IND vs NZ 2nd T20I : ಮೌಂಟ್ ಮಂಗನುಯಿ ತಲುಪಿದ ಭಾರತ ತಂಡ, ಸಂಭಾವ್ಯ ಪ್ಲೇಯಿಂಗ್ XI, ಪಿಚ್, ಹವಾಮಾನ ವರದಿ

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲನೇ ಪಂದ್ಯ ಮಳೆಯಿಂದ ರದ್ದಾದ ಬಳಿಕ ಟೀಂ ಇಂಡಿಯಾ ಎರಡನೇ ಪಂದ್ಯವನ್ನಾಡಲು ಟೌರಂಗಕ್ಕೆ ಬಂದಿಳಿದಿದೆ. ಶನಿವಾರ ಮುಂಜಾನೆ ಟೌರಂಗ ತಲುಪಿದ ಹಾರ್ದಿಕ್ ಪಾಂಡ್ಯ ಪಡೆಯನ್ನು ಮಳೆ ಸ್ವಾಗತಿಸಿದೆ. ಭಾನುವಾರದ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ.
ನವೆಂಬರ್ 18ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಬೇಕಿದ್ದ ಮೊದಲನೇ ಟಿ20 ಪಂದ್ಯ ಮಳೆಯಿಂದಾಗಿ ಟಾಸ್ ಕೂಡ ಕಾಣದೆ ರದ್ದಾಯಿತು. ಎರಡನೇ ಪಂದ್ಯ ನಡೆಯುವ ಬಗ್ಗೆ ಉಭಯ ತಂಡಗಳು ವಿಶ್ವಾಸದಲ್ಲಿವೆ. ಇಲ್ಲಿನ ಮೌಂಟ್ ಮಂಗನುಯಿಯ ಬೇ ಓವೆಲ್‌ನಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ.
ಟೀಂ ಇಂಡಿಯಾ ಆಟಗಾರರು ಟೌರಂಗಕ್ಕೆ ಬಂದಿಳಿದ ಫೋಟೊಗಳನ್ನು ಬಿಸಿಸಿಐ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ದೀಪಕ್ ಹೂಡಾ ಮತ್ತು ವಾಷಿಂಗ್ಟನ್ ಸುಂದರ್ ಸೇರಿದಂತೆ ಟೀಂ ಇಂಡಿಯಾ ಆಟಗಾರರು ಟೌರಂಗ ತಲುಪಿದ್ದಾರೆ.
ಬಲಿಷ್ಠ ಕಿವೀಸ್ ಪಡೆ ವಿರುದ್ಧ ನಾಯಕನಾಗಿ ತಮ್ಮ ಸಾಮರ್ಥ್ಯ ವ್ಯಕ್ತಪಡಿಸುವ ಹಾರ್ದಿಕ್ ಪಾಂಡ್ಯ ಅವಕಾಶಕ್ಕೆ ಮಳೆ ಅಡ್ಡಿಮಾಡಿತ್ತು. ಎರಡನೇ ಪಂದ್ಯ ನಡೆಯುವ ವಿಶ್ವಾಸವಿದ್ದು, ಪಾಂಡ್ಯ ನಾಯಕತ್ವದಲ್ಲಿ ಸರಣಿಯ ಮೊದಲ ಗೆಲುವಿನ ವಿಶ್ವಾಸದಲ್ಲಿದೆ ಟೀಂ ಇಂಡಿಯಾ.

ಟಿ20 ನಾಯಕನಾಗಿ ಹಾರ್ದಿಕ್ ಮುಂದುವರಿಕೆ
ಟಿ20 ವಿಶ್ವಕಪ್ ಸೋಲಿನ ನಂತರ ಭಾರತ ಟಿ20 ತಂಡದಲ್ಲಿ ಹಲವು ಬದಲಾವಣೆ ಮಾಡಲು ಬಿಸಿಸಿಐ ಮುಂದಾಗಿದೆ. 2024ರಲ್ಲಿ ನಡೆಯುವ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಬಲಿಷ್ಠ ತಂಡ ನಿರ್ಮಿಸಲು ಹಲವು ಯುವಕರಿಗೆ ಅವಕಾಶ ನೀಡಿದೆ.
ರೋಹಿತ್ ಶರ್ಮಾರನ್ನು ಟಿ20 ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯರನ್ನು ಇನ್ನು ಮುಂದೆ ಟಿ20 ನಾಯಕರಾಗಿ ಮುಂದುವರೆಸಲು ಚಿಂತಿಸಿದೆ. ರೋಹಿತ್ ಶರ್ಮಾ ಏಕದಿನ ಮತ್ತು ಟೆಸ್ಟ್ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ.
ಹಾರ್ದಿಕ್ ಪಾಂಡ್ಯ ಈಗಾಗಲೇ ಐರ್ಲೆಂಡ್ ಪ್ರವಾಸದಲ್ಲಿ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಇದೇ ಯುವ ತಂಡವನ್ನು ಇಟ್ಟುಕೊಂಡು ಸರಣಿಯಲ್ಲಿ ಜಯ ಸಾಧಿಸಿದ್ದರು.
AUS vs ENG : ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ, ಎರಡೂ ತಂಡದ ನಾಯಕರೇ ಬದಲಾವಣೆ!

ಎರಡನೇ ಪಂದ್ಯಕ್ಕೂ ಮಳೆ ಕಾಟ
ವೆಲ್ಲಿಂಗ್ಟನ್‌ನಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾದ ನಂತರ ಎರಡನೇ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಮೌಂಟ್ ಮೌಂಗನುಯಿಯಲ್ಲಿ ಕೂಡ ಶನಿವಾರ ಮಳೆಯಾಗುತ್ತಿದ್ದು, ಭಾನುವಾರ ಕೂಡ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನ್ಯೂಜಿಲೆಂಡ್ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಭಾನುವಾರ ತುಂತುರು ಮಳೆಯಾಗುವ ಸಾಧ್ಯತೆ ಇದೆ. ತಾಪಮಾನ 15 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುತ್ತದೆ. ಪಂದ್ಯದ ಆರಂಭದಲ್ಲಿ ಮಳೆಯಾಗುವ ಸಾಧ್ಯತೆ ಶೇಕಡ 6 ರಷ್ಟಿದ್ದರು, ಪಂದ್ಯದ ಮಧ್ಯಂತರದಲ್ಲಿ ಮಳೆಯಾಗುವ ಸಾಧ್ಯತೆ ಶೇಕಡ 64 ರಷ್ಟಿದೆ.

ಮೌಂಟ್ ಮೌಂಗನುಯಿ ಪಿಚ್ ವರದಿ, ಸಂಭಾವ್ಯ ಪ್ಲೇಯಿಂಗ್ XI
ಮೌಂಟ್ ಮೌಂಗನುಯಿ ಬ್ಯಾಟರ್‌ಗಳಿಗೆ ಸ್ವರ್ಗವಾಗಿದೆ. ಚಿಕ್ಕ ಬೌಂಡರಿಗಳನ್ನು ಹೊಂದಿರುವ ಮೈದಾನದಲ್ಲಿ ಬೃಹತ್ ಮೊತ್ತವನ್ನು ಗಳಿಸಿದರೆ ಮಾತ್ರ ಗೆಲುವು ಸಾಧ್ಯ. ಇಲ್ಲಿ ಸರಾಸರಿ ಸ್ಕೋರ್ 165 ಆಗಿದೆ. ಒಟ್ಟು 12 ಟಿ20 ಪಂದ್ಯಗಳಲ್ಲಿ ಆರು ಬಾರಿ 180ಕ್ಕಿಂತ ಹೆಚ್ಚು ಸ್ಕೋರ್ ದಾಖಲಾಗಿದೆ.
ಭಾರತ: ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ (ನಾಯಕ), ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್
ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ) ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಆಡಮ್ ಮಿಲ್ನೆ, ಇಶ್ ಸೋಧಿ, ಲಾಕಿ ಫರ್ಗುಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications