For Quick Alerts
ALLOW NOTIFICATIONS  
For Daily Alerts
 

ಗನ್‌ ಸೆಲೆಬ್ರೇಷನ್‌ನಿಂದ ಸ್ಲೆಡ್ಜಿಂಗ್‌ವರೆಗಿನ IND vs PAK ಪಂದ್ಯದ ರೋಚಕ ಹೈಲೈಟ್ಸ್

ಭಾರತ ಹಾಗೂ ಪಾಕಿಸ್ತಾನ ನಡುವಣ ಹೈ ವೋಲ್ಟೇಜ್‌ ಪಂದ್ಯ ಮುಗಿದಿದೆ. ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ಆಟಗಾರರು ಸ್ಥಿರ ಪ್ರದರ್ಶನ ನೀಡಿದರು. ಸೂಪರ್‌ 4 ಹಂತದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ವೇಳೆ ಪಂದ್ಯದಲ್ಲಿ ಹಲವು ಹೈಲೈಟ್ಸ್ ಅಂಶಗಳು ಇದ್ದವು.

ಪಾಕಿಸ್ತಾನ ನೀಡಿದ್ದ 172 ರನ್‌ಗಳ ಗುರಿಯನ್ನು ಟೀಮ್ ಇಂಡಿಯಾ 4 ವಿಕೆಟ್‌ ಕಳೆದುಕೊಂಡು ಮುಟ್ಟಿತು. ಈ ವೇಳೆ ಅಭಿಷೇಕ್ ಶರ್ಮಾ ಅಮೋಗ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಮಿಂಚಿದರು. ಈ ಪಂದ್ಯದ ನಡುವೆ ಮೈದಾನದಲ್ಲಿ ಹಲವು ಬಾರಿ ಉಭಯ ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಆ ಬಗ್ಗೆಯ ವರದಿ ಇಲ್ಲಿದೆ.

IND vs PAK From Gun Celebration to Sledging - The Hottest Highlights of the Match

1> ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಡಿದ ಎಡವಟ್ಟಿನಿಂದ ಎದುರಾಳಿ ತಂಡ ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ಸಫಲವಾಯಿತು. ಭಾರತ ಈ ಪಂದ್ಯದಲ್ಲಿ 4 ಕ್ಯಾಚ್‌ಗಳನ್ನು ಕೈ ಚೆಲ್ಲಿತು. ಇದರಲ್ಲಿ ಅಭಿಷೇಕ್‌ ಶರ್ಮಾ ಅವರೇ ಎರಡು ಕ್ಯಾಚ್‌ಗಳನ್ನು ಕೈ ಬಿಟ್ಟರು.

2> ಪಾಕಿಸ್ತಾನ ತಂಡದ ಪರ ಸೈಮ್‌ ಅಯೂಬ್‌ ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ರನ್‌ ಕಲೆ ಹಾಕಿದರು. ಇದಕ್ಕೂ ಮೊದಲು ಇವರು ಆಡಿದ ಮೂರು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದರು.

3> ಎರಡನೇ ವಿಕೆಟ್‌ಗೆ ಫರ್ಹಾನ್ ಜಮಾನ್‌ ಹಾಗೂ ಸೈಮ್ ಅಯೂಬ್‌ ಅಯೂಬ್ ಜೊತೆ ತ್ವರಿತ ಜೊತೆಯಾಟ 72 ರನ್ ಸೇರಿಸಿ ಪಾಕ್ ತಂಡಕ್ಕೆ ಆಧಾರವಾದರು.

ಗನ್ ಸೆಲೆಬ್ರೇಷನ್

4> ಫರ್ಹಾನ್ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕವನ್ನು ಪೂರ್ಣಗೊಳಿಸಿದರು. ಬಳಿಕ ಇವರು ಗನ್‌ ಸೆಲೆಬ್ರೇಷನ್‌ ಮಾಡಿ ಗಮನ ಸೆಳೆದರು.

5> ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ, ಶಾಹೀನ್ ಅಫ್ರಿದಿ ಅವರ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಸಿಡಿಸಿದರು.

6> ಟೀಮ್ ಇಂಡಿಯಾ ಹಾಗೂ ಪಾಕ್‌ ಆಟಗಾರರ ನಡುವೆ ಹಲವು ಬಾರಿ ಬಿರುಸಿನ ವಾತಾವರಣ ಕಂಡು ಬಂದಿತು. ಶಾಹೀನ್ ಅಫ್ರಿದಿ ಮತ್ತು ಅಭಿಷೇಕ್ ಶರ್ಮಾ ನಡುವೆ ವಾಗ್ವಾದ ನಡೆದರೆ, ಹ್ಯಾರಿಸ್ ರೌಫ್ ಅವರು ಗಿಲ್ ಮತ್ತು ಅಭಿಷೇಕ್ ಅವರನ್ನು ಸ್ಲೆಡ್ಜ್ ಮಾಡಿದರು. ಇದಾದ ಬಳಿಕ ಅಂಪೈರ್ ಮಧ್ಯ ಪ್ರವೇಶಿಸಬೇಕಾಯಿತು.

7> ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಇದೇ ಮೊದಲ ಬಾರಿಗೆ ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಔಟ್ ಆದರು.

8> ಟೀಮ್ ಇಂಡಿಯಾದ ಪರ ಶಿವಂ ದುಬೆ 2 ವಿಕೆಟ್‌ ಪಡೆದು ಮಿಂಚಿದರು.

9> ಟೀಮ್ ಇಂಡಿಯಾ ಏಷ್ಯಾ ಕಪ್ ಟಿ20 ಕ್ರಿಕೆಟ್‌ನ ಸೂಪರ್ ಫೋರ್ ಹಂತದಲ್ಲಿ ಇದೇ ಮೊದಲ ಬಾರಿಗೆ ಪಾಕ್‌ ವಿರುದ್ಧ ಜಯ ಸಾಧಿಸಿದೆ.

10> ಅಭಿಷೇಕ್‌ ಶರ್ಮಾ ಪಾಕ್‌ ವಿರುದ್ಧದ ಪಂದ್ಯದಲ್ಲಿ 5 ಸಿಕ್ಸರ್‌ 6 ಬೌಂಡರಿ ನೆರವಿನಿಂದ 74 ರನ್ ಬಾರಿಸಿ ಮಿಂಚಿದರು.

Story first published: Monday, September 22, 2025, 10:24 [IST]
Other articles published on Sep 22, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+