For Quick Alerts
ALLOW NOTIFICATIONS  
For Daily Alerts
 

IND vs NZ: 3 ಪಂದ್ಯಗಳ ODI ಸರಣಿಯಲ್ಲಿ ಬಾಬರ್ ಅಜಂ ದಾಖಲೆ ಸರಿಗಟ್ಟಿದ ಶುಭ್ಮನ್ ಗಿಲ್

IND vs NZ: Shubman Gill Equals Babar Azams Record After Scored 360 Runs In 3-match ODI Series

ಮಂಗಳವಾರ, ಜನವರಿ 24ರಂದು ಇಂದೋರ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಭರ್ಜರಿ ಶತಕ ಬಾರಿಸಿ ಮಿಂಚಿದರು.

ಶುಭ್ಮನ್ ಗಿಲ್ 78 ಎಸೆತಗಳಲ್ಲಿ 13 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 112 ರನ್ ಗಳಿಸಿದರು. ಈ ಏಕದಿನ ಸರಣಿಯಲ್ಲಿ ಶುಭ್ಮನ್ ಗಿಲ್‌ಗೆ ಎರಡನೇ ಶತಕವಾಗಿದೆ.

ಕಳೆದ ಒಂದು ವರ್ಷದಿಂದ ಭಾರತದ ಬ್ಯಾಟಿಂಗ್ ಲೈನ್‌ಅಪ್‌ನ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿರುವ ಶುಭ್ಮನ್ ಗಿಲ್, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ.

ಶುಭ್ಮನ್ ಗಿಲ್ 180ರ ಸರಾಸರಿಯಲ್ಲಿ 360 ರನ್

ಶುಭ್ಮನ್ ಗಿಲ್ 180ರ ಸರಾಸರಿಯಲ್ಲಿ 360 ರನ್

ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭ್ಮನ್ ಗಿಲ್ 180ರ ಸರಾಸರಿಯಲ್ಲಿ 360 ರನ್ ಗಳಿಸಿದ್ದಾರೆ. ಈ ಹಿಂದೆ ಬಾಬರ್ ಅಜಂ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 360 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರು ದ್ವಿಶತಕ (208) ಬಾರಿಸಿರುವುದು ಮತ್ತೊಂದು ವಿಶೇಷವಾಗಿದೆ.

3 ಪಂದ್ಯಗಳ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳು

3 ಪಂದ್ಯಗಳ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳು

1) ಬಾಬರ್ ಅಜಂ - ವೆಸ್ಟ್ ಇಂಡೀಸ್ ವಿರುದ್ಧ (2016)- 360 ರನ್

2) ಶುಭ್ಮನ್ ಗಿಲ್- ನ್ಯೂಜಿಲೆಂಡ್ ವಿರುದ್ಧ (2023)- 360 ರನ್

3) ಇಮ್ರುಲ್ ಕೇಯೆಸ್ - ಜಿಂಬಾಬ್ವೆ ವಿರುದ್ಧ (2018)- 349 ರನ್

4) ಕ್ವಿಂಟನ್ ಡಿ ಕಾಕ್- ಭಾರತ ವಿರುದ್ಧ (2013)- 342 ರನ್

5) ಮಾರ್ಟಿನ್ ಗಪ್ಟಿಲ್- ಇಂಗ್ಲೆಂಡ್ ವಿರುದ್ಧ (2013)- 330 ರನ್

ಶುಭ್ಮನ್ ಗಿಲ್ 21 ಏಕದಿನ ಪಂದ್ಯಗಳಲ್ಲಿ 1254 ರನ್

ಶುಭ್ಮನ್ ಗಿಲ್ 21 ಏಕದಿನ ಪಂದ್ಯಗಳಲ್ಲಿ 1254 ರನ್

ಶುಭ್ಮನ್ ಗಿಲ್ ಇದುವರೆಗಿನ 21 ಏಕದಿನ ಪಂದ್ಯಗಳಲ್ಲಿ 73.76ರ ಸರಾಸರಿಯಲ್ಲಿ 1254 ರನ್ ಗಳಿಸಿದ್ದಾರೆ. 109.81ರ ಸ್ಟ್ರೈಕ್‌ರೇಟ್‌ನೊಂದಿಗೆ ನಾಲ್ಕು ಶತಕ ಮತ್ತು ಒಂದು ಅರ್ಧಶತಕಗಳನ್ನು ಬಾರಿಸಿದ್ದಾರೆ.

ಇದೇ ವೇಳೆ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಆರಂಭಿಕ ಜೋಡಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 212 ರನ್‌ಗಳ ಜೊತೆಯಾಟದ ಮೂಲಕ ಭಾರತ ತಂಡದ ಪರ ಅತ್ಯಧಿಕ ಆರಂಭಿಕ ಜೊತೆಯಾಟ ನೀಡಿದ್ದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಜೋಡಿಯ ದಾಖಲೆಯನ್ನು ಮುರಿದರು.

2009ರ ಮಾರ್ಚ್‌ನಲ್ಲಿ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಜೋಡಿಯು ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ಮುರಿಯದ ಮೊದಲ ವಿಕೆಟ್‌ಗೆ 201 ರನ್ ಜೊತೆಯಾಟ ನಡೆಸಿದ್ದರು. ಆ ಪಂದ್ಯವನ್ನು ಭಾರತ ತಂಡ ಡಕ್ವರ್ಥ್ ಲೂಯಿಸ್ ನಿಯಮದನ್ವಯ 84 ರನ್‌ಗಳಿಂದ ಗೆದ್ದುಕೊಂಡಿತ್ತು.

Story first published: Tuesday, January 24, 2023, 19:20 [IST]
Other articles published on Jan 24, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+