India vs Ireland: ಭಾರತ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ಐರ್ಲೆಂಡ್ ತಂಡ ಪ್ರಕಟ
ಐರ್ಲೆಂಡ್ ಕ್ರಿಕೆಟ್ ಮಂಡಳಿಯು ಶುಕ್ರವಾರ, ಆಗಸ್ಟ್ 4ರಂದು ಮುಂಬರುವ ಭಾರತ ವಿರುದ್ಧದ ಟಿ20 ಸರಣಿಗೆ 15 ಆಟಗಾರರ ಐರ್ಲೆಂಡ್ ಪುರುಷರ ತಂಡವನ್ನು ಪ್ರಕಟಿಸಿದೆ.
ಐರ್ಲೆಂಡ್ ತಂಡವು ವಿಶ್ವದ ನಂಬರ್ 1 ಟಿ20 ಅಂತಾರಾಷ್ಟ್ರೀಯ ತಂಡವಾದ ಭಾರತವನ್ನು ಮಲಾಹೈಡ್‌ನಲ್ಲಿ ಆಗಸ್ಟ್ 18, 21 ಮತ್ತು 23ರಂದು ನಡೆಯುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಎದುರಿಸಲಿದೆ.

ಕಳೆದ ವಾರದಂದು 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಯಶಸ್ವಿಯಾಗಿ ಅರ್ಹತೆ ಪಡೆದಿರುವ ಐರ್ಲೆಂಡ್ ತಂಡದ ಬಹುಪಾಲು ಆಟಗಾರರು ಭಾರತ ವಿರುದ್ಧದ ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ.
ರಾಷ್ಟ್ರೀಯ ತಂಡದ ಆಯ್ಕೆಗಾರರು ಲೆಯಿನ್‌ಸ್ಟರ್ ಲೈಟ್ನಿಂಗ್ ಆಲ್‌ರೌಂಡರ್ ಫಿಯಾನ್ ಹ್ಯಾಂಡ್ ಮತ್ತು ಜೂನ್‌ನಲ್ಲಿ ಜಿಂಬಾಬ್ವೆ ವಿರುದ್ಧ ಮಣಿಕಟ್ಟು ಮುರಿದು ಗಾಯದಿಂದ ಚೇತರಿಸಿಕೊಂಡು ಮರಳುತ್ತಿರುವ ಗರೆಥ್ ಡೆಲಾನಿ ಅವರನ್ನು ಆಯ್ಕೆ ಮಾಡಿದ್ದಾರೆ.
ಮುಂಬರುವ ಭಾರತ ವಿರುದ್ಧದ ಸರಣಿಯು ಟಿ20 ವಿಶ್ವಕಪ್ ಅರ್ಹತೆಯನ್ನು ಪಡೆದುಕೊಂಡ ನಂತರ, ಐರ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಮೊದಲ ಟಿ20 ಆಟವಾಗಿದೆ. ಜೂನ್ 2024ರಂದು ನಿಗದಿಪಡಿಸಲಾದ ಐಸಿಸಿ ಟಿ20 ಪಂದ್ಯಾವಳಿಯ ಕಾರ್ಯತಂತ್ರದ ಯೋಜನೆಯ ಭಾಗವಾಗಿ ಪರಿಗಣಿಸಲಾಗುತ್ತಿದೆ.
ಭಾರತ ವಿರುದ್ಧದ ಟಿ20 ಸರಣಿಗೆ ಐರ್ಲೆಂಡ್ ತಂಡ
ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಲ್ಬಿರ್ನಿ, ಮಾರ್ಕ್ ಅಡೇರ್, ರಾಸ್ ಅಡೈರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್‌ಕಾಮ್, ಬೆನ್ ವೈಟ್, ಕ್ರೇಗ್ ಯಂಗ್.
ಐರ್ಲೆಂಡ್ ರಾಷ್ಟ್ರೀಯ ತಂಡದ ಆಯ್ಕೆಗಾರ ಆಂಡ್ರ್ಯೂ ವೈಟ್ ಮಾತನಾಡಿ, "ಇತ್ತೀಚೆಗೆ ಸ್ಕಾಟ್ಲೆಂಡ್‌ನಲ್ಲಿ ನಡೆದ ಅರ್ಹತಾ ಅಭಿಯಾನವು ಮುಂದಿನ ಜೂನ್‌ನ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ನಮ್ಮ ಕಾರ್ಯತಂತ್ರದ ಯೋಜನೆಯ ಮೊದಲ ಹಂತವಾಗಿದೆ. ನಾವು ಪ್ರಸ್ತುತ ಮತ್ತು ವಿಶ್ವಕಪ್‌ನ ನಡುವೆ ಸುಮಾರು 15 ಟಿ20 ಪಂದ್ಯಗಳನ್ನು ಹೊಂದಿದ್ದೇವೆ. ಆದ್ದರಿಂದ ಕೋಚಿಂಗ್ ತಂಡವು ಗುರುತಿಸಿರುವ ಕ್ಷೇತ್ರಗಳ ಮೇಲೆ ತಂಡವನ್ನು ನಿರ್ಮಿಸುವುದನ್ನು ಮುಂದುವರಿಸುವುದು ಮುಖ್ಯವಾಗಿದೆ," ಎಂದರು.
"ಆಟಗಾರರಿಗೆ ಅವಕಾಶಗಳನ್ನು ನೀಡುವುದು ಸರಣಿಯನ್ನು ಸ್ವತಃ ಫಿಲ್ಟರ್ ಮಾಡುತ್ತದೆ. ಆದ್ದರಿಂದ ಭಾರತ ಸರಣಿಯ ತಂಡದಲ್ಲಿ ಹೆಸರಿಸಲಾದ ಎಲ್ಲಾ 15 ಆಟಗಾರರು ಒಂದು ಹಂತದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಐರ್ಲೆಂಡ್‌ಗೆ ಆಗಮಿಸುವ ಭಾರತೀಯ ತಂಡದ ಅಭಿಮಾನಿಗಳಿಗೆ ರೋಮಾಂಚನಕಾರಿಯಾಗಿದೆ. ಕಳೆದ ವರ್ಷದಂತೆ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲು ನಾವು ಪ್ರತಿಭೆ ಮತ್ತು ಆತ್ಮವಿಶ್ವಾಸವನ್ನು ಹೊಂದಿದ್ದೇವೆ," ಎಂದು ಆಂಡ್ರ್ಯೂ ವೈಟ್ ಹೇಳಿದರು.
ಭಾರತ vs ಐರ್ಲೆಂಡ್ ಟಿ20 ವೇಳಾಪಟ್ಟಿ
ಐರ್ಲೆಂಡ್ vs ಭಾರತ - 1ನೇ ಟಿ20: ಆಗಸ್ಟ್ 18, ಮಲಾಹೈಡ್ - ಮಧ್ಯಾಹ್ನ 3
ಐರ್ಲೆಂಡ್ vs ಭಾರತ - 2ನೇ ಟಿ20: ಆಗಸ್ಟ್ 20, ಮಲಾಹೈಡ್ - ಮಧ್ಯಾಹ್ನ 3
ಐರ್ಲೆಂಡ್ vs ಭಾರತ - 3ನೇ ಟಿ20: ಆಗಸ್ಟ್ 23, ಮಲಾಹೈಡ್ - ಮಧ್ಯಾಹ್ನ 3
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications