For Quick Alerts
ALLOW NOTIFICATIONS  
For Daily Alerts
 

IND vs IRE: ಮೊದಲ ಟಿ20 ಪಂದ್ಯ ಗೆದ್ದ ನಂತರ ಕ್ಯಾಪ್ಟನ್ ಪಾಂಡ್ಯ ಖುಷಿ ಹಂಚಿಕೊಂಡಿದ್ದು ಹೀಗೆ

IND vs IRE: India Captain Hardik Pandya Reacted After Winning The 1st T20 Match against Ireland

ಭಾನುವಾರ ರಾತ್ರಿ ಡಬ್ಲಿನ್‌ನಲ್ಲಿ ನಡೆದ ಮಳೆ ಬಾಧಿತ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವು ಆತಿಥೇಯ ಐರ್ಲೆಂಡ್ ವಿರುದ್ಧ ಏಳು ವಿಕೆಟ್‌ಗಳ ಸಮಗ್ರ ಗೆಲುವು ದಾಖಲಿಸಿತು. ಈ ಶುಭಾರಂಭದೊಂದಿಗೆ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮೊದಲ ಟಿ20 ಪಂದ್ಯ ಗೆಲುವಿನ ನಂತರ ಐರ್ಲೆಂಡ್ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸಿದ್ದಕ್ಕೆ ಭಾರತೀಯ ಯುವ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸಂತೋಷಪಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿಯೇ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ದೀಪಕ್ ಹೂಡಾ (47) ಗೆಲುವಿನ ರನ್ ಗಳಿಸಿದ್ದರಿಂದ ಭಾರತವು 109 ರನ್‌ಗಳ ಗುರಿಯನ್ನು ಅತ್ಯಂತ ಸುಲಭವಾಗಿ ಬೆನ್ನಟ್ಟಿತು.

ಗೆಲುವಿನೊಂದಿಗೆ ಪ್ರಾರಂಭಿಸಿದ್ದು ಅದ್ಭುತ

ಗೆಲುವಿನೊಂದಿಗೆ ಪ್ರಾರಂಭಿಸಿದ್ದು ಅದ್ಭುತ

"ಸರಣಿಯನ್ನು ಗೆಲುವಿನೊಂದಿಗೆ ಪ್ರಾರಂಭಿಸಿದ್ದು ಅದ್ಭುತವಾಗಿದೆ. ಅದೃಷ್ಟವಶಾತ್ ನಾವು ಪಂದ್ಯವನ್ನು ಉಳಿಸಿಕೊಂಡಿದ್ದೇವೆ. ನಮ್ಮ ತಂಡವು ಗೆಲುವಿನೊಂದಿಗೆ ಪ್ರಾರಂಭಿಸುವುದು ಮುಖ್ಯವಾಗಿದೆ. ನಾನು ಅವರೊಂದಿಗೆ ಮಾತನಾಡಿದ ನಂತರ ಉಮ್ರಾನ್ ಮಲಿಕ್‌ರನ್ನು ಅವರ ಉಳಿದ ಓವರ್‌ಗಳನ್ನು ನೀಡಲಿಲ್ಲ. ಏಕೆಂದರೆ ಎದುರಾಳಿ ಬ್ಯಾಟ್ಸ್‌ಮನ್‌ಗಳು ಹಳೆಯ ಚೆಂಡಿನೊಂದಿಗೆ ಹೆಚ್ಚು ಆರಾಮದಾಯಕವಾಗಿ ಮತ್ತು ಅದ್ಭುತವಾಗಿ ಬ್ಯಾಟ್ ಮಾಡಿದರು," ಎಂದು ಹಾರ್ದಿಕ್ ಪಾಂಡ್ಯ ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದರು.

ಒಂದೇ ಓವರ್‌ನಲ್ಲಿ 14 ರನ್‌ ಬಿಟ್ಟುಕೊಟ್ಟ ಉಮ್ರಾನ್ ಮಲಿಕ್

ಒಂದೇ ಓವರ್‌ನಲ್ಲಿ 14 ರನ್‌ ಬಿಟ್ಟುಕೊಟ್ಟ ಉಮ್ರಾನ್ ಮಲಿಕ್

ವೇಗದ ಬೌಲಿಂಗ್ ಸೆನ್ಸೇಷನ್ ಉಮ್ರಾನ್ ಮಲಿಕ್ ಅವರು ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಟಿ20 ಪಂದ್ಯದಲ್ಲಿ ಬೌಲ್ ಮಾಡಿದ ಏಕೈಕ ಓವರ್‌ನಲ್ಲಿ 14 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿಯಾದರು. ಆದಾಗ್ಯೂ ನಾಯಕ ಹಾರ್ದಿಕ್ ತನ್ನ ಸಹ ಆಟಗಾರನನ್ನು ಬೆಂಬಲಿಸಿದರು. ಉಮ್ರಾನ್ ಮಲಿಕ್ ತನ್ನನ್ನು ತಾನು ಸಾಬೀತುಪಡಿಸಲು ಎರಡನೇ ಟಿ20 ಪಂದ್ಯದಲ್ಲಿ ಮತ್ತೊಂದು ಅವಕಾಶವನ್ನು ಪಡೆಯುವ ಭರವಸೆಯಿದೆ ಎಂದು ಹೇಳಿದರು.

"ಉಮ್ರಾನ್ ಮಲಿಕ್ ಆಶಾದಾಯಕವಾಗಿ ಅವಕಾಶವನ್ನು ಪಡೆಯುತ್ತಾರೆ. ಐರ್ಲೆಂಡ್ ಬ್ಯಾಟ್ಸ್‌ಮನ್ ಹ್ಯಾರಿ ಟೆಕ್ಟರ್ ಆಡಿದ ಕೆಲವು ಹೊಡೆತಗಳು ನನ್ನನ್ನು ವಿಸ್ಮಯಗೊಳಿಸಿದವು. ಅವರು ಮತ್ತೆ ಐರಿಶ್ ಕ್ರಿಕೆಟ್ ಅನ್ನು ಅಭಿವೃದ್ಧಿಪಡಿಸಲು ಮತ್ತು ಮುಂದೆ ತೆಗೆದುಕೊಂಡು ಹೋಗಲು ಎದುರುನೋಡುತ್ತಿದ್ದಾರೆ,' ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದರು.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಹಾರ್ದಿಕ್ ಪಾಂಡ್ಯ

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಹಾರ್ದಿಕ್ ಪಾಂಡ್ಯ

ಇದೇ ಮೊದಲ ಬಾರಿಗೆ ಭಾರತ ಟಿ20 ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಮಳೆ-ಬಾಧಿತ ಪಂದ್ಯವನ್ನು 20 ಓವರ್‌ಗಳಿಂದ 12 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಪವರ್‌ಪ್ಲೇನಲ್ಲಿ (ನಾಲ್ಕು ಓವರ್‌ಗಳು) ಭಾರತೀಯ ವೇಗಿಗಳು ಆತಿಥೆಯ ತಂಡಕ್ಕೆ ಆರಂಭಿಕ ಆಘಾತ ನೀಡಿದರು. ಆನಂತರ ಹ್ಯಾರಿ ಟೆಕ್ಟರ್ ಅವರು ಅಮೋಘ ಅರ್ಧ ಶತಕ ಸಿಡಿಸಿದ ಹಿನ್ನೆಲೆಯಲ್ಲಿ ಐರ್ಲೆಂಡ್ ಅತ್ಯುತ್ತಮ ಪುನರಾಗಮನವನ್ನು ಮಾಡಿತು.

Ind vs Ireland ಪಂದ್ಯದಲ್ಲಿ ಹೆಚ್ಚಾಗಿ ಮಿಂಚಿದ್ದು ಇವನೇ | *Cricket | OneIndia Kannada
ಹ್ಯಾರಿ ಟೆಕ್ಟರ್ 33 ಎಸೆತಗಳಲ್ಲಿ 64 ರನ್

ಹ್ಯಾರಿ ಟೆಕ್ಟರ್ 33 ಎಸೆತಗಳಲ್ಲಿ 64 ರನ್

ಹ್ಯಾರಿ ಟೆಕ್ಟರ್ 33 ಎಸೆತಗಳಲ್ಲಿ ಆರು ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 64 ರನ್ ಗಳಿಸಿದರು. ಐರ್ಲೆಂಡ್ 12 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿತು. ನಂತರ ಬ್ಯಾಟಿಂಗ್ ಆರಂಭಿಸಿದ ಪ್ರವಾಸಿ ತಂಡದ ಸ್ಫೋಟಕ ಆಟಗಾರ ದೀಪಕ್ ಹೂಡಾ ತಂಡಕ್ಕೆ ಆಸರೆಯಾದರು ಮತ್ತು ಅಜೇಯ 47 ರನ್ ಗಳಿಸಿ ಭಾರತವನ್ನು ಗೆಲುವಿನ ಗುರಿಯನ್ನು ತಲುಪಲು ಸಹಾಯ ಮಾಡಿದರು.

ಸ್ವತಃ ನಾಯಕ ಹಾರ್ದಿಕ್ ಪಾಂಡ್ಯ ಕೊನೆಯಲ್ಲಿ ಔಟಾಗುವ ಮುನ್ನ 12 ಎಸೆತಗಳಲ್ಲಿ 24 ರನ್ ಬಾರಿಸಿದರು. ಇದರಲ್ಲಿ ಒಂದು ಬೌಂಡರು ಮತ್ತು ಮೂರು ಸಿಕ್ಸರ್‌ಗಳಿದ್ದವು. ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ದೀಪಕ್ ಹೂಡಾ ಸತತ ಎರಡು ಬೌಂಡರಿ ಬಾರಿಸುವ ಮೂಲಕ ಭಾರತದ ಗೆಲುವನ್ನು ಖಾತರಿಪಡಿಸಿದರು. ಎರಡನೇ ಟಿ20 ಪಂದ್ಯದಲ್ಲಿ ಡಬ್ಲಿನ್‌ನಲ್ಲಿ ಮಂಗಳವಾರ (ಜೂ. 28)ದಂದು ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ ನಡೆಯಲಿದೆ.

Story first published: Monday, June 27, 2022, 10:27 [IST]
Other articles published on Jun 27, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+