For Quick Alerts
ALLOW NOTIFICATIONS  
For Daily Alerts
 

IND Vs NZ 2nd ODI: ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಕಿವೀಸ್ ಪಡೆ: 108 ರನ್‌ಗಳಿಗೆ ಆಲೌಟ್

IND Vs NZ 2nd ODI: Shami, Pandya Shines, New Zealand Bowled Out For Just 108 Runs

ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಕಿವೀಸ್ ಪಡೆ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 108 ರನ್‌ಗಳಿಗೆ ಆಲೌಟ್ ಆಗಿದೆ. ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

1
56731

ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಮಾಡಿದ ಶಮಿ ಮೊದಲ ಓವರ್ ನಲ್ಲೇ ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್‌ಗೆ ಆಘಾತ ನೀಡಿದರು.

ಸ್ಫೋಟಕ ಬ್ಯಾಟರ್ ಫಿನ್ ಅಲೆನ್ ಶೂನ್ಯಕ್ಕೆ ಔಟಾದರು. ಕ್ಲೀನ್‌ ಬೌಲ್ಡ್ ಮಾಡಿದ ಶಮಿ ನ್ಯೂಜಿಲೆಂಡ್ ಕುಸಿತಕ್ಕೆ ನಾಂದಿ ಹಾಡಿದರು. ನಂತರ ಉತ್ತಮ ಫಾರ್ಮ್‌ನಲ್ಲಿರುವ ಮೊಹಮ್ಮದ್ ಸಿರಾಜ್ ನ್ಯೂಜಿಲೆಂಡ್‌ಗೆ ಎರಡನೇ ಆಘಾತ ನೀಡಿದರು. ಹೆನ್ರಿ ನಿಕೋಲಸ್‌ರನ್ನು ತಮ್ಮ ಸ್ವಿಂಗ್‌ ಮೂಲಕ ಕಾಡಿದ ಸಿರಾಜ್ ಔಟ್ ಮಾಡುವಲ್ಲಿ ಯಶಸ್ವಿಯಾದರು.

IND Vs NZ 2nd ODI: Shami, Pandya Shines, New Zealand Bowled Out For Just 108 Runs

ಹಿರಿಯ ವೇಗಿ ಮೊಹಮ್ಮದ್ ಶಮಿ ಅತ್ಯುತ್ತಮ ಲಯದಲ್ಲಿ ಬೌಲಿಂಗ್ ಮಾಡಿದರು. 6 ಓವರ್ ಗಳಲ್ಲಿ ಕೇವಲ 18 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಿತ್ತು, ನ್ಯೂಜಿಲೆಂಡ್‌ ಆರಂಭಿಕ ಕುಸಿತಕ್ಕೆ ಕಾರಣವಾದರು. 15 ರನ್‌ ಗಳಿಸುವಷ್ಟರಲ್ಲಿ ನ್ಯೂಜಿಲೆಂಡ್ 5 ವಿಕೆಟ್ ಕಳೆದುಕೊಂಡು ನೂರು ರನ್‌ಗಳ ಗಡಿ ದಾಟುವುದು ಕೂಡ ಕಷ್ಟ ಎನ್ನುವಂತಹ ಸ್ಥಿತಿ ಇತ್ತು.

ಫಿಲಿಪ್ಸ್, ಬ್ರೇಸ್‌ವೆಲ್, ಸ್ಯಾಂಟ್ನರ್ ಅಲ್ಪ ಆಸರೆ

ಕುಸಿದ ನ್ಯೂಜಿಲೆಂಡ್‌ಗೆ ಮೈಕೆಲ್ ಬ್ರೇಸ್‌ವೆಲ್, ಗ್ಲೆನ್ ಫಿಲಿಪ್ಸ್ , ಮಿಚೆಲ್ ಸ್ಯಾಂಟ್ನರ್ ಅಲ್ಪ ರನ್ ಗಳಿಸುವ ಮೂಲಕ ಆಸರೆಯಾದರು. ಈ ಮೂವರು ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ಗಳಿಸಲು ಟೀಂ ಇಂಡಿಯಾ ಬೌಲರ್ ಗಳು ಅವಕಾಶ ಮಾಡಿಕೊಡಲಿಲ್ಲ.

IND Vs NZ 2nd ODI: Shami, Pandya Shines, New Zealand Bowled Out For Just 108 Runs

36 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಗ್ಲೆನ್‌ ಫಿಲಿಪ್ಸ್‌ರನ್ನು ವಾಷಿಂಗ್ಟನ್ ಸುಂದರ್ ಔಟ್ ಮಾಡಿದರು. ಕಳೆದ ಪಂದ್ಯದಲ್ಲಿ ಭರ್ಜರಿ ಶತಕದ ಮೂಲಕ ಭಾರತಕ್ಕೆ ತಲೆನೋವಾಗಿದ್ದ ಮೈಕೆಲ್ ಬ್ರೇಸ್‌ವೆಲ್ 22 ರನ್‌ ಗಳಿಸಿದ್ದಾಗ ಶಮಿ ಔಟ್ ಮಾಡಿದರು. ಮಿಚೆಲ್ ಸ್ಯಾಂಟ್ನರ್ 27 ರನ್ ಗಳಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.

ಟೀಂ ಇಂಡಿಯಾ ಬೌಲರ್ ಗಳ ಸಂಘಟಿತ ದಾಳಿ

ಆರಂಭದಲ್ಲಿ ಶಮಿ ಮತ್ತು ಸಿರಾಜ್ ನ್ಯೂಜಿಲೆಂಡ್ ಪಡೆಯನ್ನು ಕಾಡಿದರೆ. ನಂತರ ಹಾರ್ದಿಕ್ ಪಾಂಡ್ಯ, ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಮೊಹಮ್ಮದ್ ಶಮಿ 3 ವಿಕೆಟ್ ಪಡೆದರೆ. ಹಾರ್ದಿಕ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ತಲಾ 2 ವಿಕೆಟ್ ಪಡೆದರು. ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದು ಮಿಂಚಿದರು.

Story first published: Saturday, January 21, 2023, 16:59 [IST]
Other articles published on Jan 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+