For Quick Alerts
ALLOW NOTIFICATIONS  
For Daily Alerts
 

IND vs NZ: ಏಕದಿನ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಸೂರ್ಯಕುಮಾರ್; ಎರಡು ಬದಲಾವಣೆ ಮಾಡಿದ ಭಾರತ

ಭಾನುವಾರ, ಅಕ್ಟೋಬರ್ 22ರಂದು ಧರ್ಮಶಾಲಾದ ಹೆಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ತಮ್ಮ ಗುಂಪು ಹಂತದ ಪಂದ್ಯಕ್ಕಾಗಿ ಭಾರತ ತಂಡವು ತಮ್ಮ ಆಡುವ 11ರ ಬಳಗದಲ್ಲಿ ಎರಡು ನಿರ್ಣಾಯಕ ಬದಲಾವಣೆಗಳನ್ನು ಮಾಡಿದೆ.

ಭಾರತ ತಂಡವು ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್‌ಗೆ ಏಕದಿನ ವಿಶ್ವಕಪ್ ಚೊಚ್ಚಲ ಪಂದ್ಯವಾಡುವ ಅವಕಾಶ ನೀಡಿದರೆ, ಪಂದ್ಯಾವಳಿಯಲ್ಲಿನ ಉನ್ನತ ಮಟ್ಟದ ಪಂದ್ಯಕ್ಕಾಗಿ ಮೊಹಮ್ಮದ್ ಶಮಿಯನ್ನು ಕರೆದುಕೊಂಡು ಬಂದಿದೆ.

IND vs NZ: Suryakumar Yadav ODI World Cup Debut; India Made Two Changes Against New Zealand

ಹಿಂದಿನ ಪಂದ್ಯದಲ್ಲಿ ಗಾಯಗೊಂಡು ತಂಡವನ್ನು ಸೇರಲು ಅಸಾಧ್ಯವಾಗಿರುವ ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ. ಮತ್ತೊಂದೆಡೆ, ಸದ್ಯ ನಡೆಯುತ್ತಿರುವ ಆವೃತ್ತಿಯ ತನ್ನ ಮೊದಲ ಪಂದ್ಯವನ್ನು ಆಡುತ್ತಿರುವ ಮೊಹಮ್ಮದ್ ಶಮಿ ಅವರನ್ನು ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಬದಲಿಗೆ ಆಯ್ಕೆಯಾಗಿದ್ದಾರೆ.

ಒಬ್ಬ ಆಲ್‌ರೌಂಡರ್ ಪಂದ್ಯವನ್ನು ತಪ್ಪಿಸಿಕೊಂಡಿದ್ದಕ್ಕೆ ಭಾರತ ತಂಡ ಎರಡು ಬದಲಾವಣೆ ಮಾಡಬೇಕಾಯಿತು. ಏಕೆಂದರೆ, ತಂಡವನ್ನು ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸಮತೋಲನಗೊಳಿಸಲು ಭಾರತ ತಂಡದ ಮ್ಯಾನೇಜ್‌ಮೆಂಟ್ ಈ ನಿರ್ಧಾರ ತೆಗೆದುಕೊಂಡಿದೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ವೇಳೆ ಮಾತನಾಡಿ, ಗೆಲುವಿನ ಆವೇಗವನ್ನು ಮುಂದುವರಿಸುವುದು ಮುಖ್ಯ. ನಂತರ, ತಂಡದಲ್ಲಿ ಮಾಡಿದ ಬದಲಾವಣೆಗಳಾಗಿವೆ ಎಂದು ಹೇಳಿದರು.

IND vs NZ: Suryakumar Yadav ODI World Cup Debut; India Made Two Changes Against New Zealand

"ಗೆಲುವಿನ ಆವೇಗವನ್ನು ಮುಂದುವರಿಸುವುದು ನಮಗೆ ಬಹಳ ಮುಖ್ಯವಾಗಿದೆ. ಹಿಂದೆ ಏನಾಯಿತು ಎಂಬುದನ್ನು ಮರೆಯಬೇಕು. ಏಕೆಂದರೆ ಪ್ರತಿದಿನವೂ ಮೊದಲ ಅವಕಾಶವನ್ನು ನೀಡುತ್ತದೆ. ಈ ಪಂದ್ಯಾವಳಿಯ ಸ್ವರೂಪ ನಮಗೆ ತಿಳಿದಿದೆ. ಎಲ್ಲಾ ತಂಡಗಳು ಸೋಲಿಸುವ ಸಾಮರ್ಥ್ಯವನ್ನು ಹೊಂದಿವೆ," ಎಂದು ರೋಹಿತ್ ಶರ್ಮಾ ಹೇಳಿದರು.

ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶ ವಿರುದ್ಧ ಪಂದ್ಯದ ಒಂಬತ್ತನೇ ಓವರ್‌ನಲ್ಲಿ ಆರಂಭಿಕ ಬ್ಯಾಟರ್ ಲಿಟ್ಟನ್ ದಾಸ್‌ಗೆ ಎರಡನೇ ಎಸೆತವನ್ನು ಎಸೆದ ನಂತರ, ತನ್ನ ಫಾಲೋ-ಥ್ರೂನಲ್ಲಿ ಚೆಂಡನ್ನು ತಡೆಯಲು ಬಲಗಾಲನ್ನು ಬಳಸಲು ವಿಫಲ ಪ್ರಯತ್ನ ಮಾಡಿದರು. ಚೆಂಡು ಬೌಂಡರಿಗೆ ಓಡಿತು, ಆದರೆ, ಪಾಂಡ್ಯ ಪಾದಕ್ಕೆ ಗಾಯ ಮಾಡಿಕೊಂಡು ನೆಲಕ್ಕೆ ಬಿದ್ದರು.

ತೀವ್ರವಾಗಿ ಗಾಯಗೊಂಡ ಹಾರ್ದಿಕ್ ಪಾಂಡ್ಯ ತನ್ನ ಬೌಲಿಂಗ್ ರನ್-ಅಪ್ ಕಡೆಗೆ ಹೋಗುತ್ತಿರುವುದನ್ನು ಗಮನಿಸಲಾಯಿತು. ನೋವಿನ ನಡುವೆಯೂ ಬೌಲಿಂಗ್ ಮಾಡಲು ಯತ್ನಿಸಿದ ಹಾರ್ದಿಕ್ ಕಂಡು ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರಿಂದ ಉತ್ಸಾಹಭರಿತ ಹರ್ಷೋದ್ಗಾರ ಕೇಳಿಬಂತು.

ಹಾರ್ದಿಕ್ ಪಾಂಡ್ಯ ಆರಂಭದಲ್ಲಿ ಬೌಲಿಂಗ್ ಮುಂದುವರಿಸಲು ನಿರ್ಧರಿಸಿದ್ದರೂ, ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೊನೆಯ ಕ್ಷಣದಲ್ಲಿ ಚರ್ಚಿಸಿ ನಿರ್ಧಾರ ಬದಲಿಸಿದರು. ಹಾರ್ದಿಕ್ ಪಾಂಡ್ಯ ಮೈದಾನವನ್ನು ತೊರೆಯುವಂತೆ ಸಲಹೆ ನೀಡಿದರು.

ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಪ್ರಮುಖ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ ಮತ್ತು ಲಕ್ನೋದಲ್ಲಿ ಅಕ್ಟೋಬರ್ 29ರಂದು ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ನೇರವಾಗಿ ತಂಡವನ್ನು ಮತ್ತೆ ಸೇರಿಕೊಳ್ಳುತ್ತಾರೆ ಎಂದು ಭಾರತ ತಂಡವು ನಂತರ ಖಚಿತಪಡಿಸಿದೆ.

ಗಾಯಗೊಳ್ಳುವ ಮೊದಲು, ವಿಶ್ವಕಪ್ ಪಂದ್ಯಾವಳಿಯಲ್ಲಿ ಐದು ವಿಕೆಟ್‌ಗಳನ್ನು ಪಡೆದಿರುವ ಹಾರ್ದಿಕ್ ಪಾಂಡ್ಯ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದರು. ಆಲ್‌ರೌಂಡರ್ ಆಗಿ ಅವರ ನಿರ್ಣಾಯಕ ಪಾತ್ರವನ್ನು ಗಮನಿಸಿದರೆ ಅವರ ಅನುಪಸ್ಥಿತಿಯು ಗಮನಾರ್ಹ ಹಿನ್ನಡೆಯಾಗಿದೆ.

Story first published: Sunday, October 22, 2023, 15:16 [IST]
Other articles published on Oct 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+