For Quick Alerts
ALLOW NOTIFICATIONS  
For Daily Alerts
 

IND vs IRE: ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಟ ದಾಖಲೆ ಬರೆದ ಭುವನೇಶ್ವರ್ ಕುಮಾರ್

IND vs IRE: Bhuvneshwar Kumar Has Written A Special Record In T20 Cricket History

ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರು ಟಿ20 ಸ್ವರೂಪದ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಭಾನುವಾರ ಡಬ್ಲಿನ್‌ನ ಮಲಾಹೈಡೆ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಈ ಸಾಧನೆ ಮಾಡಿದರು.

ಭುವನೇಶ್ವರ್ ಕುಮಾರ್ ಇನ್ನಿಂಗ್ಸ್‌ನ ಐದನೇ ಎಸೆತದಲ್ಲಿ ಐರ್ಲೆಂಡ್ ನಾಯಕ ಆಂಡ್ರ್ಯೂ ಬಲ್ಬಿರ್ನಿ ಅವರನ್ನು ಔಟ್ ಮಾಡಿದರು. ಈ ಮೂಲಕ ಟಿ20 ಪಂದ್ಯಗಳಲ್ಲಿ ಅವರ 34ನೇ ಪವರ್‌ಪ್ಲೇ ವಿಕೆಟ್ ಅನ್ನು ಪೂರ್ಣಗೊಳಿಸಿದರು. ಈ ವಿಕೆಟ್‌ನೊಂದಿಗೆ ಭಾರತದ ವೇಗಿ ಭುವನೇಶ್ವರ್ ಕುಮಾರ್ ಅವರು ತಲಾ 33 ಪವರ್‌ಪ್ಲೇ ವಿಕೆಟ್‌ಗಳನ್ನು ಪಡೆದಿರುವ ವೆಸ್ಟ್ ಇಂಡೀಸ್‌ನ ಮಾಜಿ ಸ್ಪಿನ್ನರ್ ಸ್ಯಾಮ್ಯುಯೆಲ್ ಬದ್ರಿ ಮತ್ತು ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಅವರನ್ನು ಹಿಂದಿಕ್ಕಿದರು.

ದೀಪಕ್ ಹೂಡಾ, ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್

ದೀಪಕ್ ಹೂಡಾ, ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್

ಭಾನುವಾರ ಇಲ್ಲಿ ಮಲಾಹೈಡೆ ಕ್ರಿಕೆಟ್ ಕ್ಲಬ್ ಗ್ರೌಂಡ್‌ನಲ್ಲಿ ನಡೆದ ಎರಡು ಪಂದ್ಯಗಳ ಸರಣಿಯ ಮಳೆ ಬಾಧಿತ ಮೊದಲ ಟಿ20 ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ದೀಪಕ್ ಹೂಡಾ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅವರ ಅಮೋಘ ಪ್ರದರ್ಶನ ಟೀಮ್ ಇಂಡಿಯಾವನ್ನು ಐರ್ಲೆಂಡ್ ವಿರುದ್ಧ ಏಳು ವಿಕೆಟ್‌ಗಳ ಅಂತರದಲ್ಲಿ ಗೆಲ್ಲುವಂತೆ ಮಾಡಿತು.

ಭಾರೀ ಮಳೆಯ ನಂತರ, ಪರಿಷ್ಕೃತ ಷರತ್ತುಗಳೊಂದಿಗೆ ನಿಗದಿತ 20 ಓವರ್‌ಗಳ ಪಂದ್ಯವನ್ನು ಪ್ರತಿ ತಂಡಕ್ಕೆ 12 ಓವರ್‌ಗಳಿಗೆ ಇಳಿಸಲಾಯಿತು. ಪವರ್‌ಪ್ಲೇ ಒಂದರಿಂದ ನಾಲ್ಕು ಓವರ್‌ಗಳವರೆಗೆ, ಕೇವಲ ಮೂರು ಬೌಲರ್‌ಗಳೊಂದಿಗೆ ಎರಡು ಓವರ್‌ಗಳನ್ನು ಬೌಲ್ ಮಾಡಬೇಕು ಮತ್ತು ಇಬ್ಬರು ಬೌಲರ್‌ಗಳು ಮೂರು ಓವರ್‌ಗಳನ್ನು ಬೌಲ್ ಮಾಡಬಹುದಾಗಿತ್ತು.

