IND vs IRE 2nd T20: ಐರ್ಲೆಂಡ್ ವಿರುದ್ಧ ಸರಣಿ ಗೆಲ್ಲುವ ತವಕದಲ್ಲಿ ಬುಮ್ರಾ ಪಡೆ; ಉಭಯ ತಂಡಗಳ ಸಂಭಾವ್ಯ ಬಳಗ
ಭಾನುವಾರ, ಆಗಸ್ಟ್ 20ರಂದು ಡಬ್ಲಿನ್‌ನ ಮಲಾಹೈಡ್‌ನಲ್ಲಿ ಆತಿಥೇಯ ಐರ್ಲೆಂಡ್ ಮತ್ತು ಪ್ರವಾಸಿ ಭಾರತ ತಂಡಗಳು ಎರಡನೇ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಶುಕ್ರವಾರ ಸಂಜೆ ಡಬ್ಲಿನ್‌ನಲ್ಲಿ ನಡೆದ ಮಳೆ-ಬಾಧಿತ ಮೊದಲ ಟಿ20 ಪಂದ್ಯದಲ್ಲಿ ಡಕ್ವರ್ತ್-ಲೂಯಿಸ್ ವಿಧಾನದ ಮೂಲಕ ಭಾರತ ತಂಡ 2 ರನ್‌ಗಳಿಂದ ಗೆಲುವು ಸಾಧಿಸಿದ್ದು, ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ಮೊದಲ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳಿಂದ ಅತ್ಯುತ್ತಮ ಪ್ರದರ್ಶನ ಮೂಡಿಬಂದಿದ್ದು, ಕರ್ಟಿಸ್ ಕ್ಯಾಂಫರ್ ಮತ್ತು ಬ್ಯಾರಿ ಮೆಕಾರ್ಥಿ ಐರ್ಲೆಂಡ್ ತಂಡವನ್ನು ಗೌರವಾನ್ವಿತ ಮೊತ್ತಕ್ಕೆ ಕೊಂಡೊಯ್ಯುವಲ್ಲಿ ಸಹಾಯವಾದರು.
ಬೆನ್ನುನೋವಿನಿಂದ ಚೇತರಿಸಿಕೊಂಡು 11 ತಿಂಗಳ ನಂತರ ಪುನರಾಗಮನ ಮಾಡಿರುವ ಜಸ್ಪ್ರೀತ್ ಬುಮ್ರಾ ಅವರು ತಮ್ಮ ಮಾರಕ ಬೌಲಿಂಗ್ ಪ್ರದರ್ಶನದಿಂದ ಏಷ್ಯಾ ಕಪ್ ಮತ್ತು ವಿಶ್ವಕಪ್‌ಗೂ ಮುನ್ನ ಎದುರಾಳಿ ತಂಡಗಳಿಗೆ ದೊಡ್ಡ ಎಚ್ಚರಿಕೆ ನೀಡಿದರು.
ಜಸ್ಪ್ರೀತ್ ಬುಮ್ರಾ ಒಂದು ವರ್ಷದ ಹಿಂದೆ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆದ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಕೊನೆಯದಾಗಿ ಭಾರತ ತಂಡಕ್ಕಾಗಿ ಆಡಿದ್ದರು.
ಅಲ್ಲದೆ, ಪ್ರಸಿದ್ಧ್ ಕೃಷ್ಣ ಮತ್ತು ರವಿ ಬಿಷ್ಣೋಯ್ ಕೂಡ ತಲಾ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತ ತಂಡಕ್ಕೆ ನೆರವಾದರು. ಇನ್ನು ಅರ್ಶ್‌ದೀಪ್ ಸಿಂಗ್ 35 ರನ್‌ಗಳನ್ನು ಬಿಟ್ಟುಕೊಟ್ಟು ಕೇವಲ ಒಂದು ವಿಕೆಟ್ ಪಡೆಯುವ ಮೂಲಕ ದುಬಾರಿಯಾದರು.
ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಪೆವಿಲಿಯನ್‌ಗೆ ಹಿಂತಿರುಗಿದ ನಂತರ, ತಿಲಕ್ ವರ್ಮಾ ಅವರು ಕ್ರೇಗ್ ಯಂಗ್ ಬೌಲಿಂಗ್‌ನಲ್ಲಿ ತಮ್ಮ ಮೊದಲ ಗೋಲ್ಡನ್ ಡಕ್‌ಗೆ ನೋಂದಾಯಿಸಿಕೊಂಡರು.
ಮತ್ತೊಂದೆಡೆ, ಪಾಲ್ ಸ್ಟಿರ್ಲಿಂಗ್ ನಾಯಕತ್ವದ ಐರ್ಲೆಂಡ್ ತಂಡವು ಆ ಮೊದಲ ಪಂದ್ಯದಲ್ಲಿ ಸಾಕಷ್ಟು ಧನಾತ್ಮಕ ಅಂಶಗಳನ್ನು ಹೊಂದಿತ್ತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಎಡವಿದರೂ, ಕೆಳ ಕ್ರಮಾಂಕದ ಬ್ಯಾಟರ್ ಬ್ಯಾರಿ ಮೆಕಾರ್ಥಿ ತಮ್ಮ ತಂಡಕ್ಕಾಗಿ ಟಿ20 ಕ್ರಿಕೆಟ್‌ನಲ್ಲಿ ತನ್ನ ಮೊದಲ ಅರ್ಧಶತಕವನ್ನು ಗಳಿಸುವ ಮೂಲಕ ಉತ್ತಮ ಮೊತ್ತಕ್ಕೆ ಕೊಡುಗೆ ನೀಡಿದರು.
ಪಂದ್ಯದ ದಿನಾಂಕ ಮತ್ತು ಸಮಯ:
ಭಾರತ vs ಐರ್ಲೆಂಡ್ ಟಿ20 ಸರಣಿಯ ಎರಡನೇ ಪಂದ್ಯವು ಭಾನುವಾರ, ಆಗಸ್ಟ್ 20ರಂದು ಡಬ್ಲಿನ್‌ನ ಮಲಾಹೈಡ್‌ನ ದಿ ವಿಲೇಜ್‌ನಲ್ಲಿ ಭಾರತೀಯ ಕಾಲಮಾನ ಸಂಜೆ 7.30 ಗಂಟೆಗೆ ಆರಂಭವಾಗಲಿದೆ.
ಭಾರತ vs ಐರ್ಲೆಂಡ್ ಟಿ20 ಸರಣಿ ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ
ಭಾರತ vs ಐರ್ಲೆಂಡ್ ಟಿ20 ಸರಣಿಯ ಎರಡನೇ ಪಂದ್ಯವು ಭಾರತದಲ್ಲಿ News18 ಟಿವಿ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಿದ್ದರೆ, JioCinema ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.
2ನೇ ಟಿ20 ಪಂದ್ಯಕ್ಕಾಗಿ ಭಾರತ vs ಐರ್ಲೆಂಡ್ ಸಂಭಾವ್ಯ ಅಡುವ 11ರ ಬಳಗ
ಭಾರತ: ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಜಸ್ಪ್ರೀತ್ ಬುಮ್ರಾ (ನಾಯಕ), ಅವೇಶ್ ಖಾನ್, ರವಿ ಬಿಷ್ಣೋಯ್.
ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡಿ ಬಾಲ್ಬಿರ್ನಿ, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications