For Quick Alerts
ALLOW NOTIFICATIONS  
For Daily Alerts
 

ಐರ್ಲೆಂಡ್ ಪ್ರವಾಸದಲ್ಲಿ ಆತನೇ ದೊಡ್ಡ ಸಕಾರಾತ್ಮಕ ಅಂಶ: ಯುವ ಆಟಗಾರನ ಬಗ್ಗೆ ಸಬಾ ಕರೀಮ್ ವಿಶ್ವಾಸ

ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಮಳೆಯಿಂದ ರದ್ದಾಗುವ ಮೂಲಕ ಟೀಮ್ ಇಂಡಿಯಾ ಈ ಸರಣಿಯನ್ನು 2-0 ಅಂತರದಿಂದ ತನ್ನ ವಶಕ್ಕೆ ಪಡೆದುಕೊಂಡಿದೆ. ಏಕದಿನ ವಿಶ್ವಕಪ್ ಸನಿಹದಲ್ಲಿರುವಾಗ ಈ ಟಿ20 ಸರಣಿಯ ಮಹತ್ವವಿಲ್ಲ ಎನಿಸಿಕೊಂಡಿದ್ದರೂ ಸಾಕಷ್ಟು ವಿಚಾರಗಳಲ್ಲಿ ಈ ಸರಣಿ ಕೂಡ ಮಹತ್ವ ಪಡೆದುಕೊಂಡಿತ್ತು. ಬೂಮ್ರಾ ಸೇರಿದಂತೆ ಗಾಯಗೊಂಡ ಆಟಗಾರರ ಕಮ್‌ವ್ಯಾಕ್‌ಗೆ ಈ ಸರಣಿ ವೇದಿಕೆಯಾಗಿದ್ದು ಒಂದಾದರೆ ಇನ್ನು ಕೆಲ ಯುವ ಆಟಗಾರರು ಈ ಸರಣಿಯಲ್ಲಿ ಅವಕಾಶ ಗಿಟ್ಟಿಸಿಕೊಂಡ ಕಾರಣ ಅವರ ಪ್ರದರ್ಶನ ಸಾಕಷ್ಟು ಕುತೂಹಲ ಮೂಡಿಸಿತ್ತು.

ಇನ್ನು ಈ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡು ಗಮನಸೆಳೆದ ಆಟಗಾರ ಎಂದರೆ ಅದು ರಿಂಕು ಸಿಂಗ್. ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದ ರಿಂಕು ಭಾರತದ ಪರವಾಗಿ ಕಣಕ್ಕಿಳದ ಚೊಚ್ಚಲ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ತಮ್ಮದಾಗಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕಟಿಗ ಸಬಾ ಕರೀಮ್ ರಿಂಕು ಪ್ರದರ್ಶನದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

Ind vs Ire: Saba Karim praises Rinku Singh said he is find of the Ireland tour

ಜಿಯೋ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಬಾ ಕರೀಮ್ ಈ ಸರಣಿಯಲ್ಲಿ ಕಂಡುಕೊಂಡ ಆಟಗಾರನಾಗಿ ರಿಂಕು ಸಿಂಗ್ ಹೊರಹೊಮ್ಮಿದ್ದಾರೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ರಿಂಕು 21 ಎಸೆತಗಳಲ್ಲಿ 38 ರನ್‌ಗಳನ್ನು ಬಾರಿಸಿದ ಕಾರಣ ಟೀಮ್ ಇಂಡಿಯಾ 185 ರನ್‌ಗಳನ್ನು ಗಳಿಸಲು ಸಾಧ್ಯವಾಗಿತ್ತು. ನಂತರ ಈ ಪಂದ್ಯವನ್ನು ಭಾರತ 33 ರನ್‌ಗಳ ಅಂತರದಿಂದ ಗೆದ್ದುಕೊಂಡಿತ್ತು.

"ದೇಶೀಯ ಕ್ರಿಕೆಟಿಗನಾಗಿದ್ದ ರಿಂಕು ಸಿಂಗ್ ಈ ಸರಣಿಯ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಆಟಗಾರನಾಗಿದ್ದಾರೆ. ನನ್ನ ಪ್ರಕಾರ ಅದುವೇ ಈ ಸರಣಿಯಲ್ಲಿ ಭಾರತ ಕಂಡುಕೊಂಡ ಅಂಶ. ಇಲ್ಲಿ ಸಾಕಷ್ಟು ಸಕಾರಾತ್ಮಕ ಅಂಶಗಳಿವೆ. ರಿಂಕು ಸಿಂಗ್ ಆಟವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯದಿಂದಾಗಿ ಇದನ್ನು ಸಾಧಿಸುತ್ತಾರೆ ಎನ್ನುವ ವಿಶ್ವಾಸ ನನಗಿತ್ತು" ಎಂದು ಮಾಜಿ ಕ್ರಿಕೆಟಿಗ ಸಬಾ ಕರೀಮ್ ಹೇಳಿಕೆ ನೀಡಿದ್ದಾರೆ.

"ಅವರು ನೀಡುವ ಸ್ಥಿರವಾದ ಪ್ರದರ್ಶನದ ರೀತಿ, ಕೇವಲ ಐಪಿಎಲ್ ಮಾತ್ರವಲ್ಲ ದೇಶೀಯ ಕ್ರಿಕೆಟ್‌ನಲ್ಲಿ ಕೂಡ ವಿಶ್ವಾಸ ಮೂಡಿಸಿತ್ತು. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅದನ್ನು ಬದಲಾವಣೆ ಮಾಡಿಕೊಳ್ಳಬೇಕಾಗಿಲ್ಲ ಎನ್ನುವುದು ಖುಷಿ ನೀಡುವ ವಿಚಾರ. ನನ್ನ ಪ್ರಕಾರ ಇದುವೇ ದೊಡ್ಡ ವಿಚಾರ" ಎಂದು ಸಬಾ ಕರೀಮ್ ಅಭಿಪ್ರಾಯ ಪಟ್ಟಿದ್ದಾರೆ.

ರಿಂಕು ಸಿಂಗ್ ಮುಂಬರುವ ಏಷ್ಯನ್ ಗೇಮ್ಸ್‌ಗೆ ಆಯ್ಕೆ ಮಾಡಿರುವ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಈ ಸರಣಿಗೆ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಅಂದಹಾಗೆ ಇದು ಜಸ್ಪ್ರೀತ್ ಬೂಮ್ರಾ ಪಾಲಿಗೆ ಸಾಮಾನ್ಯ ಸರಣಿಯಾಗಿರಲಿಲ್ಲ. ಸುದೀರ್ಘ 10 ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ದೂರವುಳಿದಿದ್ದ ಅವರು ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡು ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು. ಈ ಹಂತದಲ್ಲಿ ಏಷ್ಯಾಕಪ್ ಟೂರ್ನಿ ಹಾಗೂ ವಿಶ್ವಕಪ್ ಸಮೀಪದಲ್ಲಿದ್ದು ಬೂಮ್ರಾಗೆ ಫಾರ್ಮ್, ಫಿಟ್ನೆಸ್ ಸಾಬೀತುಪಡಿಸುವ ಸವಾಲು ಮುಂದಿತ್ತು. ಇದೀಗ ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಬೂಮ್ರಾ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಿ ಗಮನಸೆಳೆದಿದ್ದಾರೆ.

Story first published: Thursday, August 24, 2023, 10:37 [IST]
Other articles published on Aug 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+