For Quick Alerts
ALLOW NOTIFICATIONS  
For Daily Alerts
 

IND vs NZ: ಸತತ 2ನೇ ODI ಶತಕ ಸಿಡಿಸಿ, ಈ ಸಾಧನೆಗೈದ ಮೊದಲ ಭಾರತೀಯ ಎನಿಸಿಕೊಂಡ ಶುಭ್ಮನ್ ಗಿಲ್

IND vs NZ: Shubman Gill Becomes The Fastest Indian To Reach 1,000 ODI Runs

ಬುಧವಾರ, ಜನವರಿ 18ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಅಮೋಘ ಶತಕ ಬಾರಿಸಿದರು.

ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಮೂರನೇ ಹಾಗೂ ಸತತ ಎರಡನೇ ಶತಕ ಸಿಡಿಸುವ ಮೂಲಕ ಶುಭಮನ್ ಗಿಲ್ 50 ಓವರ್‌ಗಳ ಸ್ವರೂಪದಲ್ಲಿ ಉತ್ತಮ ಫಾರ್ಮ್ ಅನ್ನು ಮುಂದುವರೆಸಿದರು. ಭಾರತದ ಅಗ್ರ ಕ್ರಮಾಂಕದ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡರು.

ಇದೇ ವೇಳೆ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶುಭ್ಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಶುಭ್ಮನ್ ಗಿಲ್ ತಮ್ಮ 19ನೇ ಏಕದಿನ ಇನ್ನಿಂಗ್ಸ್‌ನಲ್ಲಿ 106 ರನ್‌ಗಳನ್ನು ತಲುಪಿದಾಗ 1000 ರನ್‌ಗಳ ಗಡಿಯನ್ನು ದಾಟಿದರು. ಇದರೊಂದಿಗೆ ಶುಭ್ಮನ್ ಗಿಲ್ ಅವರು 1000 ರನ್‌ ಗಳಿಸಲು 24 ಇನ್ನಿಂಗ್ಸ್ ತೆಗೆದುಕೊಂಡಿದ್ದ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರನ್ನು ಹಿಂದಿಕ್ಕಿ ಅತ್ಯಂತ ವೇಗದ ಭಾರತೀಯ ಮತ್ತು ವಿಶ್ವದ ಜಂಟಿ ಎರಡನೇ ವೇಗದ ಸಾಧನೆ ಮಾಡಿದರು.

ಶುಭ್ಮನ್ ಗಿಲ್ 19 ಇನ್ನಿಂಗ್ಸ್‌ಗಳಲ್ಲಿ 1000 ರನ್‌ಗಳ ಗಡಿಯನ್ನು ದಾಟಲು ಪಾಕಿಸ್ತಾನದ ಇಮಾನ್-ಉಲ್-ಹಕ್‌ ಅವರ ಸಾಧನೆಯನ್ನು ಸರಿಗಟ್ಟಿದರು. ಆದರೆ ಫಖರ್ ಜಮಾನ್ ಅವರ 18 ಇನ್ನಿಂಗ್ಸ್‌ಗಳಲ್ಲಿ ವೇಗವಾಗಿ 1000 ಏಕದಿನ ರನ್‌ಗಳ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ.

IND vs NZ: Shubman Gill Becomes The Fastest Indian To Reach 1,000 ODI Runs

ಇತ್ತೀಚಿಗೆ ತಿರುವನಂತಪುರಂನಲ್ಲಿ ಶ್ರೀಲಂಕಾ ವಿರುದ್ಧ ನಡೆದ 3ನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಶುಭ್ಮನ್ ಗಿಲ್ (116 ರನ್), ನ್ಯೂಜಿಲೆಂಡ್ ವಿರುದ್ಧವೂ ಅದ್ಭುತ ಫಾರ್ಮ್ ಮುಂದುವರೆಸುವ ಮೂಲಕ ಸತತ ಎರಡನೇ ಶತಕ ದಾಖಲಿಸಿದರು.

ಸರ್ ವಿವ್ ರಿಚರ್ಡ್ಸ್, ಕೆವಿನ್ ಪೀಟರ್ಸನ್, ಕ್ವಿಂಟನ್ ಡಿ ಕಾಕ್, ಬಾಬರ್ ಅಜಂ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರಂತಹ ಆಟಗಾರರು 21ನೇ ಪಂದ್ಯದಲ್ಲಿ 1000 ಏಕದಿನ ರನ್‌ಗಳನ್ನು ಗಳಿಸಿದ್ದವರನ್ನು ಶುಭ್ಮನ್ ಗಿಲ್ ಹಿಂದಿಕ್ಕಿದರು.

ನ್ಯೂಜಿಲೆಂಡ್ ವಿರುದ್ಧ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಭಾರತದ ಇನ್ನಿಂಗ್ಸ್ ಆರಂಭಿಸಿದ 23 ವರ್ಷ ವಯಸ್ಸಿನ ಶುಭ್ಮನ್ ಗಿಲ್ ಮೊದಲ ವಿಕೆಟ್‌ಗೆ 60 ರನ್ ಜೊತೆಯಾಟ ನೀಡಿದರು.

ರೋಹಿತ್ ಶರ್ಮಾ 34 ರನ್‌ಗಳಿಗೆ ಬ್ಲೇರ್ ಟಿಕೆನರ್ ಅವರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿರಾಟ್ ಕೊಹ್ಲಿ ಅವರು ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು.

ಶುಭ್ಮನ್ ಗಿಲ್ 87 ಎಸೆತಗಳಲ್ಲಿ 100 ರನ್‌ಗಳ ಗಡಿ ದಾಟಿದರು ಮತ್ತು ಆ ವೇಳೆಗೆ ಅವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡಿದ್ದವು.

Story first published: Wednesday, January 18, 2023, 16:31 [IST]
Other articles published on Jan 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+