IND vs PAK T20: ಕೊಲಂಬೊ ವಿಮಾನ ಪ್ರಯಾಣ ಬಲು ದುಬಾರಿ, ಅಭಿಮಾನಿಗಳ ಜೇಬಿಗೆ ಕತ್ತರಿ
ಟಿ20 ವಿಶ್ವಕಪ್ ಆರಂಭವಾಗಿದೆ. ಈ ಟೂರ್ನಿಯ ಹೈವೋಲ್ಟೇಜ್ ಪಂದ್ಯ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕಾದಾಟಕ್ಕೆ ದಿನಗಣನೆ ಆರಂಭವಾಗಲಿದೆ. ಪಾಕಿಸ್ತಾನ ಸರ್ಕಾರ ಭಾರತದ ವಿರುದ್ಧದ ಪಂದ್ಯವನ್ನು ಕಣಕ್ಕೆ ಇಳಿಯಲು ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದ ಕ್ರಿಕೆಟ್ ಅಭಿಮಾನಿಗಳು ಚಿತ್ತ ಈಗ ಶ್ರೀಲಂಕಾದತ್ತ ನೆಟ್ಟಿದೆ. ಫೆಬ್ರವರಿ 15 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಕೊಲಂಬೊದಲ್ಲಿ ಕಾದಾಟ ನಡೆಸಲಿವೆ.
ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ವೇಳಾಪಟ್ಟಿ ಬಿಡುಗಡೆ ಆದಾಗಲೇ ಟಿಕೆಟ್ ಸೋಲ್ಡ್ ಔಟ್ ಆಗಿವೆ. ವಿಶ್ವವೇ ತದೇಕ ಚಿತ್ತದಿಂದ ನೋಡುವಂತಹ ಪಂದ್ಯಗಳಲ್ಲಿ ಈ ಪಂದ್ಯವೂ ಸಹ. ಈ ಬಿಗ್ ಫೈಟ್‌ನ್ನು ಒಮ್ಮೆ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಈಗ ಕೊಲಂಬೊದತ್ತ ಮುಖ ಮಾಡಿದ್ದಾರೆ. ಉಭಯ ದೇಶಗಳ ನಡುವಣ ಫೈಟ್ ನಡೆಯುತ್ತಿದ್ದಂತೆ ವಿಮಾನಗಳ ದರವು ಸಹ ಗಗನಕ್ಕೆ ಮುಟ್ಟಿದೆ.

ಭಾರತ, ಪಾಕ್ ನಡುವಣ ಪಂದ್ಯ ನಡೆಯುವುದು ಫಿಕ್ಸ್ ಆಗುತ್ತಲೇ ವಿಮಾನಯಾನ ಕಂಪನಿಗಳು ದರವನ್ನು ಏರಿಸಿವೆ. ಸಾಮಾನ್ಯವಾಗಿ ಬೆಂಗಳೂರಿನಿಂದ ಕೊಲಂಬೊಗೆ 15 ರಿಂದ 20 ಸಾವಿರ ರೂಪಾಯಿ ಇರುತ್ತಿತ್ತು. ಈಗ ಈ ಪಂದ್ಯ ಫಿಕ್ಸ್ ಆಗುತ್ತಿದ್ದಂತೆ ವಿಮಾನದ ಬೆಲೆಗಳು ದುಬಾರಿಯಾಗಿವೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯುವ ಎರಡು ದಿನ ಹಿಂದೆ ಮುಂದೆ ಟಿಕೆಟ್ ದರ ಹೆಚ್ಚಾಗಿವೆ. ಬೆಂಗಳೂರಿನಿಂದ ಕೊಲಂಬೊಗೆ ದರ 86 ಸಾವಿರ ರೂಪಾಯಿಗಳು ಎಂದು ತಿಳಿದು ಬಂದಿದೆ.
ದುಬಾರಿ ಹಾರಾಟ
ಅಂದಹಾಗೆ ದೆಹಲಿಯಿಂದ ಕೊಲಂಬೊಗೆ ಸಾಮಾನ್ಯ ದಿನಗಳಲ್ಲಿ ದರ ಸರಿಸುಮಾರು 30 ಸಾವಿರ ಆಗಿರುತ್ತದೆ. ಈ ಬೆಲೆ ಈಗ 1.10 ಲಕ್ಷ ರೂಪಾಯಿಗೆ ತಲುಪಿದೆ. ಇನ್ನು ಬಿಜಿನಸ್ ಕ್ಲಾಸ್ ಟಿಕೆಟ್ ದರ ಸಹ 2.25 ಲಕ್ಷ ರೂ.ಗೆ ಏರಿಕೆ ಆಗಿದೆ.

ಇನ್ನು ಕೊಲಂಬೊಕ್ಕೆ ಹೋಗಲು ಹೆಚ್ಚು ಅಭಿಮಾನಿಗಳು ಮುಂಬೈನತ್ತ ಮುಖ ಮಾಡಿದ್ದಾರೆ. ಮುಂಬೈನಿಂದ ಕೊಲಂಬೊಕ್ಕೆ ಮೂರು ಗಂಟೆಗಳ ಪ್ರಯಾಣ ಇರಲಿದೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯಗಳು ಫಿಕ್ಸ್ ಆದ ಮೇಲೆ ಮುಂಬೈ ಟು ಕೊಲಂಬೊ ವಿಮಾನ ದರಗಳು ಸಹ ಹೆಚ್ಚಾಗಿವೆ. ಎಕಾನಮಿ 7,127 ಆಗಿರುತ್ತಿತ್ತು. ಈ ದರವು ಈಗ 60 ಸಾವಿರದಿಂದ 85 ಸಾವಿರದ ವರೆಗೆ ಏರಿಕೆ ಆಗಿದೆ. ಇನ್ನು ಉಭಯ ತಂಡಗಳ ನಡುವಣ ಹೈವೋಲ್ಟೇಜ್ ಫೈಟ್ ಫಿಕ್ಸ್ ಆಗುತ್ತಿದ್ದಂತೆ ಶ್ರೀಲಂಕಾದಲ್ಲಿ ಹೋಟೆಲ್‌ಗಳ ದರವೂ ಹೆಚ್ಚಾಗಿದೆ.
ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶವನ್ನು ಹೊರಗಿಟ್ಟ ಬೆನ್ನಲ್ಲೆ ಪಾಕಿಸ್ತಾನ ಟಿ20 ವಿಶ್ವಕಪ್ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿತ್ತು. ಬಳಿಕ ಭಾರತದ ವಿರುದ್ಧದ ಪಂದ್ಯವನ್ನು ಮಾತ್ರ ಬಹಿಷ್ಕರಿಸುವುದಾಗಿ ತಿಳಿಸಿತ್ತು. ಈ ಬಗ್ಗೆ ಪಾಕ್ ಪ್ರಧಾನಿ ಅವರೇ ಕ್ಯಾಬಿನೆಟ್‌ನಲ್ಲಿ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದರು. ಇನ್ನು ಐಸಿಸಿ, ಪಿಸಿಬಿ, ಬಿಸಿಬಿ ಅಧಿಕಾರಿಗಳ ಸಭೆ ಸೋಮವಾರ ಲಾಹೋರ್‌ನಲ್ಲಿ ನಡೆಯಿತು. ಸಭೆಯ ಬಳಿಕ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಪಾಕ್ ಪ್ರಧಾನಿ ಅವರನ್ನು ಭೇಟಿ ಸಭೆಯಲ್ಲಿನ ವಿಷಯಗಳ ಬಗ್ಗೆ ತಿಳಿಸಿದರು. ಬಳಿಕ ಪಾಕ್ ಸರ್ಕಾರ ಭಾರತದ ವಿರುದ್ಧ ಆಡಲು ಅನುಮತಿ ನೀಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications