IND vs NZ: ಐರ್ಲೆಂಡ್ ಬೌಲರ್ ವಿಶ್ವದಾಖಲೆ ಮುರಿಯುವ ಸನಿಹದಲ್ಲಿ ಭುವನೇಶ್ವರ್ ಕುಮಾರ್

ನವೆಂಬರ್ 18ರಿಂದ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ ಮತ್ತು ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡಗಳ ನಡುವೆ ಟಿ20 ಸರಣಿ ಆರಂಭವಾಗಲಿದೆ.
ಪ್ರವಾಸಿ ಭಾರತ ತಂಡ ಯುವ ಆಟಗಾರರಿಂದ ಕೂಡಿದ್ದು, ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ವೆಲ್ಲಿಂಗ್ಟನ್‌ನಲ್ಲಿ ನಡೆಯುವ ಮೊದಲ ಟಿ20 ಪಂದ್ಯದಲ್ಲಿ ಎರಡೂ ತಂಡಗಳು ಸೆಣಸಾಡಲಿದ್ದು, ಟಿ20 ಸರಣಿಯಲ್ಲಿ ಭಾರತದ ಬಲಗೈ ವೇಗಿ ಭುವನೇಶ್ವರ್ ಕುಮಾರ್ ಪ್ರಮುಖ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ.
ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ವಿಕೆಟ್‌ಗಳನ್ನು ಪಡೆದ ಬೌಲರ್ ಆಗಲು ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್‌ಗೆ ಕೇವಲ ನಾಲ್ಕು ವಿಕೆಟ್‌ಗಳ ಅಗತ್ಯವಿದೆ. ಐರ್ಲೆಂಡ್‌ನ ಎಡಗೈ ವೇಗದ ಬೌಲರ್ ಜೋಶುವಾ ಲಿಟಲ್ 26 ಪಂದ್ಯಗಳಿಂದ 7.58ರ ಎಕಾನಮಿಯಲ್ಲಿ 39 ವಿಕೆಟ್‌ಗಳನ್ನು ಪಡೆದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

30 ಪಂದ್ಯಗಳಿಂದ 36 ವಿಕೆಟ್‌ಗಳನ್ನು ಕಿತ್ತ ಭುವಿ
ಟಿ20 ವಿಶ್ವ ಕಪ್ 2022ರಲ್ಲಿ ಜೋಶುವಾ ಲಿಟಲ್ ಹ್ಯಾಟ್ರಿಕ್ ವಿಕೆಟ್ ಗಳಿಸಿದರು ಮತ್ತು ಹೀಗೆ ಮಾಡಿದ ಎರಡನೇ ಐರ್ಲೆಂಡ್ ಆಟಗಾರ ಎನಿಸಿಕೊಂಡರು. ಜೋಶುವಾ ಲಿಟಲ್ ಸೂಪರ್ 12ರ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಮೈಲಿಗಲ್ಲನ್ನು ಸಾಧಿಸಿದರು.
ಇನ್ನು ಭಾರತದ ವೇಗಿ ಭುವನೇಶ್ವರ್ ಕುಮಾರ್ ಅವರು ಟಿ20 ಪಂದ್ಯಗಳಲ್ಲಿ ಜೋಶುವಾ ಲಿಟಲ್ ಅವರು ಪಡೆದ ವಿಕೆಟ್‌ಗಳಿಗಿಂತ ಕೇವಲ ನಾಲ್ಕು ವಿಕೆಟ್‌ಗಳ ಹಿಂದಿದ್ದಾರೆ. ಪ್ರಸ್ತುತ ಭುವಿ ಅವರು 7ರ ಎಕಾನಮಿ ದರದಲ್ಲಿ 30 ಪಂದ್ಯಗಳಿಂದ 36 ವಿಕೆಟ್‌ಗಳನ್ನು ಕಿತ್ತಿದ್ದಾರೆ.

100 ವಿಕೆಟ್ ಪಡೆಯಲು ಕೇವಲ 11 ವಿಕೆಟ್‌ಗಳ ಕೊರತೆ
ಆಸ್ಟ್ರೇಲಿಯಾಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲಿ ಭುವನೇಶ್ವರ್ ಕುಮಾರ್ ಒಟ್ಟು ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ. ಭುವನೇಶ್ವರ್ ಕುಮಾರ್ ಹೆಚ್ಚಿನ ವಿಕೆಟ್ ಪಡೆದುಕೊಳ್ಳುವಲ್ಲಿ ವಿಫಲವಾದರೂ, 6.16ರ ಎಕಾನಮಿ ದರದಲ್ಲಿ ರನ್ ನೀಡಿರುವುದು ಉತ್ತಮವಾಗಿದೆ.
ಇನ್ನು ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಭುವನೇಶ್ವರ್ ಕುಮಾರ್‌ಗೆ ಕೇವಲ 11 ವಿಕೆಟ್‌ಗಳ ಕೊರತೆ ಇದೆ. ಅವರು ಈಗಾಗಲೇ ಟಿ20 ಪಂದ್ಯಗಳಲ್ಲಿ ಭಾರತ ತಂಡದ ಪ್ರಮುಖ ವಿಕೆಟ್ ಟೇಕರ್ ಬೌಲರ್ ಆಗಿದ್ದಾರೆ.

ನವೆಂಬರ್ 18ರಂದು ವೆಲ್ಲಿಂಗ್ಟನ್‌ನಲ್ಲಿ ಮೊದಲ ಟಿ20 ಪಂದ್ಯ
ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತದ ಮೊದಲ ಟಿ20 ಪಂದ್ಯ ಶುಕ್ರವಾರ, ನವೆಂಬರ್ 18ರಂದು ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂನಲ್ಲಿ ನಡೆಯಲಿದೆ.
ನವೆಂಬರ್ 10ರಂದು ಅಡಿಲೇಡ್ ಓವಲ್‌ನಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ ಸೋತು ಭಾರತ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದರೆ, ನ್ಯೂಜಿಲೆಂಡ್ ತಂಡವು ಪಾಕಿಸ್ತಾನ ವಿರುದ್ಧ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರನಡೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications