India vs Pakistan: ಭಾರತದ ವಿರುದ್ಧದ ಪಂದ್ಯಕ್ಕೆ ಒಂದು ದಿನ ಮುನ್ನವೇ ಆಡುವ ಬಳಗವನ್ನು ಘೋಷಿಸಿದ ಪಾಕಿಸ್ತಾನ
ಬಹುನಿರೀಕ್ಷಿತ ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯದ ಆರಂಭಕ್ಕೆ ಮುನ್ನಾದಿನವೇ ಪಾಕಿಸ್ತಾನ ತಂಡ ತನ್ನ ಆಡುವ ಬಳಗವನ್ನು ಘೋಷಿಸಿದೆ. ಈ ಮೂಲಕ ಭಾರತದ ವಿರುದ್ಧದ ಮೆಗಾ ಸೆಣೆಸಾಟಕ್ಕೆ ತಾನು ಸರ್ವರೀತಿಯಲ್ಲಿಯೂ ಸಿದ್ದ ಎನ್ನುವ ಸಂದೇಶವನ್ನು ರವಾನಿಸಿದೆ ಪಾಕಿಸ್ತಾನ
ಶ್ರೀಲಂಕಾದ ಕ್ಯಾಂಟಿಯಲ್ಲಿರುವ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಟೂರ್ನಿಯ ಪಂದ್ಯ ಶನಿವಾರ ಆಯೋಜನೆಯಾಗಲಿದೆ. ನೇಪಾಳ ವಿರುದ್ಧ ಆಡಿದ ಆಡುವ ಬಳಗದೊಂದಿಗೆ ಪಾಕಿಸ್ತಾನ ಭಾರತದ ವಿರುದ್ಧವೂ ಆಡಲಿದೆ ಎನ್ನುವುದು ಈ ಮೂಲಕ ಖಚಿತವಾಗಿದೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ಪಾಕ್ 238 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿತ್ತು.

ಬಾಬರ್ ಅಜಂ ನಾಯಕತ್ವದಲ್ಲಿ ಪಾಕಿಸ್ತಾನ ಭಾರತ ತಂಡವನ್ನು ಎದುರಿಸಲಿದ್ದು ಶದಬ್ ಖಾನ್ ಉಪನಾಯಕನಾಗಿ ಸಾಥ್ ನೀಡಲಿದ್ದಾರೆ. ಫಕರ್ ಝಮಾನ್ ಮತ್ತು ಇಮಾನ್ ಉಲ್ ಹಕ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಬಾಬರ್ ಅಜಂ ಮೂರನೇ ಕ್ರಮಾಕದಲ್ಲಿ ಆಡಲಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ನಾಲ್ಕನೇ ಕ್ರಮಾಂಕದಲ್ಲಿ ಹಾಗೂ ಸಲ್ಮಾನ್ ಅಲಿ ಅಘಾ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.
ಇನ್ನು ಕಲೆದ ಪಂದ್ಯದಲ್ಲಿ ಶತಕ ಸಿಡಿಸಿದ ಇಫ್ತಿಕಾರ್ ಅಹ್ಮದ್ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದು ಶದಬ್ ಖಾನ್ ೭ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ. ಇನ್ನು ಮಹಮ್ಮದ್ ನವಾಜ್ ಎರಡನೇ ಸ್ಪಿನ್ ಬೌಲಿಂಗ್ ಆಯ್ಕೆಯಾಗಿ ತಂಡದಲ್ಲಿದ್ದಾರೆ. ಇನ್ನು ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ವೇಗದ ಬೌಲಿಂಗ್ ವಿಭಾಗವನ್ನು ಪ್ರತಿನಿಧಿಸುತ್ತಿದ್ದಾರೆ.
ಪಾಕಿಸ್ತಾನ ಆಡುವ ಬಳಗ: ಫಕರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಂ(ನಾಯಕ), ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಸಲ್ಮಾಣ್ ಅಲಿ ಅಘಾ, ಇಫ್ತಿಕಾರ್ ಅಹ್ಮದ್, ಶದಬ್ ಖಾನ್, ಮಹಮ್ಮದ್ ನವಾಜ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ಹ್ಯಾರಿಸ್ ರೌಫ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications