ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ಆಕ್ಲೆಂಡ್‌ನ ಈಡನ್ ಪಾರ್ಕ್ ಪಿಚ್ ಇತಿಹಾಸ ಮತ್ತು ಏಕದಿನ ದಾಖಲೆ

IND vs NZ: Aucklands Eden Park Pitch History And ODI Record

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಶುಕ್ರವಾರ, ನವೆಂಬರ್ 25ರಂದು ನಡೆಯಲಿದೆ. ಪಂದ್ಯವು ಸ್ಥಳೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಆರಂಭವಾಗಲಿದ್ದರೆ, ಭಾರತೀಯ ಕಾಲಮಾನ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತದೆ.

ಭಾರತ ಮತ್ತು ನ್ಯೂಜಿಲೆಂಡ್ ನಿರಂತರವಾಗಿ ಪರಸ್ಪರರ ವಿರುದ್ಧ ವೈಟ್ ಬಾಲ್ ಕ್ರಿಕೆಟ್ ಆಡುತ್ತಿವೆ. ಏಕದಿನ ಸರಣಿಯ ಮೊದಲು ಉಭಯ ರಾಷ್ಟ್ರಗಳು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸ್ಪರ್ಧಿಸಿದ್ದು, ಪ್ರವಾಸಿ ಭಾರತ ತಂಡ 1-0 ಅಂತರದಿಂದ ಜಯಶಾಲಿಯಾಯಿತು.

IND vs NZ 1st ODI: ಮೊದಲ ಪಂದ್ಯಕ್ಕೆ ಮಳೆ ಅಡ್ಡಿ; ಹೇಗಿದೆ ಆಕ್ಲೆಂಡ್ ಹವಾಮಾನ ವರದಿ?IND vs NZ 1st ODI: ಮೊದಲ ಪಂದ್ಯಕ್ಕೆ ಮಳೆ ಅಡ್ಡಿ; ಹೇಗಿದೆ ಆಕ್ಲೆಂಡ್ ಹವಾಮಾನ ವರದಿ?

ಆದರೂ, ಭಾರತವು ಪೂರ್ಣ ಸಾಮರ್ಥ್ಯದ ತಂಡವನ್ನು ಹೊಂದಿಲ್ಲದ ಕಾರಣ ನ್ಯೂಜಿಲೆಂಡ್ ಏಕದಿನ ಸರಣಿಯನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ.

IND vs NZ: Aucklands Eden Park Pitch History And ODI Record

ಈಡನ್ ಪಾರ್ಕ್, ಆಕ್ಲೆಂಡ್ ಟಿ20 ಅಂಕಿಅಂಶಗಳು
ಆಡಿದ ODI ಪಂದ್ಯಗಳು: 77

ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದ ಪಂದ್ಯಗಳು: 30

ಸೆಕೆಂಡ್ ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದ ಪಂದ್ಯಗಳು: 42

ಪಂದ್ಯಗಳು ಟೈ: 2

ರದ್ದಾದ ಪಂದ್ಯಗಳು: 3

ಗರಿಷ್ಠ ವೈಯಕ್ತಿಕ ಸ್ಕೋರ್: 146* - ಮಾರ್ಕಸ್ ಸ್ಟೊಯಿನಿಸ್ (ಆಸ್ಟ್ರೇಲಿಯಾ) ನ್ಯೂಜಿಲೆಂಡ್ ವಿರುದ್ಧ, 2017.

ಅತ್ಯುತ್ತಮ ಬೌಲಿಂಗ್ ಅಂಕಿಅಂಶ: 6/28 - ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ) ನ್ಯೂಜಿಲೆಂಡ್ ವಿರುದ್ಧ, 2015.

ಹೆಚ್ಚಿನ ತಂಡದ ಸ್ಕೋರ್: 340/5 - ನ್ಯೂಜಿಲೆಂಡ್ vs (ಆಸ್ಟ್ರೇಲಿಯಾ), 2007.

ಕಡಿಮೆ ತಂಡದ ಸ್ಕೋರ್: 73 - ನ್ಯೂಜಿಲೆಂಡ್ vs (ಶ್ರೀಲಂಕಾ), 2007.

ಅತ್ಯಧಿಕ ಯಶಸ್ವಿ ರನ್-ಚೇಸ್: 340/5 - ನ್ಯೂಜಿಲೆಂಡ್ vs (ಆಸ್ಟ್ರೇಲಿಯಾ), 2007.

IND vs NZ: Aucklands Eden Park Pitch History And ODI Record

ಆಕ್ಲೆಂಡ್‌ನ ಪಿಚ್ ಬ್ಯಾಟ್ಸ್‌ಮನ್ ಮತ್ತು ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಈಡನ್ ಪಾರ್ಕ್‌ನಲ್ಲಿ ನಡೆದ ಕೊನೆಯ ಏಕದಿನ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಆಡಿದ್ದವು. ಆ ಪಂದ್ಯವನ್ನು ನ್ಯೂಜಿಲೆಂಡ್ 22 ರನ್‌ಗಳಿಂದ ಗೆದ್ದುಕೊಂಡಿತು.

2020ರಲ್ಲಿ ಭಾರತದ ನ್ಯೂಜಿಲೆಂಡ್ ಪ್ರವಾಸದ ಸಮಯದಲ್ಲಿ ಫೆಬ್ರವರಿ 8ರಂದು ಆಕ್ಲೆಂಡ್ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಮತ್ತು ರಾಸ್ ಟೇಲರ್ ಅವರ ಅರ್ಧಶತಕಗಳು ಆತಿಥೇಯ ತಂಡವನ್ನು 50 ಓವರ್‌ಗಳಲ್ಲಿ 273/8 ಗಳಿಸುವಂತೆ ಮಾಡಿತ್ತು.

ಜಿಂಬಾಬ್ವೆ ವಿರುದ್ಧ ನಾಯಕತ್ವ ಕಿತ್ತುಕೊಂಡು ಕೆಎಲ್ ರಾಹುಲ್‌ಗೆ ನೀಡಿದ್ದಕ್ಕೆ ಶಿಖರ್ ಧವನ್ ಏನೆಂದರು?ಜಿಂಬಾಬ್ವೆ ವಿರುದ್ಧ ನಾಯಕತ್ವ ಕಿತ್ತುಕೊಂಡು ಕೆಎಲ್ ರಾಹುಲ್‌ಗೆ ನೀಡಿದ್ದಕ್ಕೆ ಶಿಖರ್ ಧವನ್ ಏನೆಂದರು?

ಪ್ರತ್ಯುತ್ತರವಾಗಿ ಭಾರತ ತಂಡ 153/7ಕ್ಕೆ ಕುಸಿದಿತ್ತು, ಆದರೆ ರವೀಂದ್ರ ಜಡೇಜಾ ಮತ್ತು ನವದೀಪ್ ಸೈನಿ ಅವರ ಕೆಚ್ಚೆದೆಯ ಹೋರಾಟ ಗುರಿಯ ಹತ್ತಿರಕ್ಕೆ ಬರಲು ಸಹಾಯ ಮಾಡಿತು. ಅಂತಿಮವಾಗಿ ಭಾರತ 48.3 ಓವರ್‌ಗಳಲ್ಲಿ 251 ರನ್‌ಗಳಿಗೆ ಆಲೌಟ್ ಆಯಿತು.

ಆ ಪಂದ್ಯದಲ್ಲಿ 18 ವಿಕೆಟ್‌ಗಳು ಬಿದ್ದವು, ಅದರಲ್ಲಿ ಸ್ಪಿನ್ ಬೌಲರ್‌ಗಳು ಕೇವಲ 4 ವಿಕೆಟ್‌ಗಳನ್ನು ಪಡೆದರು. 98.3 ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ಕೇವಲ 11 ಸಿಕ್ಸರ್‌ಗಳನ್ನು ಮಾತ್ರ ಸಿಡಿಸಿದರು.

Story first published: Thursday, November 24, 2022, 20:33 [IST]
Other articles published on Nov 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X