IND vs NZ: 42ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ ರೋಹಿತ್ ಶರ್ಮಾ; ಸಕ್ರಿಯ ಆಟಗಾರರ ಪೈಕಿ ಜಂಟಿ 4ನೇ ಸ್ಥಾನ

ಮಂಗಳವಾರ, ಜನವರಿ 24ರಂದು ಇಂದೋರ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕಾ ಬಾರಿಸಿ ಫಾರ್ಮ್‌ಗೆ ಮರಳಿದರು.
ಬರೋಬ್ಬರಿ ಮೂರು ವರ್ಷಗಳ ನಂತರ ಏಕದಿನ ಶತಕ ಬಾರಿಸಿ, ಶತಕದ ಬರ ನೀಗಿಸಿಕೊಂಡ ಹಿಟ್‌ಮ್ಯಾನ್ ರೋಹಿತ್ ಶರ್ಮಾ, ಇದೀಗ 30ನೇ ಶತಕ ಬಾರಿಸುವ ಮೂಲಕ ಅತಿ ಹೆಚ್ಚು ಏಕದಿನ ಶತಕ ಗಳಿಸಿದವರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಅವರೊಂದಿಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ 375 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ 30 ಶತಕಗಳನ್ನು ಪೂರ್ಣಗೊಳಿಸಿದ್ದು, ರೋಹಿತ್ ತಮ್ಮ 241ನೇ ಪಂದ್ಯದಲ್ಲಿ ಈ ಮೈಲಿಗಲ್ಲನ್ನು ಪೂರ್ಣಗೊಳಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಇದೀಗ ರೋಹಿತ್ ಶರ್ಮಾ ಕೂಡ ರಿಕಿ ಪಾಂಟಿಂಗ್ ಅಅವರೊಂದಿಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿ
1) ಸಚಿನ್ ತೆಂಡೂಲ್ಕರ್- 49 ಶತಕಗಳು
2) ವಿರಾಟ್ ಕೊಹ್ಲಿ - 46 ಶತಕಗಲು
3) ರಿಕಿ ಪಾಂಟಿಂಗ್- 30 ಶತಕಗಳು
4) ರೋಹಿತ್ ಶರ್ಮಾ- 30 ಶತಕಗಳು

ಸಕ್ರಿಯ ಕ್ರಿಕೆಟ್ ಆಡುತ್ತಿರುವವರ ಪೈಕಿ ರೋಹಿತ್ ಶರ್ಮಾ ಜಂಟಿ 4ನೇ ಸ್ಥಾನ
ಇದೇ ವೇಳೆ ಸಕ್ರಿಯ ಕ್ರಿಕೆಟ್ ಆಡುತ್ತಿರುವ ಆಟಗಾರರ ಪೈಕಿ ರೋಹಿತ್ ಶರ್ಮಾ 42ನೇ ಅಂತಾರಾಷ್ಟ್ರೀಯ ಶತಕ ಬಾರಿಸಿ, ಒಟ್ಟಾರೆ ಶತಕ ಗಳಿಸಿದವರ ಪೈಕಿ ರೋಹಿತ್ ಶರ್ಮಾ ಜಂಟಿ 4ನೇ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿ 74 ಶತಕಗಳೊಂದಿಗೆ ಭಾರತದವರೇ ಆದ ವಿರಾಟ್ ಕೊಹ್ಲಿ ಇದ್ದಾರೆ.
ಅಸ್ಟ್ರೇಲಿಯಾದ ಡೇವಿಡ್ ವಾರ್ನರ್ 45 ಶತಕಗಳೊಂದಿಗೆ ಸಕ್ರಿಯ ಆಟಗಾರರ ಪೈಕಿ 2ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಜೋ ರೂಟ್ 44 ಅಂತಾರಾಷ್ಟ್ರೀಯ ಶತಕಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
ಇನ್ನು ಆಸ್ಟ್ರೇಲಿಯಾದ ಮತ್ತೊಬ್ಬ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅವರು 42 ಶತಕಗಳನ್ನು ಬಾರಿಸುವ ಮೂಲಕ 4ನೇ ಸ್ಥಾನದಲ್ಲಿದ್ದಾರೆ. ಇದೀಗ ಭಾರತದ ನಾಯಕ ರೋಹಿತ್ ಶರ್ಮಾ ಕೂಡ 42 ಶತಕ ಬಾರಿಸುವುದರೊಂದಿಗೆ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಸಕ್ರಿಯ ಆಟಗಾರರಲ್ಲಿ ಹೆಚ್ಚು ಅಂತಾರಾಷ್ಟ್ರೀಯ ಶತಕ ಬಾರಿಸಿದವರು
1) ವಿರಾಟ್ ಕೊಹ್ಲಿ - 74 ಶತಕಗಳು
2) ಡೇವಿಡ್ ವಾರ್ನರ್ - 45 ಶತಕಗಳು
3) ಜೋ ರೂಟ್ - 44 ಶತಕಗಳು
4) ಸ್ಟೀವ್ ಸ್ಮಿತ್ - 42 ಶತಕಗಳು
5) ರೋಹಿತ್ ಶರ್ಮಾ - 42 ಶತಕಗಳು

ರೋಹಿತ್ ಶರ್ಮಾ 2020ರ ಜನವರಿ 19ರಂದು ಕೊನೆಯ ಏಕದಿನ ಶತಕ
ರೋಹಿತ್ ಶರ್ಮಾ 2020ರ ಜನವರಿ 19ರಂದು ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಬಾರಿಗೆ ಏಕದಿನ ಶತಕ ಬಾರಿಸಿದ್ದರು. ಅಂದಿನಿಂದ 3 ವರ್ಷಗಳಲ್ಲಿ ರೋಹಿತ್ ಶರ್ಮಾ ಐದು ಏಕದಿನ ಅರ್ಧಶತಕಗಳನ್ನು ಗಳಿಸಿದ್ದಾರೆ. ಆದರೆ ಅವರು ಶತಕದ ಸಮೀಪ ಬಂದಿರಲಿಲ್ಲ. ರೋಹಿತ್ ಶರ್ಮಾ 2021ರಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಒಂದು ಅಮೋಘ ಟೆಸ್ಟ್ ಶತಕವನ್ನು ಬಾರಿಸಿದ್ದರು. ಆದರೆ ರೋಹಿತ್ ಏಕದಿನ ಕ್ರಿಕೆಟ್ ಫಾರ್ಮ್ ಕಳವಳಕಾರಿಯಾಗಿತ್ತು. ಇದೀಗ ಮತ್ತೆ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications