IND vs NZ: ಏಕದಿನ ವಿಶ್ವಕಪ್‌ನಲ್ಲಿ ಈ ಸಾಧನೆಗೈದ ವಿಶ್ವದ ಮೊದಲ ಬೌಲರ್ ಮೊಹಮ್ಮದ್ ಶಮಿ
ಬುಧವಾರ, ನವೆಂಬರ್ 16ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದ ಸಂದರ್ಭದಲ್ಲಿ ಭಾರತ ತಂಡದ ತೂಫಾನ್ ವೇಗಿ ಮೊಹಮ್ಮದ್ ಶಮಿ ಅವರು ಏಕದಿನ ವಿಶ್ವಕಪ್‌ನಲ್ಲಿ ವೇಗವಾಗಿ 50 ವಿಕೆಟ್‌ಗಳನ್ನು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ಮೊಹಮ್ಮದ್ ಶಮಿ ಎಸೆದ 33ನೇ ಓವರ್‌ನಲ್ಲಿ ನ್ಯೂಜಿಲೆಂಡ್‌ನ ನಾಯಕ ಕೇನ್ ವಿಲಿಯಮ್ಸನ್ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಬೌಂಡರಿ ಗೆರೆ ತೆರವುಗೊಳಿಸಲು ವಿಫಲವಾದ ನಂತರ, ಸೂರ್ಯಕುಮಾರ್ ಯಾದವ್‌ಗೆ ಕ್ಯಾಚ್ ನೀಡಿ ಔಟಾದಾಗ ಭಾರತೀಯ ಬೌಲರ್ ವಿಶ್ವಕಪ್‌ನಲ್ಲಿ 50 ವಿಕೆಟ್‌ಗಳ ಸಾಧನೆ ಮಾಡಿದರು.

ಮೊಹಮ್ಮದ್ ಶಮಿ ತನ್ನ 17ನೇ ಏಕದಿನ ವಿಶ್ವಕಪ್ ಇನ್ನಿಂಗ್ಸ್‌ನಲ್ಲಿ ಈ ಹೆಗ್ಗುರುತನ್ನು ನಿರ್ಮಿಸಿದರು. ಈ ಪಂದ್ಯಾವಳಿಯ ಮೊದಲು ವೇಗವಾಗಿ 50 ವಿಕೆಟ್‌ಗಳ ಸಾಧನೆ ಮಾಡಿದ್ದ, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್‌ಗಿಂತ ಎರಡು ಪಂದ್ಯಗಳ ವೇಗವಾಗಿ ಸಾಗಿದರು.
33 ವರ್ಷದ ಮೊಹಮ್ಮದ್ ಶಮಿ ಏಕದಿನ ವಿಶ್ವಕಪ್‌ನಲ್ಲಿ 50 ವಿಕೆಟ್‌ಗಳನ್ನು ಪಡೆದ ಏಳನೇ ಬೌಲರ್ ಮತ್ತು ಮೊದಲ ಭಾರತೀಯ ಎನಿಸಿದರು.
ವೇಗವಾಗಿ 50 ವಿಶ್ವಕಪ್ ವಿಕೆಟ್ ಪಡೆದವರು (ಇನಿಂಗ್ಸ್‌ಗಳ ಲೆಕ್ಕದಲ್ಲಿ)
17 - ಮೊಹಮ್ಮದ್ ಶಮಿ
19 - ಮಿಚೆಲ್ ಸ್ಟಾರ್ಕ್
25 - ಲಸಿತ್ ಮಾಲಿಂಗ
28 - ಟ್ರೆಂಟ್ ಬೌಲ್ಟ್

ಏಕದಿನ ವಿಶ್ವಕಪ್‌ನಲ್ಲಿ 50 ವಿಕೆಟ್ ಪಡೆದ ಬೌಲರ್‌ಗಳು
71 - ಗ್ಲೆನ್ ಮೆಕ್‌ಗ್ರಾತ್ - ಆಸ್ಟ್ರೇಲಿಯಾ
68 - ಮುತ್ತಯ್ಯ ಮುರಳೀಧರನ್ - ಶ್ರೀಲಂಕಾ
59 - ಮಿಚೆಲ್ ಸ್ಟಾರ್ಕ್ - ಆಸ್ಟ್ರೇಲಿಯಾ
56 - ಲಸಿತ್ ಮಾಲಿಂಗ - ಶ್ರೀಲಂಕಾ
55 - ವಾಸಿಂ ಅಕ್ರಮ್ - ಪಾಕಿಸ್ತಾನ
53 - ಟ್ರೆಂಟ್ ಬೌಲ್ಟ್ - ನ್ಯೂಜಿಲೆಂಡ್
51 - ಮೊಹಮ್ಮದ್ ಶಮಿ - ಭಾರತ
50 ವಿಶ್ವಕಪ್ ವಿಕೆಟ್‌ಗಳಿಗೆ ತೆಗೆದುಕೊಂಡ ಕಡಿಮೆ ಎಸೆತಗಳು
795 - ಮೊಹಮ್ಮದ್ ಶಮಿ
941 - ಮಿಚೆಲ್ ಸ್ಟಾರ್ಕ್
1187 - ಲಸಿತ್ ಮಾಲಿಂಗ
1540 - ಗ್ಲೆನ್ ಮೆಕ್‌ಗ್ರಾತ್
1543 - ಟ್ರೆಂಟ್ ಬೌಲ್ಟ್
ಬಲಗೈ ವೇಗಿ ಮೊಹಮ್ಮದ್ ಶಮಿ ಆರಂಭದಲ್ಲಿ ಭಾರತೀಯ ತಂಡದ ಆಡುವ 11ರ ಭಾಗವಾಗಿರಲಿಲ್ಲ. ಆದರೆ, ಗ್ರೂಪ್ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ ಅವರು ಮರಳಿದ ನಂತರ, ಸುಲಭವಾಗಿ ವಿಕೆಟ್ ಕೀಳುವುದನ್ನು ತಡೆಯಲಾಗಲಿಲ್ಲ.
ಮೊಹಮ್ಮದ್ ಶಮಿ ಕಿವೀಸ್ ಮತ್ತು ಶ್ರೀಲಂಕಾ ವಿರುದ್ಧ ಐದು ವಿಕೆಟ್‌ಗಳ ಸಾಧನೆ ಮಾಡಿದರು. ಈ ಮೂಲಕ ಏಕದಿನ ವಿಶ್ವಕಪ್‌ಗಳಲ್ಲಿ ಭಾರತದ ಅಗ್ರ ವಿಕೆಟ್ ಟೇಕರ್ ಆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications