IND vs IRE: ಭಾರತ vs ಐರ್ಲೆಂಡ್ ಟಿ20 ಸರಣಿ ವಿವರ; ವೇಳಾಪಟ್ಟಿ, ತಂಡಗಳು, ಟಿವಿ & ಲೈವ್ ಸ್ಟ್ರೀಮಿಂಗ್
ವೆಸ್ಟ್ ಇಂಡೀಸ್ ವಿರುದ್ಧದ ಬಹು ಮಾದರಿಯ ಸರಣಿ ಬಳಿಕ ಹಾಗೂ 2023ರ ಏಷ್ಯಾ ಕಪ್ ಪಂದ್ಯಾವಳಿಗೂ ಮುನ್ನ ಭಾರತ ಕ್ರಿಕೆಟ್ ತಂಡವು ಐರ್ಲೆಂಡ್ ಪ್ರವಾಸ ಕೈಗೊಂಡಿದೆ.
ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಶುಕ್ರವಾರ, ಆಗಸ್ಟ್ 18ರಂದು ಆಡುವ ಮೂಲಕ ಚಾಲನೆ ಸಿಗಲಿದೆ.
ಡಬ್ಲಿನ್‌ನಲ್ಲಿರುವ ಮಲಾಹೈಡ್ ಕ್ರಿಕೆಟ್ ಕ್ಲಬ್ ಮೈದಾನವು ಟಿ20 ಸರಣಿಯ ಸಂಪೂರ್ಣ ಆತಿಥ್ಯ ವಹಿಸಲಿದೆ. ಇದು ಬುಧವಾರ, ಆಗಸ್ಟ್ 23ರಂದು ಮೂರನೇ ಮತ್ತು ಕೊನೆಯ ಟಿ20 ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ.

ಉಭಯ ತಂಡಗಳ ಟಿ20 ಹೆಡ್-ಟು-ಹೆಡ್ ದಾಖಲೆಯ ಬಗ್ಗೆ ಮಾತನಾಡುವುದಾದರೆ, ಒಟ್ಟು ಐದು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಎಲ್ಲಾ ಐದು ಸಂದರ್ಭಗಳಲ್ಲಿ ಭಾರತ ತಂಡ ವಿಜಯಶಾಲಿಯಾಗಿದೆ. 2022ರಲ್ಲಿ ನಡೆದ ಅವರ ಕೊನೆಯ ಸೆಣಸಾಟದಲ್ಲಿ ಭಾರತವು ಹೆಚ್ಚಿನ ಸ್ಕೋರಿಂಗ್ ಪಂದ್ಯದಲ್ಲಿ ನಾಲ್ಕು ರನ್‌ಗಳ ಅಂತರದಲ್ಲಿ ಗೆದ್ದಿತು.
ಪದೇಪದೇ ಬೆನ್ನುನೋವಿನಿಂದಾಗಿ ತಂಡದಿಂದ ಹೊರಗುಳಿದಿದ್ದ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸುದೀರ್ಘ ವಿಶ್ರಾಂತಿಯ ನಂತರ ತಂಡಕ್ಕೆ ಮರಳಿದ್ದಾರೆ ಎನ್ನುವುದು ಗಮನಾರ್ಹವಾಗಿದೆ.
ಇನ್ನು ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಅವರನ್ನು ಉಪನಾಯಕನಾಗಿ ನೇಮಿಸುವುದರೊಂದಿಗೆ ಜಸ್ಪ್ರೀತ್ ಬುಮ್ರಾ ನೇತೃತ್ವದಲ್ಲಿ ಎರಡನೇ ಶ್ರೇಣಿಯ ತಂಡವನ್ನು ಆಡಸಲು ಬಿಸಿಸಿಐ ನಿರ್ಧರಿಸಿದೆ.
ಮತ್ತೊಂದೆಡೆ, ಅನುಭವಿ ಪಾಲ್ ಸ್ಟಿರ್ಲಿಂಗ್ ಅವರು ಐರ್ಲೆಂಡ್ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಜುಲೈನಲ್ಲಿ ನಡೆದ ಟಿ20 ವಿಶ್ವಕಪ್ ಯೂರೋಪ್ ಪ್ರಾದೇಶಿಕ ಕ್ವಾಲಿಫೈಯರ್ ಪಂದ್ಯಾವಳಿಯನ್ನು ಸೋತ ನಂತರ, ಆಲ್‌ರೌಂಡರ್‌ಗಳಾದ ಫಿಯಾನ್ ಹ್ಯಾಂಡ್ ಮತ್ತು ಗರೆಥ್ ಡೆಲಾನಿ ಅವರನ್ನು ತಂಡಕ್ಕೆ ಮರಳಿ ಕರೆತರಲಾಗಿದೆ.
2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಆಟಗಾರರು ಅದ್ಭುತವಾದ ಪ್ರಭಾವ ಬೀರಲು ಎದುರು ನೋಡುತ್ತಿದ್ದಾರೆ.
ಪಂದ್ಯಗಳ ಸಮಯ: ಭಾರತ vs ಐರ್ಲೆಂಡ್ ಟಿ20 ಸರಣಿಯ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30 ಗಂಟೆಗೆ ಆರಂಭವಾಗಲಿದೆ.
ಭಾರತ vs ಐರ್ಲೆಂಡ್ ಟಿ20 ಸರಣಿ ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ
ಭಾರತ vs ಐರ್ಲೆಂಡ್ ಟಿ20 ಸರಣಿಯನ್ನು ಭಾರತದಲ್ಲಿ News18 ಟಿವಿ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಿದ್ದರೆ, JioCinema ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.
ಭಾರತ vs ಐರ್ಲೆಂಡ್ ಟಿ20 ಸರಣಿಯ ವೇಳಾಪಟ್ಟಿ
ಆಗಸ್ಟ್ 18: ಮೊದಲ ಟಿ20 ಪಂದ್ಯ - ವಿಲೇಜ್ ಗ್ರೌಂಡ್, ಮಲಾಹೈಡ್
ಆಗಸ್ಟ್ 20: ಎರಡನೇ ಟಿ20 ಪಂದ್ಯ - ವಿಲೇಜ್ ಗ್ರೌಂಡ್, ಮಲಾಹೈಡ್
ಆಗಸ್ಟ್ 23: ಮೂರನೇ ಟಿ20 ಪಂದ್ಯ - ವಿಲೇಜ್ ಗ್ರೌಂಡ್, ಮಲಾಹೈಡ್
ಭಾರತ vs ಐರ್ಲೆಂಡ್ ಟಿ20 ಸರಣಿಯಲ್ಲಿ ಪೂರ್ಣ ತಂಡಗಳು
ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ರಾಸ್ ಅಡೈರ್, ಹ್ಯಾರಿ ಟೆಕ್ಟರ್, ಗರೆಥ್ ಡೆಲಾನಿ, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಲೋರ್ಕನ್ ಟಕ್ಕರ್ (ವಿಕೆಟ್ ಕೀಪರ್), ಮಾರ್ಕ್ ಅಡೇರ್, ಜೋಶುವಾ ಲಿಟಲ್, ಬ್ಯಾರಿ ಮೆಕಾರ್ಥಿ, ಥಿಯೋ ವ್ಯಾನ್ ವೋರ್ಕಾಮ್, ಬೆಂಜಮಿನ್ ವೈಟ್, ಕ್ರೇಗ್ ಯಂಗ್.
ಭಾರತ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಶಹಬಾಜ್ ಅಹ್ಮದ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಶ್‌ದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications