IND vs NZ: 3ನೇ ಟಿ20 ಪಂದ್ಯಕ್ಕೆ ಕೇನ್ ವಿಲಿಯಮ್ಸನ್ ಮಿಸ್; ಈ ಬೌಲರ್‌ಗೆ ನಾಯಕತ್ವ ಹೊಣೆ

2022ರ ಟಿ20 ವಿಶ್ವಕಪ್ ಪಂದ್ಯಾವಳಿ ಮುಗಿದ ಬಳಿಕ ನ್ಯೂಜಿಲೆಂಡ್ ಮತ್ತು ಭಾರತ ತಂಡಗಳ ನಡುವೆ ಚುಟುಕು ಕ್ರಿಕೆಟ್ ಸರಣಿ ನಡೆಯುತ್ತಿದೆ. ಮೊದಲ ಟಿ20 ಪಂದ್ಯ ಮಳೆಗಾಹುತಿಯಾದರೆ, ಎರಡನೇ ಟಿ20 ಪಂದ್ಯವನ್ನು ಪ್ರವಾಸಿ ತಂಡ ಭಾರತ 65 ರನ್‌ಗಳ ಅಂತರದಿಂದ ಗೆದ್ದು, ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಇನ್ನು ನೇಪಿಯರ್‌ನಲ್ಲಿ ಮಂಗಳವಾರ ನಡೆಯಲಿರುವ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಿಂದ ಆತಿಥೇಯ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹೊರಗುಳಿಯಲಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ (NZC) ಸೋಮವಾರ ದೃಢಪಡಿಸಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ವೇಗಿ ಟಿಮ್ ಸೌಥಿ ಕಿವೀಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಇದೇ ಶುಕ್ರವಾರದಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಮ್ಮ ತಂಡವನ್ನು ಮುನ್ನಡೆಸಲು ಕೇನ್ ವಿಲಿಯಮ್ಸನ್ ಮರಳಲಿದ್ದಾರೆ.
"ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಮಂಗಳವಾರ ನೇಪಿಯರ್‌ನಲ್ಲಿ ನಡೆಯಲಿರುವ ಮೂರನೇ ಟಿ20 ಪಂದ್ಯವನ್ನು ಪೂರ್ವ ನಿಯೋಜಿತ ವೈದ್ಯಕೀಯ ಅಪಾಯಿಂಟ್‌ಮೆಂಟ್‌ಗೆ ಹಾಜರಾಗಲು ಕಳೆದುಕೊಳ್ಳಲಿದ್ದಾರೆ," ಎಂದು ನ್ಯೂಜಿಲೆಂಡ್ ಕ್ರಿಕೆಟ್ ಅಧಿಕೃತ ಹೇಳಿಕೆ ತಿಳಿಸಿದೆ.

"ಇನ್ನು ಕೇನ್ ವಿಲಿಯಮ್ಸನ್ ಬದಲಿ ಆಟಗಾರನಾಗಿ ಆಕ್ಲೆಂಡ್ ಅನುಭವಿ ಬ್ಯಾಟ್ಸ್‌ಮನ್ ಮಾರ್ಕ್ ಚಾಪ್‌ಮನ್ ಸೋಮವಾರ ನೇಪಿಯರ್‌ನಲ್ಲಿ ಟಿ20 ತಂಡವನ್ನು ಸೇರಿಕೊಳ್ಳಲಿದ್ದಾರೆ," ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಾಹಿತಿ ಹಂಚಿಕೊಂಡಿದೆ.
ಶುಕ್ರವಾರದಂದು ಈಡನ್ ಪಾರ್ಕ್‌ನಲ್ಲಿ ನಡೆಯಲಿರುವ ಏಕದಿನ ಸರಣಿಯ ಆರಂಭಿಕ ಪಂದ್ಯಕ್ಕೆ ಮುಂಚಿತವಾಗಿ ನ್ಯೂಜಿಲೆಂಡ್ ತಂಡವು ಆಕ್ಲೆಂಡ್‌ನಲ್ಲಿ ಸೇರಿದಾಗ ಕೇನ್ ವಿಲಿಯಮ್ಸನ್ ಹಾಜರಿರಲಿದ್ದಾರೆ.
ಕೇನ್ ವಿಲಿಯಮ್ಸನ್ ಅವರ ಐತಿಹಾಸಿಕ ಮೊಣಕೈ ಗಾಯಕ್ಕೂ ಮತ್ತು ಈ ವೈದ್ಯಕೀಯ ಅಪಾಯಿಂಟ್‌ಮೆಂಟ್‌ಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯೂಜಿಲೆಂಡ್ ತಂಡದ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.
"ಕೇನ್ ವಿಲಿಯಮ್ಸನ್ ಸ್ವಲ್ಪ ಸಮಯದಿಂದಲೂ ವೈದ್ಯಕೀಯ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ದುರದೃಷ್ಟವಶಾತ್ ನಮ್ಮ ವೇಳಾಪಟ್ಟಿಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ನಮ್ಮ ಆಟಗಾರರು ಮತ್ತು ಸಿಬ್ಬಂದಿಯ ಆರೋಗ್ಯ ಮತ್ತು ಯೋಗಕ್ಷೇಮವು ನಮ್ಮ ಆದ್ಯತೆಯಾಗಿದೆ," ಎಂದು ಕೋಚ್ ಗ್ಯಾರಿ ಸ್ಟೆಡ್ ತಿಳಿಸಿದರು.

ಇತ್ತೀಚಿನ ಟಿ20 ವಿಶ್ವಕಪ್ ಮತ್ತು ತ್ರಿಕೋನ ಸರಣಿಯಲ್ಲಿ ಭಾಗವಹಿಸಿದ ನಂತರ ಕ್ರೈಸ್ಟ್‌ಚರ್ಚ್‌ನಲ್ಲಿ ತಂಡದೊಂದಿಗೆ ಮರಳಲು ಮಾರ್ಕ್ ಚಾಪ್‌ಮನ್ ಉತ್ಸುಕರಾಗಿದ್ದಾರೆ ಎಂದು ಗ್ಯಾರಿ ಸ್ಟೆಡ್ ಹೇಳಿದರು.
ಮಂಗಳವಾರ ನೇಪಿಯರ್‌ನ ಮೆಕ್ಲೀನ್ ಪಾರ್ಕ್‌ನಲ್ಲಿ ನಡೆಯಲಿರುವ ಮೂರನೇ ಮತ್ತು ಅಂತಿಮ ಟಿ20 ಪಂದ್ಯಕ್ಕೆ ಬೌಲರ್ ಟಿಮ್ ಸೌಥಿ ನಾಯಕತ್ವ ವಹಿಸಲಿದ್ದಾರೆ ಎಂದು ಕೋಚ್ ಗ್ಯಾರಿ ಸ್ಟೇಡ್ ಖಚಿತಪಡಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications