ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ಕಿವೀಸ್ ನೆಲದಲ್ಲಿ ಭಾರತದ ಯುವ ಪಡೆಯ ಅಭ್ಯಾಸ ಶುರು, ವಿವಿಎಸ್ ಲಕ್ಷ್ಮಣ್‌ರಿಂದ ಪಾಠ

Ind Vs NZ: Team India Started Training Session In Wellington, Hardik and Kane Released Trophy

ನವೆಂಬರ್ 18 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಸಿದ್ಧತೆ ಆರಂಭಿಸಿದೆ. ವೆಲ್ಲಿಂಗ್ಟನ್‌ನಲ್ಲಿ ತಂಡ ಮೊದಲನೇ ಅಭ್ಯಾಸದ ಅವಧಿಯನ್ನು ಆರಂಭಿಸಿದೆ.

ಅಭ್ಯಾಸ ಆರಂಭಿಸುವುದಕ್ಕೆ ಮುನ್ನ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸರಣಿಯ ಟ್ರೋಫಿಯನ್ನು ಬಿಡುಗಡೆ ಮಾಡಿದರು. ಭಾರತ ತಂಡದ ಕೋಚ್ ವಿವಿಎಸ್ ಲಕ್ಷ್ಮಣ್ ಅಭ್ಯಾಸದ ಅವಧಿಯಲ್ಲಿ ಆಟಗಾರರಿಗೆ ಸಲಹೆಗಳನ್ನು ನೀಡಿದರು. ಸರಣಿಯ ಮೊದಲನೇ ಪಂದ್ಯ ವೆಲ್ಲಿಂಗ್ಟನ್‌ನಲ್ಲಿ ನವೆಂಬರ್ 18ರಂದು ನಡೆಯಲಿದೆ.

IPL 2023: ನಿವೃತ್ತಿ ಘೋಷಿಸಿದ ಪೊಲಾರ್ಡ್‌ಗೆ ಸಚಿನ್, ರೋಹಿತ್ ಹೇಳಿದ್ದೇನು?IPL 2023: ನಿವೃತ್ತಿ ಘೋಷಿಸಿದ ಪೊಲಾರ್ಡ್‌ಗೆ ಸಚಿನ್, ರೋಹಿತ್ ಹೇಳಿದ್ದೇನು?

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಸೋಲಿನ ನಂತರ ಭಾರತದ ಆಟಗಾರರಾದ ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ಸೂರ್ಯಕುಮಾರ್ ಯಾದವ್ ಮತ್ತು ಯುಜ್ವೇಂದ್ರ ಚಹಾಲ್ ಆಸ್ಟ್ರೇಲಿಯಾದಿಂದ ನ್ಯೂಜಿಲೆಂಡ್‌ಗೆ ಆಗಮಿಸಿದರು. ಸೋಮವಾರ ಮತ್ತು ಮಂಗಳವಾರ ಆಟಗಾರರು ಜಿಮ್‌ನಲ್ಲಿ ಕೆಲ ಸಮಯ ಕಳೆದರು.

ಬುಧವಾರ ಆಟಗಾರರು ಸಂಪೂರ್ಣ ತರಬೇತಿಯನ್ನು ಹೊಂದಿದ್ದರು. ತರಬೇತುದಾರರ ವಿವಿಎಸ್ ಲಕ್ಷ್ಮಣ್ ಸೇರಿದಂತೆ ತಂಡದ ಉಳಿದ ಸದಸ್ಯರು ಮಂಗಳವಾರ ಬೆಳಿಗ್ಗೆ ವೆಲ್ಲಿಂಗ್ಟನ್ ತಲಯಪಿದರು. ಟಿ20 ವಿಶ್ವಕಪ್‌ನಲ್ಲಿ ಹೀನಾಯ ಸೋಲಿನ ನಂತರ ತಂಡದಲ್ಲಿ ಬದಲಾವಣೆ ತರಲು ಬಿಸಿಸಿಐ ಮುಂದಾಗಿದೆ.

ಆಟಗಾರರ ಜೊತೆ ಕೋಚ್‌ಗೂ ವಿಶ್ರಾಂತಿ

ಆಟಗಾರರ ಜೊತೆ ಕೋಚ್‌ಗೂ ವಿಶ್ರಾಂತಿ

2024ರ ಟಿ20 ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ತಂಡವನ್ನು ಕಟ್ಟಲು ಬಿಸಿಸಿಐ ಯುವಪಡೆಯನ್ನು ನ್ಯೂಜಿಲೆಂಡ್‌ ಸರಣಿಗೆ ಆಯ್ಕೆ ಮಾಡಿದೆ. ಹಿರಿಯ ಆಟಗಾರರಾದ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ದಿನೇಶ್‌ ಕಾರ್ತಿಕ್, ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ.

ಇನ್ನು ಭಾರತ ತಂಡದ ಮುಖ್ಯ ಕೋಚ್‌ ರಾಹುಲ್ ದ್ರಾವಿಡ್‌ಗೂ ಕೂಡ ವಿಶ್ರಾಂತಿ ನೀಡಲಾಗಿದ್ದು. ವಿವಿಎಎಸ್‌ ಲಕ್ಷ್ಮಣ್‌ ಟಿ20 ಮತ್ತು ಏಕದಿನ ಸರಣಿಯಲ್ಲಿ ತಂಡದ ತರಬೇತುದಾರನಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇನ್ನಿಂಗ್ಸ್ ಆರಂಭಿಸುವವರು ಯಾರು?

ಇನ್ನಿಂಗ್ಸ್ ಆರಂಭಿಸುವವರು ಯಾರು?

ರಾಹುಲ್ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತದ ಇನ್ನಿಂಗ್ಸ್ ಆರಂಭಿಸುವ ಅವಕಾಶ ಯಾರಿಗೆ ಸಿಗಲಿದೆ ಎನ್ನುವುದೇ ಸದ್ಯದ ಕುತೂಹಲವಾಗಿದೆ. ಟಿ20 ವಿಶ್ವಕಪ್‌ನಲ್ಲಿ ಆರಂಭಿಕ ಜೋಡಿಯ ವೈಫಲ್ಯ, ಪವರ್ ಪ್ಲೇನಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನ ತಂಡಕ್ಕೆ ಹಿನ್ನಡೆಯಾಗಲು ಕಾರಣವಾಗಿತ್ತು. ಈಗ ಭಾರತಕ್ಕೆ ಮೊದಲ ಆರು ಓವರ್ ಗಳಲ್ಲಿ ಸ್ಫೋಟಕವಾಗಿ ರನ್ ಗಳಿಸುವ ಜೋಡಿಯ ಅಗತ್ಯವಿದೆ.

ಹಲವು ಆಟಗಾರರು ಆರಂಭಿಕರಾಗಿ ಕಣಕ್ಕಿಳಿಯುವ ಸಾಮರ್ಥ್ಯ ಹೊಂದಿದ್ದಾರೆ. ಇಶಾನ್ ಕಿಶಾನ್, ಶುಭಮನ್ ಗಿಲ್, ರಿಷಬ್ ಪಂತ್, ಸಂಜು ಸ್ಯಾಮ್ಸನ್ ಆರಂಭಿಕರಾಗಿ ಆಡಿರುವ ಅನುಭವ ಹೊಂದಿದ್ದಾರೆ. ಇನ್ನು ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್‌ರನ್ನು ಕೂಡ ಆರಂಭಿಕ ಆಟಗಾರನಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ. ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕೊಚ್ ವಿವಿಎಸ್ ಲಕ್ಷ್ಮಣ್ ಯಾವ ಆರಂಭಿಕರನ್ನು ಹೊಂದಿಸಲು ಪ್ರಯೋಗಕ್ಕೆ ಮುಂದಾಗುವ ಸಾಧ್ಯತೆ ಇದೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI

ಭಾರತ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಡೆವೊನ್ ಕಾನ್ವೇ, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಬ್ಲೇರ್ ಟಿಕ್ನರ್, ಲಾಕಿ ಫರ್ಗುಸನ್.

ಭಾರತ vs ನ್ಯೂಜಿಲೆಂಡ್ ಟಿ20 ಸರಣಿಯನ್ನು ಅಮೇಜಾನ್‌ ಪ್ರೈಮ್ ನೇರಪ್ರಸಾರ ಮಾಡಲಿದೆ. ಡಿಡಿ ಸ್ಪೋರ್ಟ್ಸ್‌ನಲ್ಲಿ ಕೂಡ ಪಂದ್ಯದ ನೇರಪ್ರಸಾರವನ್ನು ವೀಕ್ಷಣೆ ಮಾಡಬಹುದು. ಭಾರತೀಯ ಕಾಲಮಾನ ಮಧ್ಯಾಹ್ನ 12 ಗಂಟೆಗೆ ಪಂದ್ಯ ಆರಂಭವಾಗಲಿದೆ.

Story first published: Wednesday, November 16, 2022, 8:27 [IST]
Other articles published on Nov 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X