For Quick Alerts
ALLOW NOTIFICATIONS  
For Daily Alerts
 

ಭಾರತ vs ಪಾಕಿಸ್ತಾನ ಪಂದ್ಯದಲ್ಲಿ ಈತನೇ ಗೇಮ್‌ ಚೇಂಜರ್ ಎಂದ ಇಯಾನ್ ಮಾರ್ಗನ್

ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ಥಾನ ತಂಡಗಳ ನಡುವಿನ ಮುಖಾಮುಖಿ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಪಂದ್ಯದಲ್ಲಿ ಯಾವ ತಂಡದ ಯಾವ ಆಟಗಾರು ಅದ್ಭುತ ಪ್ರದರ್ಶನ ನೀಡಲಿದ್ದಾರೆ. ಮ್ಯಾಚ್ ವಿನ್ನರ್‌ಗಳಾಗಿ ಯಾರು ಹೊರಹಿಮ್ಮಬಹುದು ಎನ್ನುವ ಕುತೂಹಲ ಲೆಕ್ಕಾಚಾರಗಳು ಅಭಿಮಾನಿಗಳನ್ನು ಕಾಡುತ್ತಿದೆ. ಇಂಥಾ ಕುತೂಹಲಗಳು ಅಭಿಮಾನಿಗಳು ಮಾತ್ರವಲ್ಲ, ಕ್ರಿಕೆಟ್ ಪಂಡಿತರು ಮಾಜಿ ಕ್ರಿಕೆಟಿಗರಿಗೂ ಕಾಡುತ್ತಿರುವುದು ಸುಳ್ಳಲ್ಲ.

ಇಂಗ್ಲೆಂಡ್ ತಂಡದ ವಿಶ್ವಕಪ್ ಗೆದ್ದ ನಾಯಕ ಮಾಜಿ ಕ್ರಿಕೆಟಿಗ ಇಯಾನ್ ಮಾರ್ಗನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ vs ಪಾಕಿಸ್ತಾನ ತಂಡಗಳ ನಡುವಿನ ವಿಶ್ವಕಪ್ ಸೆಣೆಸಾಟಕ್ಕೂ ಮುನ್ನ ಮಾತನಾಡಿರುವ ಇಯಾನ್ ಮಾರ್ಗನ್ ಈ ಪಂದ್ಯದಲ್ಲಿ ಓರ್ವ ಆಟಗಾರನ ಮೇಲೆ ಭಾರೀ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

Ind vs Pak: Eoin Morgan hails Jasprit Bumrah and said he is Game changes

ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮಾರ್ಗನ್ ಹೀಗೆ ಭಾರೀ ನಿರೀಕ್ಷೆ ವ್ಯಕ್ತಪಡಿಸಿರುವ ಆಟಗಾರ ಬೇರೆ ಯಾರೂ ಅಲ್ಲ. ಅದು ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ. ಈ ಪಂದ್ಯದಲ್ಲಿ ಗೇಮ್ ಚೇಂಜರ್ ಎನಿಸಿಕೊಳ್ಳಲಿದ್ದಾರೆ ಬೂಮ್ರಾ ಎಂದು ಮಾರ್ಗನ್ ಭವಿಷ್ಯ ನುಡಿದಿದ್ದಾರೆ.

ಈ ವರ್ಷದ ವಿಶ್ವಕಪ್ ಅಭಿಯಾನದಲ್ಲಿ ಬೂಮ್ರಾ ಈವರೆಗೆ ನೀಡಿರುವ ಪ್ರದರ್ಶನ ಅದ್ಭುತವಾಗಿದೆ. ಎರಡು ಪಂದ್ಯಗಳಲ್ಲಿ ಬೂಮ್ರಾ 13.71 ಸರಾಸರಿಯಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹೀಗಾಗಿ ಭಾರತದ ಗೆಲುವಿನಲ್ಲಿ ಬೂಮ್ರಾ ನಿಒರ್ಣಾಯಕ ಪಾತ್ರವಹಿಸಿದ್ದು ಸ್ಪಷ್ಟ. ಅಲ್ಲದೆ ಟೂರ್ನಿಯಲ್ಲಿ ಈವರೆಗೆ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

