IND vs NZ: ಭಾರತ ವಿರುದ್ಧದ ಸರಣಿಗೆ ಕಿವೀಸ್ ತಂಡ ಪ್ರಕಟ; ಪ್ರಮುಖ ಆಟಗಾರರಿಗೆ ಕೋಕ್

ಮುಂಬರುವ ಭಾರತ ವಿರುದ್ಧದ ಮೂರು ಟಿ20 ಮತ್ತು ಮೂರು ಏಕದಿನ ಸರಣಿಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ (NZC) ಮಂಗಳವಾರ ತನ್ನ ತಂಡವನ್ನು ಪ್ರಕಟಿಸಿದೆ.
ಫಿನ್ ಅಲೆನ್ ಭಾರತ ವಿರುದ್ಧದ ತವರಿನ ಸರಣಿಗೆ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದು, ಇದೇ ವೇಳೆ ರಾಷ್ಟ್ರೀಯ ತಂಡದ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದ ಕಾರಣ ಟ್ರೆಂಟ್ ಬೌಲ್ಟ್ ಅವರನ್ನು ಆಯ್ಕೆ ಮಾಡಲಾಗಿಲ್ಲ.
ನವೆಂಬರ್ 18, ಶುಕ್ರವಾರದಂದು ವೆಲ್ಲಿಂಗ್ಟನ್‌ನಲ್ಲಿ ಟಿ20 ಸರಣಿ ಪ್ರಾರಂಭವಾಗಲಿದೆ. ನ್ಯೂಜಿಲೆಂಡ್‌ನ ಟಿ20 ಮತ್ತು ಏಕದಿನ ಫಾರ್ಮೆಟ್‌ನ ಎರಡೂ ತಂಡಗಳಲ್ಲಿ ಫಿನ್ ಅಲೆನ್ ಸ್ಥಾನ ಪಡೆದಿದ್ದು, ಮೊದಲ ಬಾರಿಗೆ ಭಾರತ ತಂಡದ ವಿರುದ್ಧ ಆಡಲಿದ್ದಾರೆ.
23 ವರ್ಷದ ಫಿನ್ ಅಲೆನ್ ನ್ಯೂಜಿಲೆಂಡ್ ತಂಡದ ಪರವಾಗಿ ಈಗಾಗಲೇ 23 ಟಿ20 ಪಂದ್ಯಗಳನ್ನು ಆಡಿದ್ದಾರೆ, ಇದೇ ವೇಳೆ ಒಂದು ಶತಕ ಹಾಗೂ ಐದು ಅದ್ಭುತ ಅರ್ಧಶತಕ ಬಾರಿಸಿದ್ದಾರೆ. ಎರಡೂ ಮಾದರಿಯ ತಂಡಗಳಲ್ಲಿ ಫಿನ್ ಅಲೆನ್‌ಗೆ ಅಗ್ರಕ್ರಮಾಂಕದಲ್ಲಿ ಸ್ಥಾನ ನೀಡಿದ್ದರಿಂದ, ಮಾರ್ಟಿನ್ ಗಪ್ಟಿಲ್ ಅವರನ್ನು ಕೈಬಿಡಲಾಗಿದೆ.

ತಂಡದಿಂದ ಕೈಬಿಟ್ಟ ಏಕೈಕ ಗಮನಾರ್ಹ ಲೋಪವೆಂದರೆ ಟ್ರೆಂಟ್ ಬೌಲ್ಟ್
ಟಿಮ್ ಸೌಥಿ, ಮ್ಯಾಟ್ ಹೆನ್ರಿ ಅವರನ್ನು ಏಕದಿನ ಸರಣಿಗೆ ಮಾತ್ರ ಪರಿಗಣಿಸಿದ್ದು, ಲ್ಯೂಕಿ ಫರ್ಗುಸನ್, ಬ್ಲೇರ್ ಟಿಕ್ನರ್ ಮತ್ತು ಆಡಮ್ ಮಿಲ್ನೆ ವೇಗದ ಬೌಲಿಂಗ್ ಶಕ್ತಿಯಾಗಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ತಂಡದಿಂದ ಕೈಬಿಟ್ಟ ಏಕೈಕ ಗಮನಾರ್ಹ ಲೋಪವೆಂದರೆ ಅದು ಟ್ರೆಂಟ್ ಬೌಲ್ಟ್.
ಆಡಮ್ ಮಿಲ್ನೆ ಅವರು 2017ರಿಂದ ಏಕದಿನ ಸರಣಿ ಆಡುವ ತಂಡದಲ್ಲಿ ಮೊದಲ ಸಾಲಿನಲ್ಲಿದ್ದಾರೆ ಮತ್ತು ಇತ್ತೀಚಿನ ತ್ರಿಕೋನ ಸರಣಿ ಮತ್ತು ಕಳೆದ ವರ್ಷ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಟಿ20 ಕ್ರಿಕೆಟ್‌ಗೆ ಮರಳಿದರು.

ತಂಡವು ಭವಿಷ್ಯವನ್ನು ನೋಡಬೇಕಾಗಿದೆ ಎಂದ ಕೋಚ್
ನ್ಯೂಜಿಲೆಂಡ್ ತಂಡದ ಮುಖ್ಯ ತರಬೇತುದಾರ ಗ್ಯಾರಿ ಸ್ಟೆಡ್ ಈ ಕುರಿತು ಮಾತನಾಡಿ, ಹಿರಿಯ ಆಟಗಾರರಾದ ಟ್ರೆಂಟ್ ಬೌಲ್ಟ್ ಮತ್ತು ಮಾರ್ಟಿನ್ ಗಪ್ಟಿಲ್ ಅವರಂತಹ ಅನುಭವಿಗಳನ್ನು ತಂಡದಿಂದ ಕೈ ಬಿಡುವುದು ಎಂದಿಗೂ ಸುಲಭವಲ್ಲ, ಆದರೆ ತಂಡವು ಭವಿಷ್ಯವನ್ನು ನೋಡಬೇಕಾಗಿದೆ ಎಂದು ಹೇಳಿದರು.
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದ ವೇಳೆ ಜೇಮ್ಸ್ ನೀಶಾಮ್ ಅವರು ಮದುವೆಗೆ ತಯಾರಿ ಮಾಡಿಕೊಳ್ಳುತ್ತಿದ್ದು, ಅವರಿಗೆ ಮೂರನೇ ಏಕದಿನ ತಂಡದಿಂದ ವಿನಾಯಿತಿ ನೀಡಲಾಗಿದೆ. ಜೇಮ್ಸ್ ನೀಶಾಮ್ ಬದಲಿಗೆ ಹೆನ್ರಿ ನಿಕೋಲ್ಸ್ ಬದಲಿ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ. ಗಾಯಗಳಿಂದಾಗಿ ಬೆನ್ ಸಿಯರ್ಸ್ ಮತ್ತು ಕೈಲ್ ಜೇಮಿಸನ್ ಅವರು ಬೆನ್ನು ನೋವು ಕಾರಣದಿಂದ ಆಯ್ಕೆ ಮಾಡಲಾಗಿಲ್ಲ.

ನ್ಯೂಜಿಲೆಂಡ್‌ನಲ್ಲಿ ಭಾರತ ತಂಡದ ಪ್ರವಾಸದ ವಿವರ
ವೆಲ್ಲಿಂಗ್ಟನ್- ಮೊದಲ ಟಿ20 ಪಂದ್ಯ (ನವೆಂಬರ್ 18)
ಮೌಂಟ್ ಮೌಂಗನುಯಿ- ಎರಡನೇ ಟಿ20 ಪಂದ್ಯ (ನವೆಂಬರ್ 20)
ನೇಪಿಯರ್- ಮೂರನೇ ಟಿ20 ಪಂದ್ಯ (ನವೆಂಬರ್ 22)
ಆಕ್ಲೆಂಡ್- ಮೊದಲ ಏಕದಿನ ಪಂದ್ಯ (ನವೆಂಬರ್ 25)
ಹ್ಯಾಮಿಲ್ಟನ್- ಎರಡನೇ ಏಕದಿನ ಪಂದ್ಯ (ನವೆಂಬರ್ 27)
ಕ್ರೈಸ್ಟ್‌ಚರ್ಚ್- ಮೂರನೇ ಏಕದಿನ ಪಂದ್ಯ (ನವೆಂಬರ್ 30)

ಟಿ20 ತಂಡಕ್ಕೆ ಡೆವೊನ್ ಕಾನ್ವೇ ವಿಕೆಟ್-ಕೀಪರ್
ಭಾರತ ವಿರುದ್ಧದ ಏಕದಿನ ಸರಣಿಯ ವೇಳೆ ಕಿವೀಸ್‌ನ 33 ವರ್ಷ ವಯಸ್ಸಿನ ಟಿಮ್ ಸೌಥಿಗೆ 200ನೇ ಏಕದಿನ ವಿಕೆಟ್ ಪಡೆಯುವ ಅವಕಾಶವಿದ್ದು, ಈ ಮೈಲಿಗಲ್ಲನ್ನು ತಲುಪುವ ಮೂಲಕ, ಈ ಸಾಧನೆ ಮಾಡಿದ ನ್ಯೂಜಿಲೆಂಡ್‌ನ ಐದನೇ ಬೌಲರ್ ಆಗಲಿದ್ದಾರೆ. ಸದ್ಯ ಟಿಮ್ ಸೌಥಿ 199 ವಿಕೆಟ್ ಪಡೆದಿದ್ದಾರೆ. ಟಿ20 ತಂಡಕ್ಕೆ ಡೆವೊನ್ ಕಾನ್ವೇ ವಿಕೆಟ್-ಕೀಪರ್ ಆಗಿ ಆಯ್ಕೆಯಾಗಿದ್ದು, ಟಾಮ್ ಲ್ಯಾಥಮ್ ಏಕದಿನ ತಂಡಕ್ಕೆ ವಿಕೆಟ್-ಕೀಪರ್ ಆಗಿ ಮರಳಿದ್ದಾರೆ.
ಮೊದಲ ಟಿ20 ಪಂದ್ಯ ವೆಲ್ಲಿಂಗ್ಟನ್ ನಡೆಯುವುದರಿಂದ, ಬುಧವಾರ ಕಿವೀಸ್ ತಂಡವು ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂಗೆ ಬರಲಿದೆ. ಕೇನ್ ವಿಲಿಯಮ್ಸನ್ ಎರಡೂ ತಂಡಗಳ ನಾಯಕತ್ವ ವಹಿಸಿದ್ದಾರೆ.

ಭಾರತ ವಿರುದ್ಧ ಟಿ20 ಮತ್ತು ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ
ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಲ್ಯೂಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಗ್ಲೆನ್ ಫಿಲಿಪ್ಸ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಬ್ಲೇರ್ ಟಿಕ್ನರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications