For Quick Alerts
ALLOW NOTIFICATIONS  
For Daily Alerts
 

ಪಾಕ್‌ ವಿರುದ್ಧ ನಾಯಕನ ಆಟ: ರೋಹಿತ್ ಬ್ಯಾಟಿಂಗ್‌ಗೆ ತಲೆದೂಗಿದ ಮಾಜಿ ಕೋಚ್ ರವಿ ಶಾಸ್ತ್ರಿ

ಏಷ್ಯಾಕಪ್ ಟೂರ್ನಿಯ ಲೀಗ್ ಹಂತದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರರು ಭರ್ಜರಿ ಶತಕದ ಜೊತೆಯಾಟ ನೀಡುವ ಮೂಲಕ ಮಿಂಚಿದ್ದಾರೆ. ನಾಯಕ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಇಬ್ಬರು ಕೂಡ ಶತಕದ ಜೊತೆಯಾಟ ನೀಡಿ ಗಮನಸೆಳೆದಿದ್ದಾರೆ. ಆದರೆ ನಂತರ ಮಳೆ ಅಡ್ಡಿಯಾಗಿದ್ದು ಪಂದ್ಯ ಸ್ಥಗಿತಗೊಂಡಿತು.

ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ತಂಡದ ನಾಯಕ ರೋಹಿತ್ ಶರ್ಮಾ ಪ್ರದರ್ಶನದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಒಂದೇ ಒಂದು ಕಳಪೆ ಎಸೆತವನ್ನು ಬಿಡಲಿಲ್ಲ. ಕೆಟ್ಟ ಎಸೆತಗಳನ್ನು ಸಂಪೂರ್ಣವಾಗಿ ದಂಡಿಸಿದರು ಎಂದು ರವಿ ಶಾಸ್ತ್ರಿ ನಾಯಕನ ಆಟದ ಬಗ್ಗೆ ಮೆಚ್ಚಿಗೆ ಸೂಚಿಸಿದ್ದಾರೆ.

Ind vs Pak: Ravi Shastri Praises Rohit Sharma batting against Pakistan in Asia cup super 4

"ಆರಂಭದಲ್ಲಿ ನಸೀಮ್ ಶಾ ಎಸೆದ ಹತ್ತು ಎಸೆತಗಳಲ್ಲಿ ರೋಹಿತ್ ಶರ್ಮಾ ಅವರನ್ನು ವಂಚಿಸಿತು. ಚೆಂಡಿಗೆ ಬಾರಿಸಲು ಅವರು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಅದಾದ ಬಳಿಕ ಅವರಿಗೆ ದೊರೆತ ಎಲ್ಲಾ ಕಳಪೆ ಎಸೆತಗಳನ್ನು ಕೂಡ ಸರಿಯಾಗಿ ದಂಡಿಸಿದ್ದಾರೆ. ಅವೆಲ್ಲವನ್ನೂ ಅವರು ಬೌಂಡಿರಿ ಮೇಲಿನಿಂದ ಅಥವಾ ಬೌಂಡರಿಗೆ ಬಾರಿಸಿದ್ದಾರೆ" ಎಂದು ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ ರವಿ ಶಾಸ್ತ್ರಿ.

ಇನ್ನು ಇದೇ ಸಂದರ್ಭದಲ್ಲಿ ರವಿ ಶಾಸ್ತ್ರಿ ನಾಯಕ ರೋಹಿತ್ ಶರ್ಮಾ ಇಂದು ಬಲಿಷ್ಠವಾದ ರಣತಂತ್ರದೊಂದಿಗೆ ಆಗಮಿಸಿದ್ದರು ಎಂದಿದ್ದಾರೆ. ಕಳಪೆ ಎಸೆತಗಳನ್ನು ದಂಡಿಸುವ ನಿಟ್ಟಿನಲ್ಲಿ ಸಿದ್ದವಾಗಿದ್ದ ರೋಹಿತ್ ಶರ್ಮಾಗೆ ಇಂದಿನ ಪಂದ್ಯದಲ್ಲಿ ನೀಡಿದ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಲೇಬೇಕು ಎಂದಿದ್ದಾರೆ.

"ರೋಹಿತ್ ಶರ್ಮಾ ಇಂದು ಒಂದೂ ಕಳಪೆ ಎಸೆತವನ್ನು ವ್ಯರ್ಥ ಮಾಡಲಿಲ್ಲ. ಬೌಲರ್‌ಗಳು ಉತ್ತಮ ಬೌಲಿಂಗ್ ದಾಳಿ ನಡೆಸಿದರೂ ಅವರಿಂದ ಇಂಥಾ ಪ್ರದರ್ಶನ ಬರಲು ಕಾರಣವಾಗಿದ್ದು ಅವರ ಆ ರಣತಂತ್ರ. ಅವರ ಲೆಕ್ಕಾಚಾರ ಎನಾಗುತ್ತು ಎಂದರೆ ಯಾವುದೇ ಕಳಪೆ ಎಸೆತ ಬಂದರೂ ಅದನ್ನು ದಂಡಿಸುವುದಾಗಿತ್ತು" ಎಂದಿದ್ದಾರೆ ಮಾಜಿ ಕೋಚ್ ರವಿ ಶಾಸ್ತ್ರಿ.

ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ 50ನೇ ಅರ್ಥ ಶತಕ ಬಾರಿಸಿದ್ದಾರೆ. ಈ ಅರ್ಧ ಶತಕದ ಮೈಲಿಗಲ್ಲು ದಾಟಲು ರೋಹಿತ್ ಶರ್ಮಾ ಇಂದು ಬಳಸಿಕೊಂಡಿದ್ದು 42 ಎಸೆತಗಳನ್ನು ಮಾತ್ರ. ಅಂತಿಮವಾಗಿ ರೋಹಿತ್ ಶರ್ಮಾ 56 ರನ್‌ಗಳನ್ನು ಗಳಿಸಿ ವಿಕೆಟ್ ಶದನ್ ಖಾನ್‌ಗೆ ವಿಕೆಟ್ ಒಪ್ಪಿಸಿದ್ದಾರೆ.

ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ

ಪಾಕಿಸ್ತಾನ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶದಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹರಿಸ್ ರೌಫ್
ಬೆಂಚ್: ಸೌದ್ ಶಕೀಲ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ವಾಸಿಮ್ ಜೂನಿಯರ್

Story first published: Sunday, September 10, 2023, 19:30 [IST]
Other articles published on Sep 10, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+