ಸ್ಕೈ ಸ್ಪೋರ್ಟ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿರುವ ಇಯಾನ್ ಮಾರ್ಗನ್ ಈ ಕ್ಷಣದಲ್ಲಿ ಭಾರತದ ಬೌಲಿಂಗ್ ವಿಭಾಗ ಅದ್ಭುತವಾದ ಫಾರ್ಮ್ನಲ್ಲಿದ್ದು ಹೆಚ್ಚು ಬಲಿಷ್ಠವಾಗಿದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಬೂಮ್ರಾ ಬಗ್ಗೆ ಮಾತನಾಡಿದ ಅವರು ಎದುರಾಳಿ ವಿರುದ್ಧ ಹೇಗೆ ಒತ್ತಡವನ್ನು ಹೇರಿ ವಿಕೆಟ್ ಪಡೆಯಬೇಕೆನ್ನುವುದು ಈ ಅನುಭವಿ ವೇಗಿಗೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ.

"ನನ್ನ ಪ್ರಕಾರ ಭಾರತದ ಬೌಲಿಂಗ್ ವಿಭಾಗ ಸದ್ಯಕ್ಕೆ ಹೆಚ್ಚು ಬಲಿಷ್ಠವಾಗಿದ್ದು ಉತ್ತಮ ಫಾರ್ಮ್‌ನಲ್ಲಿದೆ. ಇಂಥಾ ಸಂದರ್ಭದಲ್ಲಿ ಬೂಮ್ರಾ ತಂಡಕ್ಕೆಮರಳಿರುವುದು ಶಕ್ತಿ ಹೆಚ್ಚಿಸಿದೆ. ನಾಲ್ಕೈದು ತಿಂಗಳ ಹಿಂದೆ ಡಬ್ಲಿನ್‌ನಲ್ಲಿ ಆಡುವ ಮೂಲಕ ತಂಡಕ್ಕೆ ಮರಳಿದಾಗ ಅವರಲ್ಲಿ ವಿಶ್ವಕಪ್‌ನಲ್ಲಿ ಆಡುವ ಒಂದೇ ಗುರಿ ಸ್ಪಷ್ಟವಾಗಿತ್ತು" ಎಂದಿದ್ದಾರೆ. ಇಯಾನ್ ಮಾರ್ಗನ್.

"ಆತನೋರ್ವ ಗೇಮ್ ಚೇಂಜರ್, ಅಫ್ಘಾನಿಸ್ತಾನದ ವಿರುದ್ಧ ಆತ ನಾಲ್ಕು ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ಎದುರಾಳೀ ಮೇಲೆ ಒತ್ತಡವನ್ನು ಹಾಕುವುದು, ಬೇರೆ ಬೇರೆ ಹಂತಗಳಲ್ಲಿ ಬೌಲಿಂಗ್ ದಾಳಿ ನಡೆಸಿ ವಿಕೆಟ್‌ಗಳನ್ನು ಕಬಳಿಸುವುದು ಅವರ ಸಾಮರ್ಥ್ಯ. ಪಾಕಿಸ್ತಾನದ ವಿರುದ್ಧವೂ ಅದು ಮುಂದುವರಿಯುವ ಸಾಧ್ಯತೆಯಿದೆ. ಭಾರತ ತಂಡದ ಸಮತೋಲನವನ್ನು ನಾನು ಗಮನಿಸುತ್ತಿದ್ದೆ. ಜಡೇಜಾ, ಕುಲ್‌ದೀಪ್, ಶಾರ್ದೂಲ್, ಹಾರ್ದಿಕ್ ಈ ಎಲ್ಲರೂ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡನ್ನೂ ಚೆನ್ನಾಗಿ ನಿಭಾಯಿಸಬಲ್ಲವರು. ಇದು ಭಾರತ ತಂಡಕ್ಕೆ ಹೆಚ್ಚು ಬಲ ನೀಡಲಿದೆ" ಎಂದಿದ್ದಾರೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್.

Story first published: Saturday, October 14, 2023, 10:14 [IST]
Other articles published on Oct 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+