Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs PAK: ಭಾರತದ ವಿರುದ್ಧ ಮೂರಂಕಿ ದಾಟದ ಪಾಕಿಸ್ತಾನ ಹೀನಾಯ ಸೋಲು

IND vs PAK: ಭಾನುವಾರ ನಡೆದ ರೈಸಿಂಗ್ ಸ್ಟಾರ್ಸ್ ಮಹಿಳಾ ಏಷ್ಯಾಕಪ್ ಟಿ20 ಗುಂಪು ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಮತ್ತೊಂದೆಡೆ, ಟೀಂ ಇಂಡಿಯಾ ಬೌಲರ್‌ಗಳು ಪಾಕ್‌ ತಂಡದ ಬ್ಯಾಟರ್‌ಗಳನ್ನು ಮೂರಂಕಿ ದಾಡಲು ಕೂಡ ಬಿಡದೇ ಕಟ್ಟಿ ಹಾಕಿದ್ದು.

IND vs PAK Group A Women s Rising Stars Asia Cup T20 Match India Won By 8 Wickets against Pakistan

ಕೊಲಂಬೊದಲ್ಲಿಂದು ಭಾರತ-ಪಾಕಿಸ್ತಾನ​ ಪುರುಷರ ತಂಡಗಳು ಟಿ20 ವಿಶ್ವಕಪ್‌ ಗುಂಪು ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಥಾಯ್ಲೆಂಡ್​ನ ಬ್ಯಾಂಕಾಕ್​ನಲ್ಲಿ ನಡೆದ ಮಹಿಳಾ ಏಷ್ಯಾಕಪ್ ಟಿ20 ಗುಂಪು ಪಂದ್ಯದಲ್ಲಿ ಭಾರತವು ಪಾಕಿಸ್ತಾನವನ್ನು ಮಣಿಸಿ ಎಂಟು ವಿಕೆಟ್‌ಗಳಿಂದ ಭರ್ಜರಿ ಜಯ ದಾಖಲಿಸಿದೆ.

ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ ಟಿ20 ಗುಂಪು ಹಂತದ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ಎ ತಂಡಗಳು ಕಾದಾಡಿದವು. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 93 ರನ್‌ಗಳನ್ನು ಮಾತ್ರ ಕಲೆಹಾಕಿತು. ಹೀಗೆ ಟೀಂ ಇಂಡಿಯಾ ಬೌಲರ್‌ಗಳು ಮಾರಕ ಬೌಲಿಂಗ್‌ ದಾಳಿ ನಡೆಸಿ ಪಾಕಿಸ್ತಾನವನ್ನು ಮೂರಂಕಿ ದಾಟಲು ಬಿಡದೇ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಅರ್ಧ ಶತಕ ಸಿಡಿಸಿದ ಕನ್ನಡತಿ

ಬಳಿಕ ಪಾಕಿಸ್ತಾನ ನೀಡಿದ ಸಾಧಾರಣ ಗುರಿ ಬೆನ್ನತ್ತಿದ ಭಾರತ, ಕೇವಲ 10.1 ಓವರ್‌ನಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 97 ರನ್‌ಗಳನ್ನು ಕಲೆಹಾಕಿ ಭರ್ಜರಿ ಗೆಲುವು ಸಾಧಿಸಿತು. ಕರ್ನಾಟಕ ಮೂಲದ ವೃಂದಾ ದಿನೇಶ್ ಕೇವಲ 29 ಎಸೆತಗಳಲ್ಲಿ 12 ಬೌಂಡರಿ ಸಹಿತ ಅಜೇಯ 55 ರನ್‌ಗಳನ್ನು ಕಲೆಹಾಕಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಉಳಿದಂತೆ, ಅನುಷ್ಕಾ ಬ್ರಿಜ್‌ಮೋಹನ್ ಶರ್ಮಾ 24(26), ತೇಜಲ್ ಹಸಾಬ್ನಿಸ್ ಅಜೇಯ 12(5) ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಪ್ರಮುಖ ಕಾರಣರಾದರು.

ಭಾರತದ ಬೌಲಿಂಗ್‌ ದಾಳಿಗೆ ತತ್ತರಿಸಿದ ಪಾಕ್‌ ಬ್ಯಾಟರ್‌ಗಳು

ಭಾರತದ ಬೌಲಿಂಗ್ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಬ್ಯಾಟರ್‌ಗಳಿಗೆ ತುಂಬಾ ಕಾಡಿದರು. ಸೈಮಾ ಠಾಕೋರ್ ನಾಲ್ಕು ಓವರ್ ಎಸೆದು ಬರೀ 14 ರನ್‌ಗಳನ್ನು ನೀಡಿ ಎರಡು ವಿಕೆಟ್‌ ಕಬಳಿಸಿದರೆ, ಹಾಗರಯೇ ನಾಯಕಿ ರಾಧಾ ಯಾದವ್ ಹಾಗೂ ಪ್ರೇಮಾ ರಾವತ್ ಸಹ ಎರಡು ವಿಕೆಟ್ ಪಡೆದರು. ಜಿಂಟಿಮಣಿ ಕಲಿತಾ ಹಾಗೂ ಮಿನ್ನು ಮಣಿ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನವನ್ನು 93 ರನ್‌ಗಳಿಗೆ ಕಟ್ಟಿಹಾಕಿದರು. ಇನ್ನೂ ಭಾರತದ ಬೌಲಿಂಗ್ ದಾಳಿಗೆ ಪಾಕ್‌ ಬ್ಯಾಟರ್‌ಗಳನ್ನು ತತ್ತರಿದಂತೂ ಸತ್ಯ.

Story first published: Sunday, February 15, 2026, 15:32 [IST]
Other articles published on Feb 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+