For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಬೇಕಾದರೆ ಈ 4 ಆಟಗಾರರು ಮಿಂಚುವುದು ಅನಿವಾರ್ಯ!

Ind vs NZ: These 4 India players should perform well in last match of the series to level the series

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ಏಕದಿನ ಸರಣಿಯ ಅಂತಿಮ ಪಂದ್ಯ ಮಾತ್ರವೇ ಬಾಕಿಯಿದೆ. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತ ತಂಡ ಸರಣಿಯಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದೆ. ಎರಡನೇ ಪಂದ್ಯಕ್ಕೆ ಮಳೆ ಸಂಪೂರ್ಣವಾಗಿ ಅಡ್ಡಿಯಾಗಿರುವ ಕಾರಣ ಆ ಪಂದ್ಯ ಫಲಿತಾಂಶವಿಲ್ಲದೆ ರದ್ದಾಗಿರುವುದರಿಂದಾಗಿ ಟೀಮ್ ಇಂಡಿಯಾಗೆ ಈ ಸರಣಿಯನ್ನು ಸಮಬಲಗೊಳಿಸಲು ಮಾತ್ರವೇ ಅವಕಾಶವಿದೆ.

ಬುಧವಾರ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. 2019ರ ಬಳಿಕ ನ್ಯೂಜಿಲೆಂಡ್ ನೆಲದಲ್ಲಿ ಭಾರತ ಒಂದೂ ಏಕದಿನ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಈ ಮುಖಭಂಗದಿಂದ ಹೊರಬರಲು ಟೀಮ್ ಇಂಡಿಯಾ ಯಾವ ರೀತಿಯ ರಣತಂತ್ರವನ್ನು ಹೆಣೆಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಹೀಗಾಗಿ ಟೀಮ್ ಇಂಡಿಯಾ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದರೆ ಈ ನಾಲ್ವರು ಆಟಗಾರರ ಪ್ರದರ್ಶನ ಬಹಳ ಮುಖ್ಯವಾಗಿದೆ.

ನಾಯಕ ಶಿಖರ್ ಧವನ್

ನಾಯಕ ಶಿಖರ್ ಧವನ್

ಟೀಮ್ ಇಂಡಿಯಾ ನಾಯಕ ಶಿಖರ್ ಧವನ್ ಈ ಬಾರಿಯ ಸರಣಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದು ಎರಡನೇ ಪಂದ್ಯದಲ್ಲಿ ಶೀಘ್ರವಾಗಿ ವಿಕೆಟ್ ಕಳೆದುಕೊಂಡಿದ್ದರು. ಅಂತಿಮ ಪಂದ್ಯದಲ್ಲಿಯೂ ಶಿಖರ್ ಧವನ್ ಅದ್ಭುತ ಪ್ರದರ್ಶನ ನೀಡಿ ಮಿಂಚುವುದು ತಂಡದ ದೃಷ್ಟಿಯಿಂದ ಮಹತ್ವ ಪಡೆದುಕೊಳ್ಳಲಿದೆ. ಇನ್ನೋರ್ವ ಆಟಗಾರ ಶುಬ್ಮನ್ ಗಿಲ್ ಉತ್ತಮ ಲಯದಲ್ಲಿರುವ ಕಾರಣ ಅವರಿಂದಲೂ ರನ್‌ ಹರಿದು ಬರುವ ನಿರೀಕ್ಷಯಿದೆ. ಟೀಮ್ ಇಂಡಿಯಾಗೆ ಉತ್ತಮ ಆರಂಭ ದೊರೆತರೆ ಖಂಡಿತವಾಗಿಯೂ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಮಿಂಚುಹರಿಸುವ ನಿರೀಕ್ಷೆಯಿದೆ.

ಮಧ್ಯಮ ಕ್ರಮಾಂಖದಲ್ಲಿ ಜವಾಬ್ಧಾರಿ ವಹಿಸಬೇಕಿದೆ ಪಂತ್

ಮಧ್ಯಮ ಕ್ರಮಾಂಖದಲ್ಲಿ ಜವಾಬ್ಧಾರಿ ವಹಿಸಬೇಕಿದೆ ಪಂತ್

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕ ಉತ್ತಮವಾಗಿ ಕಾಣಿಸುತ್ತಿದೆ. ಶ್ರೇಯಸ್ ಐಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ ಅದ್ಭುತ ಲಯದಲ್ಲಿದ್ದಾರೆ. ಆದರೆ ರಿಷಭ್ ಪಂತ್ ಅಂತಿಮ ಪಂದ್ಯದಲ್ಲಿ ಮತ್ತೊಮ್ಮೆ ಅವಕಾಶ ಗಿಟ್ಟಿಸಿಕೊಂಡರೆ ತಮಗೆ ನೀಡಿರುವ ಜವಾಬ್ಧಾರಿಯನ್ನು ಎಚ್ಚರಿಕೆಯಿಂದ ವಹಿಸಬೇಕಿದೆ. ಸತತವಾಗಿ ಕಳಪೆ ಪ್ರದರ್ಶನ ನೀಡುತ್ತಿರುವ ಪಂತ್‌ಗೆ ವೈಟ್‌ಬಾಲ್ ಮಾದರಿಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬಿತುಪಡಿಸಲು ಮತ್ತೊಂದು ಅವಕಾಶ ದೊರೆತಂತಾಗಿದೆ. ಈ ಅವಕಾಶವನ್ನು ಮತ್ತೊಮ್ಮೆ ಪಂತ್ ಕೈಚೆಲ್ಲಿದರೆ ತಂಡಕ್ಕೆ ದೊಡ್ಡ ಹಿನ್ನಡೆಯಾಗುವುದರಲ್ಲಿ ಅನುಮಾನವಿಲ್ಲ.

ಬೌಲಿಂಗ್‌ನಲ್ಲಿ ಮಿಂಚಬೇಕಿದೆ ದೀಪಕ್ ಚಹರ್

ಬೌಲಿಂಗ್‌ನಲ್ಲಿ ಮಿಂಚಬೇಕಿದೆ ದೀಪಕ್ ಚಹರ್

ದೀಪಕ್ ಚಹರ್ ಈ ಸರಣಿಯ ಮೊದಲ ಪಂದ್ಯದಲ್ಲಿ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡಿರಲಿಲ್ಲ. ಎರಡನೇ ಪಂದ್ಯದಲ್ಲಿ ಅವಕಾಶ ದೊರೆತಿದ್ದರೂ ಮಳೆಯಿಂದಾಗಿ ಪಂದ್ಯ ರದ್ದಾಗಿತ್ತು. ಹೀಗಾಗಿ ಅಂತಿಮ ಪಂದ್ಯದಲ್ಲಿ ಮತ್ತೆ ಅವಕಾಶ ದೊರೆಯುವ ಸಾಧ್ಯತೆಯಿದೆ. ಈ ಪಂದ್ಯ ಕ್ರೈಸ್ಟ್ ಚರ್ಚ್‌ನಲ್ಲಿ ನಡೆಯಲಿರುವ ಕಾರಣ ಇಲ್ಲಿ ವೇಗದ ಬೌಲರ್‌ಗಳು ಹೆಚ್ಚು ಪರಿಣಾಮಕಾರಿಯಾಗಬಲ್ಲರು. ಈ ಅವಕಾಶವನ್ನು ದೀಪಕ್ ಚಾಹರ್ ಅದ್ಭೌಉತವಾಗಿ ಬಳಸಿಕೊಳ್ಳಬೇಕಿದೆ. ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವ ಕಾರಣ ಅಂತಿಮ ಪಂದ್ಯದಲ್ಲಿ ಅನುಭವಿ ಆಟಗಾರನಾಗಿ ದೀಪಕ್ ಚಹರ್ ತಮ್ಮ ಜವಾಬ್ಧಾರಿಯನ್ನು ನಿರ್ವಹಿಸಬೇಕಿದೆ.

ಯುವ ವೇಗಿ ಉಮ್ರಾನ್ ಮಲಿಕ್

ಯುವ ವೇಗಿ ಉಮ್ರಾನ್ ಮಲಿಕ್

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ್ದ ಉಮ್ರಾನ್ ಮಲಿಕ್ ಆರಂಭದಲ್ಲಿ ಎರಡು ವಿಕೆಟ್ ಕಬಳಿಸಿ ಟೀಮ್ ಇಂಡಿಯಾಗೆ ಮೇಲುಗೈ ಒದಗಿಸಿದ್ದರು. ಇದೀಗ ಅಂತಿಮ ಪಂದ್ಯದಲ್ಲಿಯೂ ಉಮ್ರಾನ್ ಮಿಂಚಿದರೆ ಭಾರತಕ್ಕೆ ಗೆಲ್ಲುವ ಅವಕಾಶವಿದೆ. ಈಗಾಗಲೇ ಹೇಳಿದಂತೆ ಕ್ರೈಸ್ಟ್ ಚರ್ಚ್‌ನ ಪಿಚ್‌ನ ಲಾಭವನ್ನು ಪಡೆದುಕೊಂಡು ತಂಡಕ್ಕೆ ನೆರವಾಗಬೇಕಿದೆ. ಹಾಗಾದಲ್ಲಿ ಮಾತ್ರವೇ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸುವ ಅವಕಾಶವಿದೆ.

Story first published: Tuesday, November 29, 2022, 17:26 [IST]
Other articles published on Nov 29, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+