For Quick Alerts
ALLOW NOTIFICATIONS  
For Daily Alerts
 

ಇಂದು ಸ್ಪಿನ್ vs ಸ್ಪಿನ್; ಅಂದು ಬ್ಯಾಟಿಂಗ್ vs ಬೌಲಿಂಗ್‌

ಕ್ರಿಕೆಟ್‌ ಅಭಿಮಾನಿಗಳು ಕಾಯುತ್ತಿರುವ ಬಿಗ್ ಟೈಮ್ ಬಂದಿದೆ. ಭಾನುವಾರ ಕೊಲಂಬೊದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ "ಎ" ಗುಂಪಿನಿಂದ ಮುಂದಿನ ಹಂತಕ್ಕೆ ಪ್ರವೇಶಿಸುವ ಪ್ಲ್ಯಾನ್ ಎರಡೂ ತಂಡಗಳದ್ದಾಗಿದೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ರೋಚಕತೆ ಹೆಚ್ಚಿಸಿದೆ.

ಟೀಮ್ ಇಂಡಿಯಾ ಲೀಗ್‌ ಹಂತದಲ್ಲಿ ಎರಡೂ ಪಂದ್ಯಗಳನ್ನು ಗೆದ್ದು ಬೀಗಿದೆ. ಪಾಕಿಸ್ತಾನ ಸಹ ಅಜೇಯ ಓಟವನ್ನು ಮುಂದುವರಿಸಿದೆ. ಟಿ20 ವಿಶ್ವಕಪ್‌ನ ಹೈವೋಲ್ಟೇಜ್‌ ಪಂದ್ಯದಲ್ಲಿ ಗೆಲುವು ಯಾರಿಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಕೊಲಂಬೊದಲ್ಲಿನ ಪಿಚ್ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡಲಿದೆ. ಹೀಗಾಗಿ ಭಾನುವಾರ ಯಾರು ಸ್ಪಿನ್ ಬೌಲಿಂಗ್‌ನ್ನು ಉತ್ತಮವಾಗಿ ಆಡುತ್ತಾರೋ ಅವರು ಈ ಪಂದ್ಯವನ್ನು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಆರಂಭವಾಗಿದೆ.

IND vs PAK T20 World Cup

ಆರಂಭದಿಂದಲೂ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಎಂದರೆ ಬ್ಯಾಟಿಂಗ್ vs ಬೌಲಿಂಗ್‌ ಎಂದೇ ಖ್ಯಾತಿ ಪಡೆದಿತ್ತು. ಭಾರತದ ಪಾಳಯದಲ್ಲಿ ಸಾಲು ಸಾಲು ದಿಗ್ಗಜ ಬ್ಯಾಟರ್‌ಗಳು ಇದ್ದರು. ಹಾಗೇ ಪಾಕಿಸ್ತಾನದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಗ ವೇಗದ ಬೌಲರ್‌ಗಳ ದಂಡೇ ಇತ್ತು. ವಿಶ್ವದ ಶ್ರೇಷ್ಠ ಬ್ಯಾಟರ್‌ ಹಾಗೂ ಬೌಲರ್‌ಗಳ ಕಾಳಗ ನಿಜಕ್ಕೂ ಅಭಿಮಾನಿಗಳಿಗೆ ಖುಷಿ ನೀಡುತ್ತಿತ್ತು. ಸುನಿಲ್‌ ಗವಾಸ್ಕರ್‌ ಕಾಲದಿಂದ ಸಚಿನ್‌ ತೆಂಡೂಲ್ಕರ್ ವರೆಗೂ ಈ ಕಾಳಗ ಹೀಗೇ ಇತ್ತು. ಆದರೆ ಈಗ ಆಟದ ಅಗತ್ಯಕ್ಕೆ ತಕ್ಕಂತೆ ಸ್ವರೂಪ ಬದಲಾಗಿದೆ.

ಪಾಕ್‌ ತಂಡದಲ್ಲಿದ್ದಾರೆ ನುರಿತ ಸ್ಪಿನ್ ಬೌಲರ್ಸ್‌

ಕೊಲಂಬೊದಲ್ಲಿನ ಪಿಚ್ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡಲಿದ್ದು, ಎರಡೂ ತಂಡಗಳು ತಮ್ಮ ತಮ್ಮ ಬೆಸ್ಟ್‌ ಸ್ಪಿನ್ ಬೌಲರ್‌ಗಳನ್ನು ಕಣಕ್ಕೆ ಇಳಿಸುವ ಪ್ಲ್ಯಾನ್ ಮಾಡಿಕೊಳ್ಳುತ್ತಿವೆ. ಪಾಕ್‌ ತಂಡ ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿ ಸ್ಪಿನ್ ಬೌಲಿಂಗ್ ಮಾಡಿದ್ದು ಗಮನ ಸೆಳೆದಿದೆ. ಕಳೆದ ಕೆಲವು ಪಂದ್ಯಗಳಲ್ಲಿ ಪಾಕ್‌ ಆಡಿದ 20 ಓವರಗಳಲ್ಲಿ 16 ಓವರ್‌ ಸ್ಪಿನ್ ಬೌಲಿಂಗ್ ಮೂಲಕ ಮಾಡಿದೆ. ಹೀಗಾಗಿ ಪಾಕ್ ಭಾರತದ ವಿರುದ್ಧದ ಪಂದ್ಯದಲ್ಲೂ ಇದೇ ತಂತ್ರವನ್ನು ಅನುಸರಿಸುವ ಯೋಜನೆಯನ್ನು ಹೊಂದಿದೆ. ಮೊಹಮ್ಮದ್‌ ನವಾಜ್‌,ಅಬ್ರಾರ್ ಅಹ್ಮದ, ಸೈಮ್‌ ಆಯುಬ್‌, ಉಸ್ಮಾನ್‌ ತಾರೀಕ್‌, ಶಾದಬ್ ಖಾನ್ ತಮ್ಮ ಬಿಗುವಿನ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಬಲ್ಲರು.

ವರುಣ್ ಚಕ್ರವರ್ತಿ ನಂಬರ್ 1 ಬೌಲರ್

ಟೀಮ್ ಇಂಡಿಯಾದಲ್ಲೂ ನುರಿತ ಸ್ಪಿನ್ ಬೌಲರ್‌ಗಳು ಇದ್ದಾರೆ. ಇವರು ಸಹ ಎದುರಾಳಿ ಬ್ಯಾಟರ್‌ಗಳ ನಿದ್ದೆಯನ್ನು ಗೆಡಿಸಬಲ್ಲರು. ವಿಶ್ವದ ನಂಬರ್ 1 ಟಿ20 ಬೌಲರ್‌ ವರುಣ್ ಚಕ್ರವರ್ತಿ ತಮ್ಮ ವಿಭಿನ್ನ ಶೈಲಿ ಹಾಗೂ ವೇರಿಯೇಷನ್‌ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಇವರು ಸ್ಪಿನ್ ಮ್ಯಾಜಿಕ್‌ಗೆ ಉತ್ತರ ನೀಡುವಲ್ಲಿ ಖ್ಯಾತ ನಾಮ ಬ್ಯಾಟರ್‌ಗಳು ಸಹ ಕಂಗಾಲಾಗುತ್ತಾರೆ. ವರುಣ್ ಪವರ್ ಪ್ಲೇ ಹಾಗೂ ಮಿಡ್ಲ್‌ ಓವರ್‌ಗಳಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಬಲ್ಲರು

IND vs PAK T20 World Cup
.

ಭಾರತ ತಂಡದಲ್ಲಿ ವರುಣ್ ಚಕ್ರವರ್ತಿ ಬಿಟ್ಟು, ಇನ್ನೋಬ್ಬ ಸ್ಪಿನ್ ಬೌಲರ್ ಇದ್ದಾರೆ ಅವರೇ ಕುಲ್‌ದೀಪ್ ಯಾದವ್. ತಮ್ಮ ಚೈನಾ ಮನ್ ಬೌಲಿಂಗ್ ಶೈಲಿಯ ಮೂಲಕ ವಿಶ್ವದ ಗಮನ ಸೆಳೆದಿರು ಆಟಗಾರ ಕುಲ್‌ದೀಪ್‌. ಇವರು ಎಸೆಯುವ ರಾಂಗ್ ಒನ್ ಹಾಗೂ ಗೂಗ್ಲಿ ಬೌಲ್‌ಗಳಿಂದ ಎದುರಾಳಿಗಳನ್ನು ಕಾಡಬಲ್ಲರು. ಇವರನ್ನು ಬಿಟ್ಟಂತೆ ಟೀಮ್ ಇಂಡಿಯಾದಲ್ಲಿ ಆಲ್‌ರೌಂಡರ್ ರೂಪದಲ್ಲಿ ಸ್ಥಾನ ಪಡೆಯುವ ಅಕ್ಷರ್ ಪಟೇಲ್‌ ಸಹ ಪಾಕ್‌ ಬ್ಯಾಟರ್‌ಗಳನ್ನು ಕಟ್ಟಿ ಹಾಕಬ್ಲಲರು. ಇವರು ಇತ್ತೀಚಿಗೆ ತಮ್ಮ ಬೌಲಿಂಗ್‌ನಲ್ಲಿ ವಿವಿಧತೆಯನ್ನು ತಂದಿದ್ದು, ಬ್ಯಾಟರ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಬಲ್ಲರು.

Story first published: Saturday, February 14, 2026, 3:15 [IST]
Other articles published on Feb 14, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+