IND vs PAK T20 World Cup: ಪಂದ್ಯದ ನೇರಪ್ರಸಾರ, ಪಿಚ್ ವರದಿ, ಪ್ಲೇಯಿಂಗ್ ಇಲೆವೆನ್, ಸಮಯ, ವಾತಾವರಣದ ಮಾಹಿತಿ
ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಸೂಪರ್ ಸಂಡೆಯ ಮಜಾ ಹೆಚ್ಚಿಸಲಿದೆ. ಹೈವೋಲ್ಟೇಜ್ ಪಂದ್ಯ ಶ್ರೀಲಂಕಾದಲ್ಲಿ ಕೊಲಂಬೊದಲ್ಲಿ ನಡೆಯಲಿದೆ. ಬಿಗ್ ಫೈಟ್ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರರಾಗಿದ್ದಾರೆ. ಇಡೀ ವಿಶ್ವದ ಗಮನ ಸೆಳೆದಿರುವ ಪಂದ್ಯವನ್ನು ನೋಡುವುದು ಹೇಗೆ? ಪಿಚ್ ವರದಿ ಏನು ಹೇಳುತ್ತದೆ? ಮಳೆ ಬಂದರೆ ಏನಾಗುತ್ತದೆ? ಎಂಬೆಲ್ಲಾ ಅಂಶಗಳನ್ನು ಒಳಗೊಂಡ ವರದಿ ಇಲ್ಲಿದೆ.
ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಅಲ್ಲದೆ ಅಜೇಯ ಓಟವನ್ನು ಹಿಗ್ಗಿಸಿಕೊಳ್ಳಲು ಪಾಕಿಸ್ತಾನ ವಿರುದ್ಧದ ಪಂದ್ಯ ಬೆಸ್ಟ್ ವೇದಿಕೆ ಆಗಿರಲಿದೆ. ಆದರೆ ಭಾರತ ಈ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಟವಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಯಾವುದೇ ಹಂತದಲ್ಲೂ ಪಂದ್ಯದಲ್ಲಿ ಪಾಕ್ ಪುಟಿದೇಳಬಹುದು ಎಂಬುದನ್ನು ಅರಿತಿರುವ ಸೂರ್ಯ ಪಡೆ ಇದಕ್ಕಾಗಿ ಮಾಸ್ಟರ್ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.

ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ತಂಡದ ಭಾಗವಾಗಿರದ ಅಭಿಷೇಕ್ ಶರ್ಮಾ ಫಿಟ್ ಆಗಿದ್ದಾರೆ. ಆದರೆ ಇವರು ಪಾಕ್ ವಿರುದ್ಧ ಕಣಕ್ಕೆ ಇಳಿಯುತ್ತಾರೋ ಇಲ್ಲವೋ ಎಂಬ ಬಗ್ಗೆ ಟಾಸ್ ಬಳಿಕವೇ ಉತ್ತರ ಸಿಗಲಿದೆ.
ಪಿಚ್‌ನಿಂದ ಯಾರಿಗೆ ಲಾಭ?
ಕೊಲಂಬೊದ ಪ್ರೇಮದಾಸ ಮೈದಾನ ಸ್ಪಿನ್ ಬೌಲರ್‌ಗಳ ಸ್ವರ್ಗ ಎಂದು ಹೇಳಲಾಗುತ್ತದೆ. ಹೀಗಾಗಿ ಉಭಯ ತಂಡಗಳು ಬಲಿಷ್ಠ ಸ್ಪಿನ್ ಬೌಲಿಂಗ್ ಲೈನ್ ಅಪ್‌ನೊಂದಿಗೆ ಕಣಕ್ಕೆ ಇಳಿಯಲಿದೆ. ಈ ಪಿಚ್ ಮೇಲೆ ಬ್ಯಾಟರ್‌ಗಳು ಸವಾಲನ್ನು ಎದುರಿಸಲಿದ್ದಾರೆ. ಹೀಗಾಗಿ ಈ ಪಿಚ್‌ನಲ್ಲಿ ಟಾಸ್ ಸಹ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಪಿಚ್‌ನಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಬಹುದು.
ಮಳೆ ಬಂದರೆ, ಕಾಯ್ದಿರಿಸಿದ ದಿನ ಇರುತ್ತದಾ?
ಭಾರತ ಹಾಗೂ ಪಾಕಿಸ್ತಾನ ನಡವುಣ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಸಂಜೆಯ ವೇಳೆ ಮಳೆ ಸುರಿಯುವ ಸಾಧ್ಯತೆ ಇದೆ. ಟಿ20 ಕ್ರಿಕೆಟ್‌ನಲ್ಲಿ ಫಲಿತಾಂಶಗಳು ಬರಬೇಕಿದ್ದರೆ ಕನಿಷ್ಠ 5 ಓವರ್‌ಗಳ ಪಂದ್ಯಗಳು ನಡೆಯಬೇಕಾಗುತ್ತದೆ. ಪಂದ್ಯ ನಡೆಯಲು ಮಳೆ ಬಿಡದೇ ಇದ್ದಲ್ಲಿ ಪಂದ್ಯವನ್ನು ರದ್ದು ಎಂದು ಘೋಷಿಸಲಾಗುವುದು. ಅಲ್ಲದೆ ಲೀಗ್ ಹಂತದ ಪಂದ್ಯಕ್ಕೆ ಕಾಯ್ದಿರಿಸಿದ ದಿನ ಇರುವುದಿಲ್ಲ. ಹೀಗಾಗಿ ಈ ಪಂದ್ಯ ರದ್ದಾದಲ್ಲಿ ಉಭಯ ತಂಡಗಳು ತಲಾ ಒಂದು ಅಂಕ ಪಡೆಯುತ್ತವೆ.
ಹೀಗಿರಬಹುದು ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್
ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಪಾಕಿಸ್ತಾನ ತಂಡದಲ್ಲಿ ಯಾರಿಗೆಲ್ಲಾ ಸಿಗಬಹುದು ಸ್ಥಾನ?
ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಆಗಾ, ಬಾಬರ್ ಅಜಮ್, ಶಾದಾಬ್ ಖಾನ್, ಉಸ್ಮಾನ್ ಖಾನ್/ಫಖರ್ ಜಮಾನ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ತಾರಿಕ್, ಅಬ್ರಾರ್ ಅಹ್ಮದ್.
ಭಾರತ, ಪಾಕ್ ನಡುವಣ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸುವುದ ಎಲ್ಲಿ?
ಟಿ20 ವಿಶ್ವಕಪ್‌ನ ಲೀಗ್ ಹಂತದ ಪಂದ್ಯದಲ್ಲಿ ಭಾರತ, ಪಾಕ್ ತಂಡಗಳು ಕಾದಾಟ ನಡೆಸಲಿದ್ದು, ಈ ಪಂದ್ಯದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋಹಾಟ್‌ಸ್ಟಾರ್‌ನಲ್ಲೂ ನೋಡಬಹುದು.
ಭಾರತ, ಪಾಕ್ ಲೀಗ್ ಪಂದ್ಯ ನಡೆಯವ ಸಮಯ ಯಾವಾಗ?
ಭಾರತ ಹಾಗೂ ಪಾಕ್ ನಡುವಣ "ಎ" ಗುಂಪಿನ ಪಂದ್ಯ ಸಂಜೆ 7 ಗಂಟೆಗೆ ನಡೆಯಲಿದೆ. ಅಲ್ಲದೆ ಟಾಸ್ ಅರ್ಧಗಂಟೆಗೂ ಮುನ್ನ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications