IND vs PAK: ಹರ್ಭಜನ್ ಸಿಂಗ್ ರೊಚ್ಚಿಗೆದ್ದ ಬಳಿಕ ಕ್ಷಮೆಯಾಚಿಸಿದ ಕಮ್ರಾನ್ ಅಕ್ಮಲ್
ಭಾರತೀಯ ವೇಗಿ ಅರ್ಶ್‌ದೀಪ್ ಸಿಂಗ್ ಕುರಿತು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಅವರ ಜನಾಂಗೀಯ ಹೇಳಿಕೆಗೆ ಎರಡು ವಿಶ್ವಕಪ್ ವಿಜೇತ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಬಲವಾದ ಪದಗಳ ಪ್ರತಿಕ್ರಿಯೆ ನೀಡಿದ್ದಾರೆ.
ಭಾನುವಾರ, ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ಟಿ20 ವಿಶ್ವಕಪ್ ಪಂದ್ಯದ ವೇಳೆ ಕಮ್ರಾನ್ ಅಕ್ಮಲ್ ಅವರು ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಮತ್ತು ಅವರ ಧರ್ಮದ ಬಗ್ಗೆ ಅಸಹ್ಯಕರ ಹೇಳಿಕೆಗಾಗಿ ಭಾರೀ ಟೀಕೆ ಎದುರಿಸುತ್ತಿದ್ದಾರೆ.

ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್ ಕಮ್ರಾನ್ ಅಕ್ಮಲ್‌ನ ಹೇಳಿಕೆಗಳನ್ನು "ಕೊಳಕು' ಎಂದು ಕರೆದ ಹರ್ಭಜನ್ ಸಿಂಗ್ ತಮ್ಮ ಕೋಪವನ್ನು ಹೊರಹಾಕಿದರು.
ಪಂದ್ಯಕ್ಕೂ ಮುನ್ನ ಕಮ್ರಾನ್ ಅಕ್ಮಲ್ ಅವರು ಲೈವ್ ಟೆಲಿವಿಷನ್ ಶೋನಲ್ಲಿ ಕಾಣಿಸಿಕೊಂಡಾಗ, ಅರ್ಶ್‌ದೀಪ್ ಸಿಂಗ್ ಮತ್ತು ಸಿಖ್ ಸಮುದಾಯದ ಬಗ್ಗೆ ಸಂವೇದನೆ ಇಲ್ಲದ ಹಾಸ್ಯ ಮಾಡಿದ ನಂತರ ಹರ್ಭಜನ್ ಸಿಂಗ್ ಆಕ್ರೋಶಗೊಂಡರು.
"ನೀವು ನಿಮ್ಮ ಹೊಲಸು ಬಾಯಿ ತೆರೆಯುವ ಮೊದಲು ನೀವು ಸಿಖ್ಖರ ಇತಿಹಾಸವನ್ನು ತಿಳಿದುಕೊಳ್ಳಬೇಕು. ಆಕ್ರಮಣಕಾರರಿಂದ ಅಪಹರಣಕ್ಕೊಳಗಾದಾಗ ನಾವು ಸಿಖ್ಖರು ನಿಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಉಳಿಸಿದ್ದೇವೆ. ಸಮಯ ಸರಿಯಾಗಿ 12 ಗಂಟೆಯಾಗಿತ್ತು. ನಿಮಗೆ ನಾಚಿಕೆಯಾಗಬೇಕು, ನಿಮಗೆ ಸ್ವಲ್ಪ ಕೃತಜ್ಞತೆ ಇರಲಿ," ಎಂದು ಹರ್ಭಜನ್ ಸಿಂಗ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದಾದ ಕೆಲವೇ ಗಂಟೆಗಳ ನಂತರ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವನ್ನು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು 6 ರನ್‌ಗಳಿಂದ ಸೋಚಕವಾಗಿ ಸೋಲಿಸಿತು.

ಹರ್ಭಜನ್, ಸಿಖ್ ಸಮುದಾಯಕ್ಕೆ ಕ್ಷಮೆಯಾಚಿಸಿದ ಕಮ್ರಾನ್ ಅಕ್ಮಲ್
ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಕಮ್ರಾನ್ ಅಕ್ಮಲ್ ಒಂದು ದಿನದ ನಂತರ ಹರ್ಭಜನ್ ಸಿಂಗ್ ಮತ್ತು ಸಿಖ್ ಸಮುದಾಯಕ್ಕೆ ಕ್ಷಮೆಯಾಚನೆಯ ಟಿಪ್ಪಣಿಯನ್ನು ಬರೆದಿದ್ದಾರೆ.
"ನನ್ನ ಇತ್ತೀಚಿನ ಹೇಳಿಕೆಗಳಿಗೆ ನಾನು ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಹರ್ಭಜನ್ ಸಿಂಗ್ ಮತ್ತು ಸಿಖ್ ಸಮುದಾಯಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನನ್ನ ಮಾತುಗಳು ಅನುಚಿತ ಮತ್ತು ಅಗೌರವದಿಂದ ಕೂಡಿದ್ದವು. ನಾನು ಪ್ರಪಂಚದಾದ್ಯಂತ ಸಿಖ್ಖರ ಬಗ್ಗೆ ಅತ್ಯಂತ ಗೌರವವನ್ನು ಹೊಂದಿದ್ದೇನೆ ಮತ್ತು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿಲ್ಲ. ನಾನು ನಿಜವಾಗಿಯೂ ಕ್ಷಮಿಯಾಚಿಸುತ್ತೇನೆ," ಎಂದು ಕಮ್ರಾನ್ ಅಕ್ಮಲ್ ಎಕ್ಸ್ (ಟ್ವಿಟ್ಟರ್) ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಕಮ್ರಾನ್ ಅಕ್ಮಲ್ ವಿರುದ್ಧ ಹರ್ಭಜನ್ ಸಿಂಗ್ ವಾಗ್ದಾಳಿ ನಡೆಸುವ ಮೊದಲು, ಪಾಕಿಸ್ತಾನ ಮಾಜಿ ಕ್ರಿಕೆಟಿಗನು ತನ್ನ ಕಾಮೆಂಟ್‌ಗಳಿಗಾಗಿ ಭಾರೀ ವಿರೋಧ ಎದುರಿಸುತ್ತಿದ್ದನು.
ಭಾನುವಾರದ ಟಿವಿ ಕಾರ್ಯಕ್ರಮದ ಸಮಯದಲ್ಲಿ ಮತ್ತೊಬ್ಬ ಪ್ಯಾನೆಲಿಸ್ಟ್‌ನ ಮತ್ತೊಂದು ಸಂವೇದನಾಶೀಲ ಕಾಮೆಂಟ್‌ಗೆ ಕಮ್ರಾನ್ ಅಕ್ಮಲ್ ನಗುತ್ತಿರುವುದನ್ನು ಸಹ ನೋಡಲಾಗಿದೆ.
ಕೆಲವು ಮಾಜಿ ಕ್ರಿಕೆಟಿಗರು ಸಾಮಾಜಿಕ ಮಾಧ್ಯಮದಲ್ಲಿ ಗೆರೆ ದಾಟಿದರೂ, ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನದ ಪಂದ್ಯವನ್ನು ಉತ್ತಮ ಉತ್ಸಾಹದಲ್ಲಿ ಆಡಲಾಯಿತು. ಅಂತಿಮವಾಗಿ ಭಾರತ ತಂಡ ಜಯಭೇರಿ ಬಾರಿಸಿತು.
ಬಹು ನಿರೀಕ್ಷಿತ ಪಂದ್ಯ ಆರಂಭಕ್ಕೂ ಮುನ್ನ ಭಾರತ ಮತ್ತು ಪಾಕಿಸ್ತಾನ ತಂಡಗಳ ಆಟಗಾರರು ತಮ್ಮ ಸೌಹಾರ್ದತೆಯನ್ನು ಮೆರೆದರು. ನಸ್ಸೌ ಕೌಂಟಿಯಲ್ಲಿ 34,000 ಅಭಿಮಾನಿಗಳೊಂದಿಗೆ ತುಂಬಿದ ಸ್ಟ್ಯಾಂಡ್ ಮುಂದೆ, ಶಾಹೀನ್ ಅಫ್ರಿದಿ ಮತ್ತು ರಿಷಭ್ ಪಂತ್ ಅವರು ಬೌಂಡರಿ ಹಗ್ಗದ ಉದ್ದಕ್ಕೂ ಜೊತೆಯಾಗಿ ಮೈದಾನಕ್ಕೆ ಕಾಲಿಟ್ಟರು.
ರಾಷ್ಟ್ರಗೀತೆಗಾಗಿ ಮೈದಾನಕ್ಕೆ ತೆರಳುವ ಮೊದಲು ಎರಡು ತಂಡಗಳ ಆಟಗಾರರು ಕೈಕುಲುಕಿದರ ಮತ್ತು ಆಲಿಂಗನ ಹಂಚಿಕೊಂಡವು. ರೋಚಕ ಪಂದ್ಯದ ನಂತರವೂ, ರೋಹಿತ್ ಶರ್ಮಾ ಅವರು ಪಾಕಿಸ್ತಾನದ ಸೋಲಿನ ಬಳಿಕ ಕಣ್ಣೀರಿಟ್ಟ ನಸೀಮ್ ಶಾಗೆ ಸಾಂತ್ವನ ಹೇಳಿದಾಗ ಹೃದಯಸ್ಪರ್ಶಿಯೊಂದಿಗೆ ಬಂದರು.
ವೇಗದ ಬೌಲರ್ ನಸೀಮ್ ಶಾ ಮೈದಾನದಲ್ಲಿ ಮಾರಕ ಬೌಲಿಂಗ್ ಪ್ರದರ್ಶನ ನೀಡಿದರು. ಮೊದಲು 3 ವಿಕೆಟ್‌ಗಳನ್ನು ಪಡೆದರೆ, ನಂತರ ಕೊನೆಯ ಓವರ್‌ನಲ್ಲಿ ಎರಡು ಬೌಂಡರಿ ಬಾರಿಸಿದರು. ಪಾಕಿಸ್ತಾನ 120 ರನ್‌ಗಳ ಗುರಿಯನ್ನು ಕೇವಲ 6 ರನ್‌ಗಳಿಂದ ಸೋತ ನಂತರ ಅವರು ಮೈದಾನದಲ್ಲೇ ಅತ್ತರು.
ಎರಡು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿರುವ ಭಾರತ ತಂಡ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕಳೆದ ವಾರ ಗ್ರ್ಯಾಂಡ್ ಪ್ರೈರಿಯಲ್ಲಿ ನಡೆದ ಸಹ-ಆತಿಥೇಯ ಯುಎಸ್‌ಎ ವಿರುದ್ಧದ ಪಂದ್ಯ ಸೇರಿದಂತೆ ಇದುವರೆಗೆ ಆಡಿದ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ ಸೋತು ಪಂದ್ಯಾವಳಿಯಿಂದ ಹೊರಬೀಳುವ ಅಪಾಯದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications