Ind vs Nz 1st ODI: ಭಾರತದ ಸಂಭಾವ್ಯ ಪ್ಲೇಯಿಂಗ್ 11 ಹೆಸರಿಸಿದ ಆಕಾಶ್ ಚೋಪ್ರಾ

ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಜಯಿಸಿದ ಬಳಿಕ ಭಾರತ ಏಕದಿನ ಸರಣಿಗೆ ಸಜ್ಜಾಗುತ್ತಿದೆ. 1-0 ಅಂತರದಲ್ಲಿ ಚುಟುಕು ಕ್ರಿಕೆಟ್ ಸರಣಿಯನ್ನ ಟೀಂ ಇಂಡಿಯಾ ವಶಪಡಿಸಿಕೊಂಡ ಬಳಿಕ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಗೆಲುವಿನ ಮೇಲೆ ಗುರಿ ನೆಟ್ಟಿದೆ.
ನವೆಂಬರ್ 25ರಂದು ಆಕ್ಲೆಂಡ್‌ನ ಈಡೆನ್ ಪಾರ್ಕ್‌ನಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಉಳಿದೆರಡು ಪಂದ್ಯಗಳು ಹ್ಯಾಮಿಲ್ಟನ್ ಮತ್ತು ಕ್ರೈಸ್ಟ್‌ಚರ್ಚ್‌ನಲ್ಲಿ ನವೆಂಬರ್ 27 ಮತ್ತು 30 ರಂದು ನಡೆಯಲಿದೆ.
ಆಕ್ಲೆಂಡ್‌ನ ಈಡೆನ್ ಮೈದಾನದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಯಾರೆಲ್ಲಾ ಅವಕಾಶ ಪಡೆಯಲಿದ್ದಾರೆ ಎಂಬುದನ್ನ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೆಸರಿಸಿದ್ದಾರೆ.
ಹಿರಿಯ ಆಟಗಾರರಾದ ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅನುಪಸ್ಥಿತಿಯಲ್ಲಿ ಸಂಪೂರ್ಣ ಯುವ ಪಡೆಯನ್ನು ಶಿಖರ್ ಧವನ್ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಈ ಯುವ ತಂಡದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದನ್ನು ಈ ಕೆಳಗೆ ಕಾಣಬಹುದು.
ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಯುಜವೇಂದ್ರ ಚಹಾಲ್, ಅರ್ಷ್‌ದೀಪ್ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications