IND vs NZ: ಭಾರತದ ಈ ಯುವ ವೇಗಿಯ ಮೇಲೆ ಹೆಚ್ಚಿನ ಭರವಸೆ ಹೊಂದಿದ್ದೇನೆ; ವಿಲಿಯಮ್ಸನ್

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಮುಕ್ತಾಯಗೊಂಡ 2022ರ ಟಿ20 ವಿಶ್ವಕಪ್ ಮುಗಿದ ಐದೇ ದಿನಗಳಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ದ್ವಿಪಕ್ಷೀಯ ಸರಣಿ ಆರಂಭವಾಗಲಿದೆ. ಪ್ರಮುಖ ಆಟಗಾರರ ಅನುಪಸ್ಥಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
ನವೆಂಬರ್ 18ರಂದು ವೆಲ್ಲಿಂಗ್ಟನ್‌ನಲ್ಲಿ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20 ಸರಣಿಯಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ವಿರುದ್ಧ ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಂ ಇಂಡಿಯಾ ಸೆಣಸಾಟ ನಡೆಸಲಿದೆ. ಆನಂತರ ನವೆಂಬರ್ 25ರಿಂದ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಾಲಿ ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಅವರಂತಹ ಅನುಭವಿ ಕ್ರಿಕೆಟಿಗರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಿದ್ದು, ಯುವ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ.
ಇನ್ನು ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ ಆಟಗಾರ ಉಮ್ರಾನ್ ಮಲಿಕ್ ಮತ್ತು ಬ್ಯಾಟರ್ ಶುಭ್‌ಮನ್ ಗಿಲ್, ರಾಹುಲ್ ತ್ರಿಪಾಠಿ ಮತ್ತು ಇಶಾನ್ ಕಿಶನ್ ಅವರಂತಹ ಯುವ ಪ್ರತಿಭೆಗಳು ಟಿ20 ಸ್ಕ್ವಾಡ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಐಪಿಎಲ್ 2022ರಲ್ಲಿ 22 ವಿಕೆಟ್ ಪಡೆದ ಉಮ್ರಾನ್ ಮಲಿಕ್
ಐಪಿಎಲ್ 2022ರ ಉದಯೋನ್ಮುಖ ಬೌಲರ್ ಉಮ್ರಾನ್ ಮಲಿಕ್ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ 14 ಪಂದ್ಯಗಳಲ್ಲಿ 5/25ರ ವೃತ್ತಿಜೀವನದ ಅತ್ಯುತ್ತಮ ಸಾಧನೆಯೊಂದಿಗೆ 22 ವಿಕೆಟ್‌ಗಳನ್ನು ಬಾಚಿದರು. ಇದೇ ವರ್ಷ ಐರ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಉಮ್ರಾನ್ ಮಲಿಕ್, ಇದೀಗ ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಆಯ್ಕೆಯಾಗಿದ್ದಾರೆ.
"ಉಮ್ರಾನ್ ಮಲಿಕ್ ಅದ್ಭುತ ಪ್ರತಿಭೆ. ಈಗ ಆತನನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೋಡುತ್ತಿರುವುದು ಅದ್ಭುತವಾಗಿದೆ. ಟಿ20 ಸರಣಿಗೆ ಭಾರತ ತಂಡಕ್ಕೆ ಉಮ್ರಾನ್ ಮಲಿಕ್ ಆಯ್ಕೆಯಾಗಿರುವುದರಿಂದ ನಾನು ಅವರ ಮೇಲೆ ಹೆಚ್ಚಿನ ಭರವಸೆ ಹೊಂದಿದ್ದೇನೆ," ಎಂದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಭಾರತ ಮತ್ತು ನ್ಯೂಜಿಲೆಂಡ್ ಸರಣಿಯ ಮುನ್ನ ಅಮೆಜಾನ್ ಪ್ರೈಮ್ ವೀಡಿಯೋ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಹೇಳಿದರು.

ಸೆಮಿಫೈನಲ್ ಪಂದ್ಯದಲ್ಲಿ ಪರಾಭವಗೊಂಡ ತಂಡಗಳು
ಎರಡೂ ತಂಡಗಳು 2022ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪರಾಭವಗೊಂಡ ತಂಡಗಳಾಗಿವೆ. ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋತರೆ, ನ್ಯೂಜಿಲೆಂಡ್ ತಂಡ ಪಾಕಿಸ್ತಾನ ವಿರುದ್ಧ ಸೋತು ಮುಖಭಂಗ ಅನುಭವಿಸಿದೆ. ಎರಡು ತಂಡಗಳ ನಡುವಿನ ದೊಡ್ಡ ವ್ಯತ್ಯಾಸ ಏನೆಂದರೆ ಭಾರತದ ಯುವಪಡೆಯನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿದ್ದಾರೆ.
"ಹಾರ್ದಿಕ್ ಪಾಂಡ್ಯ ಸೂಪರ್‌ಸ್ಟಾರ್ ಆಟಗಾರ ಮತ್ತು ವಿಶ್ವದ ಅತ್ಯಂತ ಬೇಡಿಕೆಯ ಪಂದ್ಯ ವಿಜೇತರಲ್ಲಿ ಒಬ್ಬರಾಗಿದ್ದಾರೆ. ಐಪಿಎಲ್ ಮಟ್ಟದಲ್ಲಿ ನಾಯಕನಾಗಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಭಾರತ ತಂಡವು ಹಲವು ಅತ್ಯುತ್ತಮ ಆಟಗಾರರನ್ನು ಹೊಂದಿದ್ದು, ನನಗೆ ಇದು ವೈಯಕ್ತಿಕವಾಗಿಯೂ ತಿಳಿದಿದೆ," ಎಂದು ಕೇನ್ ವಿಲಿಯಮ್ಸನ್ ಅವರು ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆ ಮಾತನಾಡಿದರು.

ನ್ಯೂಜಿಲೆಂಡ್‌ನಲ್ಲಿ ಭಾರತ ತಂಡದ ಪ್ರವಾಸದ ವಿವರ
ವೆಲ್ಲಿಂಗ್ಟನ್- ಮೊದಲ ಟಿ20 ಪಂದ್ಯ (ನವೆಂಬರ್ 18)
ಮೌಂಟ್ ಮೌಂಗನುಯಿ- ಎರಡನೇ ಟಿ20 ಪಂದ್ಯ (ನವೆಂಬರ್ 20)
ನೇಪಿಯರ್- ಮೂರನೇ ಟಿ20 ಪಂದ್ಯ (ನವೆಂಬರ್ 22)
ಆಕ್ಲೆಂಡ್- ಮೊದಲ ಏಕದಿನ ಪಂದ್ಯ (ನವೆಂಬರ್ 25)
ಹ್ಯಾಮಿಲ್ಟನ್- ಎರಡನೇ ಏಕದಿನ ಪಂದ್ಯ (ನವೆಂಬರ್ 27)
ಕ್ರೈಸ್ಟ್‌ಚರ್ಚ್- ಮೂರನೇ ಏಕದಿನ ಪಂದ್ಯ (ನವೆಂಬರ್ 30)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications