Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಾಕಿಸ್ತಾನವನ್ನು ಸುಮ್ಮನಿಸಿರಬೇಕಾದರೆ ಆತನನ್ನು ಔಟ್ ಮಾಡಬೇಕು!: ಎಬಿ ಡಿವಿಲಿಯರ್ಸ್ ಹೀಗಂದಿದ್ದು ಯಾರ ಬಗ್ಗೆ?

ಭಾರತ ಹಾಗೂ ಪಾಕಿಸ್ತಾನ ತಂಡಗಳ ಸೆಣೆಸಾಟದ ಹಿನ್ನೆಲೆಯಲ್ಲಿ ಕ್ರಿಕೆಡ್ ದಿಗ್ಗಜರು ಈ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ಆರ್‌ಸಿಬಿ ತಂಡದ ಮಾಜಿ ಆಟಗಾರ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕೂಡ ಈ ಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನ ತಂಡದ ಸದ್ದಡಗಿಸಬೇಕಾದರೆ ಓರ್ವ ಆಟಗಾರನನ್ನು ಬೇಗನೆ ಔಟ್ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ತಂಡ ಪಾಕಿಸ್ತಾನವನ್ನು 2019ರ ಬಳಿಕ ಮೊದಲ ಬಾರಿಗೆ ಎದುರಿಸುತ್ತಿದೆ. ಅಂದಿನ ಪಂದ್ಯದಲ್ಲಿ ಪಾಖಿಸ್ತಾನವನ್ನು ಭಾರತ ಸುಲಭವಾಗಿ ಮಣಿಸಿತ್ತು. ಇದೀಗ ಮತ್ತೆ ಭಾರತ ಹಾಗೂ ಪಾಕ್ ತಂಡಗಳು ಏಕದಿನ ಸ್ವರೂಪಲ್ಲಿ ಮುಖಾಮುಖಿಯಾಗಿದೆ. ಆದರೆ ಈ ಬಾರಿ ಪಾಕಿಸ್ತಾನ ತಂಡ ನಂಬರ್ 1 ತಂಡವಾಗಿ ಕಣಕ್ಕಿಳಿಯುತ್ತಿರುವುದು ಗಮನಿಸಬೇಕಾದ ಅಂಶ.

Ind vs Pak: AB de Villiers said India shlould dismiss this guy early to keep Pakistan quiet

ಈ ಪಂದ್ಯದ ಹಿನ್ನೆಲೆಯಲ್ಲಿ ಎಬಿ ಡಿವಿಲಿಯರ್ಸ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಬಾಬರ ಅಜಂ ಅವರನ್ನು ಕಟ್ಟಿಹಾಕಲು ಸಾಧ್ಯವಾದರೆ ಮಾತ್ರವೇ ಭಾರತ ತಂಡಕ್ಕೆ ಯಶಸ್ಸು ಸಾಧ್ಯ ಎಂದಿದ್ದಾರೆ. "ಬಾಬರ್ ಅಜಂ ಬಗ್ಗೆ ಮಾತನಾಡಿವುದು ಎಂದರೆ ಖುಷಿಯ ವಿಚಾರ. ಆತ ಅತ್ಯುತ್ತಮ ಆಟಗಾರರಲ್ಲಿ ಒಬ್ಬ. ಪಾಕಿಸ್ತಾನ ಬ್ಯಾಟಿಂಗ್ ವಿಭಾಗಕ್ಕೆ ಆತ ಬಲಿಷ್ಠ ಆಧಾರಸ್ಥಂಭ. ಭಾರತ ತಂಡ ಪಾಕಿಸ್ತಾನವನ್ನು ಸುಮ್ಮನಾಗಿಸಬೇಕಿದ್ದರೆ ಈತನನ್ನು ಆದಷ್ಟು ಬೇಗನೆ ಔಟ್ ಮಾಡಬೇಕಿದೆ"ಎಂದಿದ್ದಾರೆ ಎಬಿ ಡಿವಿಲಿಯರ್ಸ್.

ಇನ್ನು ಈ ಸಂದರ್ಭದಲ್ಲಿ ಎಬಿ ಡಿವಿಲಿಯರ್ಸ್ ಪಾಕಿಸ್ಥಾನ ತಂಡದ ನಾಯಕ ಬಾಬರ್ ಅಜಂ ಅವರನ್ನು ಮೊದಲ ಬಾರಿಗೆ ಭೇಟಿಯಾದ ಸಂದರ್ಭದನ್ನು ಎಬಿಡಿ ನೆನಪಿಸಿಕೊಂಡಿದ್ದಾರೆ. "ಬಾಬರ್ ಅಜಂ ಅವರನ್ನು ಅವರ ಸಣ್ಣ ವಯಸ್ಸಿನಲ್ಲಿಯೇ ನಾನು ಭೇಟಿಯಾಗಿದ್ದೆ. ಆತ ಅತ್ಯುತ್ತಮ ಆಟಗಾರನಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎನ್ನುದು ಬೇಗನೆ ಅರ್ಥವಾಗಿತ್ತು. ವಿಶ್ವದ ಎಲ್ಲಾ ಭಾಗದಲ್ಲಿಯೂ ಎಲ್ಲಾ ಮಾದರಿಯಲ್ಲಿಯೂ ಆತ ಯಾವುದೇ ಬೌಲಿಂಗ್ ವಿಭಾಗವನ್ನು ಕೂಡ ಹಿಮ್ಮೆಟ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ" ಎಂದಿದ್ದಾರೆ ಎಬಿ ಡಿವಿಲಿಯರ್ಸ್.

ಇನ್ನು ಭಾರತ ಹಾಗೂ ಪಾಕಿಸ್ತಾನ ತಮಡಗಳ ನಡುವಿನ ಈ ಮುಖಾಮುಖಿಯಲ್ಲಿ ಭಾರತ ತಂಡ ಟಾಸ್ ಗೆದ್ದುಕೊಂಡಿದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಪಾಕಿಸ್ತಾನ ಈ ಪಂದ್ಯದಲ್ಲಿ ಆರಂಭದಲ್ಲಿ ಬೌಲಿಂಗ್ ದಾಳಿ ನಡೆಸುವ ಸವಾಲು ಪಡೆದುಕೊಂಡಿದೆ. ಇದು ಭಾರತದ ಬ್ಯಾಟಿಂಗ್ ವಿಭಾಗ ಹಾಗೂ ಪಾಕಿಸ್ತಾನದ ಬೌಲಿಂಗ್ ವಿಭಾಗದ ನಡುವಿನ ಸೆಣೆಸಾಟ ಎಂದೇ ಪರಿಗಣಿಸಲಾಗಿದೆ.

ಪಾಕಿಸ್ತಾನ ಆಡುವ ಬಳಗ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್
ಬೆಂಚ್: ಫಹೀಮ್ ಅಶ್ರಫ್, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ವಾಸಿಂ ಜೂನಿಯರ್, ಅಬ್ದುಲ್ಲಾ ಶಫೀಕ್, ಸೌದ್ ಶಕೀಲ್, ಉಸಾಮಾ ಮಿರ್

ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್ , ತಿಲಕ್ ವರ್ಮ

Story first published: Saturday, September 2, 2023, 15:25 [IST]
Other articles published on Sep 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+