತ್ತಕ್ಕೆ ಔಟ್ ಆದರು. ಇದರಿಂದಾಗಿ ಭಾರತದ ಬ್ಯಾಟಿಂಗ್ ಲೈನ್-ಅಪ್ ಕಂಗೆಟ್ಟಿತ್ತು.

IND vs IRE T20: ಭಾರತ-ಐರ್ಲೆಂಡ್ ಪಂದ್ಯದ ಸಮಯ ಹಠಾತ್ ಬದಲಾವಣೆ; ಇಲ್ಲಿದೆ ಅಸಲಿ ಕಾರಣ

IND vs IRE T20: ಭಾರತ-ಐರ್ಲೆಂಡ್ ಪಂದ್ಯದ ಸಮಯ ಹಠಾತ್ ಬದಲಾವಣೆ; ಇಲ್ಲಿದೆ ಅಸಲಿ ಕಾರಣ

ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲರ ಗಮನ ಸೆಳೆದಿರುವ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರಿಗೆ ತಂಡದಲ್ಲಿ ಅವಕಾಶ ನೀಡಬೇಕೆಂಬ ವಾದ ಗಟ್ಟಿಯಾಗುತ್ತಿದೆ. ಸದ್ಯ ಭಾರತ ತಂಡದ ಕೀಪರ್ ಆಟಗಾರರಾದ ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್ ಅವರಲ್ಲಿ ಒಬ್ಬರನ್ನು ಕೈಬಿಡುವುದು ಕಷ್ಟ. ಇನ್ನು ಶ್ರೇಯಸ್ ಅಯ್ಯರ್ ಈ ನಿಟ್ಟಿನಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳಬೇಕಿದೆ.

ಪ್ರಿನ್ಸ್ ಯಾದವ್‌ಗೆ ಅವಕಾಶ?

ಮೊದಲ ಟಿ20 ಪಂದ್ಯದಲ್ಲಿ ವೇಗಿ ಪ್ರಸಿದ್ಧ್ ಕೃಷ್ಣ ರನ್‌ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದರು. ಇವರು ತಮ್ಮ ನಾಲ್ಕು ಓವರ್‌ಗಳ ದಾಳಿಯಲ್ಲಿ ಯಾವುದೇ ಯಶಸ್ಸು ಕಾಣದೆ ಬರೋಬ್ಬರಿ 57 ರನ್‌ಗಳನ್ನು ಧಾರೆ ಎರೆದಿದ್ದು ಸೋಲಿಗೆ ಮುಖ್ಯ ಕಾರಣವಾಯಿತು. ಹೀಗಾಗಿ ಇವರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಇನ್ನು ಎರಡನೇ ಟಿ20 ಪಂದ್ಯದಲ್ಲಿ ಪ್ರಸಿದ್ಧ್ ಬದಲಿಗೆ ಪ್ರಿನ್ಸ್‌ ಯಾದವ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಅರ್ಷ್‌ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಬಿಗುವಿನ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಬೇಕಿದೆ.

IND vs IRE 2nd T20

ಎರಡನೇ ಟಿ20 ಪಂದ್ಯದಲ್ಲಿ ಭಾರತ ಸ್ಪಿನ್ ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ವಾಷಿಂಗ್ಟನ್ ಸುಂದರ್ ಮೊದಲ ಪಂದ್ಯದಲ್ಲಿ ಕೇವಲ ಒಂದು ಓವರ್ ಬೌಲಿಂಗ್ ಮಾಡಿ 19 ರನ್ ಬಿಟ್ಟುಕೊಟ್ಟಿದ್ದರು. ಇವರ ಸ್ಥಾನದಲ್ಲಿ ಮತ್ತೊಬ್ಬ ಸ್ಪಿನ್ನರ್ ರವಿ ಬಿಷ್ಣೋಯ್ ಅವರಿಗೆ ಸ್ಥಾನ ಲಭಿಸಿದರೆ ಉತ್ತಮ.

ಶ್ರೇಯಸ್ ಪಡೆಗೆ ಶಾಕ್ ನೀಡಿದ ಐರ್ಲೆಂಡ್: ಸೋಲಿಗೆ ಇವೆ 5 ಕಾರಣ

ಶ್ರೇಯಸ್ ಪಡೆಗೆ ಶಾಕ್ ನೀಡಿದ ಐರ್ಲೆಂಡ್: ಸೋಲಿಗೆ ಇವೆ 5 ಕಾರಣ

ಐರ್ಲೆಂಡ್ ಮೊದಲ ಪಂದ್ಯದ ಐತಿಹಾಸಿಕ ಗೆಲುವಿನ ಯಶಸ್ಸಿನಲ್ಲಿದೆ. ಆದರೂ ಭಾರತ ತಂಡ ಪುಟಿದೆದ್ದು ಬರುವ ಸಂಪೂರ್ಣ ಶಕ್ತಿ ಹೊಂದಿದೆ ಎಂಬುದನ್ನು ಐರ್ಲೆಂಡ್ ಕೂಡ ಅರಿತಿದೆ. ಐರ್ಲೆಂಡ್ ತಂಡದ ನಾಯಕ ಲೋರ್ಕನ್ ಟಕರ್ ಹಾಗೂ ಗರೆಥ್ ಡೆಲಾನಿ ಮೊದಲ ಪಂದ್ಯದಲ್ಲಿ ನೀಡಿದ ಪ್ರದರ್ಶನವನ್ನು ಮತ್ತೊಮ್ಮೆ ನೀಡುವ ಉತ್ಸಾಹದಲ್ಲಿದ್ದಾರೆ. ಇನ್ನು ಭಾರತೀಯ ಮೂಲದ ಜೈ ಮುಂದ್ರಾ ಮತ್ತು ಮ್ಯಾಥ್ಯೂ ಹೋಲಾರ್ಡ್ ತಮ್ಮ ಬಿಗುವಿನ ದಾಳಿಯ ಮೂಲಕ ಪ್ರವಾಸಿ ಬ್ಯಾಟರ್‌ಗಳನ್ನು ಕಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಎರಡನೇ ಟಿ20 ಪಂದ್ಯದಲ್ಲಿ ಗೆಲುವು ಯಾರ ಪಾಲಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.


ಪಂದ್ಯ ಆರಂಭವಾಗುವ ಸಮಯ: ಸಂಜೆ 6ಕ್ಕೆ
ಪಂದ್ಯದ ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

Story first published: Saturday, June 27, 2026, 19:39 [IST]
Other articles published on Jun 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+