ಮೂರು ಓವರ್‌ಗಳ ಸ್ಪೆಲ್‌ನಲ್ಲಿ 16 ರನ್‌ ನೀಡಿದ ಭುವಿ

ಮೂರು ಓವರ್‌ಗಳ ಸ್ಪೆಲ್‌ನಲ್ಲಿ 16 ರನ್‌ ನೀಡಿದ ಭುವಿ

ಭುವನೇಶ್ವರ್ ಕುಮಾರ್ ಅವರು ತಮ್ಮ ಕೋಟಾದ ಮೂರು ಓವರ್‌ಗಳ ಸ್ಪೆಲ್‌ನಲ್ಲಿ 16 ರನ್‌ಗಳನ್ನು ಬಿಟ್ಟುಕೊಟ್ಟರು ಮತ್ತು ಒಂದು ಪ್ರಮುಖ ವಿಕೆಟ್ ಪಡೆದರು.

ದೀಪಕ್ ಹೂಡಾ 29 ಎಸೆತಗಳಲ್ಲಿ 47 ರನ್ ಗಳಿಸಿದರು ಮತ್ತು ನಾಯಕ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 24 ರನ್ ಗಳಿಸಿದರು. ಟೀಮ್ ಇಂಡಿಯಾ ಕೇವಲ 9.2 ಓವರ್‌ಗಳಲ್ಲಿ ನಿಗದಿತ 109 ರನ್‌ಗಳ ಗುರಿಯನ್ನು 7 ವಿಕೆಟ್‌ಗಳನ್ನು ಕೈಯಲ್ಲಿರುವಂತೆ ಬೆನ್ನಟ್ಟಲು ಸಹಾಯ ಮಾಡಿದರು. ಬೌಲಿಂಗ್‌ನಲ್ಲಿ ಐರ್ಲೆಂಡ್ ಪರ ಕ್ರೇಗ್ ಯಂಗ್ ಎರಡು ವಿಕೆಟ್ ಪಡೆದು ಮಿಂಚಿದರೆ, ಜೋಶುವಾ ಲಿಟಲ್ ಒಂದು ವಿಕೆಟ್ ಪಡೆದರು.

ಎರಡು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ

ಎರಡು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ

ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಹ್ಯಾರಿ ಟೆಕ್ಟರ್ ಅವರ ಅಜೇಯ 64 ರನ್‌ಗಳ ನೆರವಿನಿಂದ ಐರ್ಲೆಂಡ್ ಭಾರತದ ವಿರುದ್ಧ 108/4 ಕ್ಕೆ ತಲುಪಿತು. ಪ್ರವಾಸಿ ತಂಡದ ಪರ ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಾಲ್, ಹಾರ್ದಿಕ್ ಪಾಂಡ್ಯ ಮತ್ತು ಅವೇಶ್ ಖಾನ್ ತಲಾ ಒಂದು ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದ್ದು, ಮಂಗಳವಾರ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ಉತ್ಸಾಹದಲ್ಲಿ ಭಾರತವಿದ್ದರೆ, ಸರಣಿ ಸಮಬಲಗೊಳಿಸಲು ಐರ್ಲೆಂಡ್ ಹೋರಾಟ ನಡೆಸಲಿದೆ.

ಟಿ20 ಸ್ವರೂಪದಲ್ಲಿ ವಿಕೆಟ್ ಪಡೆದ ಮೊದಲ ಭಾರತದ ಪುರುಷರ ನಾಯಕ

ಟಿ20 ಸ್ವರೂಪದಲ್ಲಿ ವಿಕೆಟ್ ಪಡೆದ ಮೊದಲ ಭಾರತದ ಪುರುಷರ ನಾಯಕ

ಹಾರ್ದಿಕ್ ಪಾಂಡ್ಯ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಮುನ್ನಡೆಸಿದ 8ನೇ ಆಟಗಾರರಾದರು. ಅಲ್ಲದೇ ಬರೋಡಾದ ಆಲ್‌ರೌಂಡರ್ ಆಗಿ ಹೊಸ ದಾಖಲೆಯನ್ನು ಸಾಧಿಸಿದ್ದು, ಕ್ರಿಕೆಟ್‌ನ ಕಡಿಮೆ (ಟಿ20) ಸ್ವರೂಪದಲ್ಲಿ ವಿಕೆಟ್ ಪಡೆದ ಮೊದಲ ಭಾರತದ ಪುರುಷರ ಟಿ20 ನಾಯಕರಾದರು. ಪಂದ್ಯದ 2ನೇ ಓವರ್‌ನಲ್ಲಿ ಐರ್ಲೆಂಡ್‌ನ ಆರಂಭಿಕ ಆಟಗಾರ ಪಾಲ್ ಸ್ಟಿರ್ಲಿಂಗ್ ಅವರನ್ನು ಔಟ್ ಮಾಡುತ್ತಿದ್ದಂತಯೇ ಹಾರ್ದಿಕ್ ಪಾಂಡ್ಯ ಈ ಸಾಧನೆ ಮಾಡಿದರು.

Story first published: Monday, June 27, 2022, 17:42 [IST]
Other articles published on Jun 27, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+