Champions Trophy IND vs PAK: ಹೈವೋಲ್ಟೇಜ್ ಪಂದ್ಯದ ಅಂಕಿ ಅಂಶಗಳ ಸಂಪೂರ್ಣ ವಿವರ ಇಲ್ಲಿದೆ
ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಶುಭಾರಂಭ ಮಾಡಿದೆ. ಆಡಿದ ಮೊದಲ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶ ವಿರುದ್ಧ ಜಯ ಸಾಧಿಸಿದೆ. ಈಗ ಎರಡನೇ ಪಂದ್ಯದ ಮೇಲೆ ಎಲ್ಲರ ಚಿತ್ತ ಕದ್ದಿದೆ. ಫೆಬ್ರವರಿ 23 ರಂದು ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂಗಳ ಸಜ್ಜಾಗಿದೆ. ಈ ಪಂದ್ಯ ಪಾಕಿಸ್ತಾನಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಸೆಮಿಫೈನಲ್ ಹಂತ ಪ್ರವೇಶಿಸಲು ಭಾರತ ಈ ಪಂದ್ಯದಲ್ಲಿ ಜಯ ಸಾಧಿಸುವುದು ಅನಿವಾರ್ಯ. ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಪಂದ್ಯಗಳು ಈಗ ನಡೆಯುತ್ತಿಲ್ಲ. ಹೀಗಾಗಿ ಈ ತಂಡಗಳು ಐಸಿಸಿ ಟ್ರೋಫಿಯಲ್ಲಿ ಮಾತ್ರ ಆಡುತ್ತಿವೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಈಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾದಾಟ ನಡೆಸಲಿವೆ. ಉಭಯ ತಂಡದಲ್ಲೂ ಸ್ಟಾರ್ ಆಟಗಾರರು ತಂಡದಲ್ಲಿದ್ದು ಚಿತ್ತ ಕದ್ದಿದೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟಾರೆ 135 ಪಂದ್ಯಗಳನ್ನು ಆಡಿವೆ. ಈ ವೇಳೆ ಭಾರತ 57 ಜಯ ಸಾಧಿಸಿದ್ದು, ಪಾಕ್ 73 ಪಂದ್ಯಗಳನ್ನು ಗೆದ್ದಿದೆ. 5 ಪಂದ್ಯಗಳು ಫಲಿತಾಂಶ ಹೀನಾಯವಾಗಿದೆ. ಈಗಾಗಲೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಉಭಯ ತಂಡಗಳು ಒಟ್ಟು 5 ಪಂದ್ಯಗಳು ನಡೆದಿವೆ. ಈ ವೇಳೆ ಪಾಕಿಸ್ತಾನ 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಭಾರತ 2 ಪಂದ್ಯಗಳನ್ನು ಗೆದ್ದಿದೆ. ಆದರೆ ಭಾರತ ಸದ್ಯದ ಪ್ರದರ್ಶನ ಅಮೋಘವಾಗಿದ್ದು ಎದುರಾಳಿಗೆ ನಡುಕ ಹುಟ್ಟಿಸಿದೆ.
ಉಭಯ ತಂಡಗಳ ನಡುವಣ ಗರಿಷ್ಠ ಮೊತ್ತ ಎಷ್ಟು?
2005ರಲ್ಲಿ ಪಾಕಿಸ್ತಾನ, ಭಾರತ ಪ್ರವಾಸವನ್ನು ಮಾಡಿತ್ತು. ಈ ಟೂರ್ನಿಯ ಎರಡನೇ ಪಂದ್ಯ ವಿಶಾಖಾಪಟ್ಟಣಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 356 ರನ್ ಸೇರಿಸಿತು. ಇದರು ಉಭಯ ದೇಶಗಳ ನಡುವಣ ಗರಿಷ್ಠ ಮೊತ್ತವಾಗಿದೆ.
ಉಭಯ ತಂಡಗಳ ಮಧ್ಯೆ ಕನಿಷ್ಠ ಮೊತ್ತ ಯಾವುದು?
1978ರಲ್ಲಿ ಭಾರತ, ಪಾಕಿಸ್ತಾನ ಪ್ರವಾಸವನ್ನು ಬೆಳೆಸಿತ್ತು. ಈ ವೇಳೆ ಏಕದಿನ ಸರಣಿಯನ್ನು ಆಡಲಾಗಿತ್ತು. ಈ ವೇಳೆ ಟೀಮ್ ಇಂಡಿಯಾ ಸಿಲ್ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ 78 ರನ್‌ಗಳಿಗೆ ಆಲೌಟ್ ಆಗಿತ್ತು.

ಪಂದ್ಯವೊಂದರಲ್ಲಿ ಗರಿಷ್ಠ ರನ್ ಬಾರಿಸಿದವರು ಯಾರು?
ಪಾಕಿಸ್ತಾನದ ಸೂಪರ್ ಸ್ಟಾರ್ ಬ್ಯಾಟರ್ ಸಯೀದ್ ಅನ್ವರ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಚೆನ್ನೈನಲ್ಲಿ 1997ರಲ್ಲಿ 194 ರನ್ ಸಿಡಿಸಿ ಅಬ್ಬರಿಸಿದ್ದಾರೆ. ಇನ್ನು ಪಾಕಿಸ್ತಾನ ವಿರುದ್ಧ ಭಾರತದ ಪರ ಗರಿಷ್ಠ ರನ್ ಬಾರಿಸಿದ ಹೆಗ್ಗಳಿಕೆ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಅವರದ್ದಾಗಿದೆ. ಇವರು 2012ರಲ್ಲಿ ಮೀರ್‌ಪುರ್‌ದಲ್ಲಿ ನಡೆದ ಪಂದ್ಯದಲ್ಲಿ 183 ರನ್ ಸಿಡಿಸಿದ್ದರು.
ಉಭಯ ತಂಡಗಳ ನಡುವಿನ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ್ದು ಯಾರು?
ಭಾರತ, ಪಾಕಿಸ್ತಾನ ನಡುವಣ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಕೀರ್ತಿ ಶಾಹೀದ್ ಅಫ್ರಿದಿ ಅವರಿಗೆ ಸಲ್ಲುತ್ತದೆ. ಇವರು ಆಡಿದ 67 ಪಂದ್ಯಗಳಲ್ಲಿ 51 ಸಿಕ್ಸರ್ ಬಾರಿಸಿದ್ದಾರೆ.
ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಯಾರು?
ಉಭಯ ದೇಶಗಳ ನಡುವಣ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆ ಪಾಕಿಸ್ತಾನದ ವಾಸೀಮ್ ಅಕ್ರಮ್ ಅವರಿಗೆ ಸಲ್ಲುತ್ತದೆ. ಇವರು 60 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಹೆಗ್ಗಳಿಕೆ ಕನ್ನಡಿಗ ಅನಿಲ್ ಕುಂಬ್ಳೆ ಅವರಿಗೆ ಸಲ್ಲುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications