IND vs PAK: ಉಸ್ಮಾನ್ ತಾರೀಕ್ ಎದುರಿಸಲು ಸೂರ್ಯ ಪಡೆಯ ಮಾಸ್ಟರ್ ಪ್ಲ್ಯಾನ್
ಭಾರತ ಹಾಗೂ ಪಾಕಿಸ್ತಾನ ನಡುವಣ ಟಿ20 ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯ ಭಾನುವಾರ ಕೊಲಂಬೊದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಎರಡೂ ತಂಡಗಳು ಭರ್ಜರಿ ತಾಲೀಮು ನಡೆಸಿವೆ. ಲೀಗ್ ಹಂತದ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸಲು ಟೀಮ್ ಇಂಡಿಯಾ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ. ಶನಿವಾರ ಭಾರತ ತಂಡ ಅಭ್ಯಾಸ ಮಾಡಿತು. ಈ ವೇಳೆ ಪಾಕಿಸ್ತಾನ ತಂಡದ ಆ ಒಬ್ಬ ಪ್ಲೇಯರ್ ಬಗ್ಗೆ ಮಾಸ್ಟರ್ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.
ಕೊಲಂಬೊ ಪಿಚ್ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡಲಿದ್ದು, ಈ ಪಂದ್ಯದಲ್ಲಿ ಸ್ಪಿನ್ ಬೌಲರ್‌ಗಳ ತಂತ್ರವನ್ನು ಯಾರು ಸಮರ್ಥವಾಗಿ ಮೆಟ್ಟಿ ನಿಲ್ಲುತ್ತಾರೋ ಆ ತಂಡ ಹೈವೋಲ್ಟೇಜ್ ಪಂದ್ಯ ಗೆಲ್ಲಲಿದೆ. ಹೀಗಾಗಿ ಸ್ಪಿನ್ ತಂತ್ರವನ್ನು ಮೆಟ್ಟಿನಿಲ್ಲಲು ಬೇಕಾದ ರಣ ತಂತ್ರಗಳನ್ನು ಟೀಮ್ ಇಂಡಿಯಾ ಮಾಡಿಕೊಳ್ಳುತ್ತಿದೆ.

ಪಾಕಿಸ್ತಾನ ತಂಡದಲ್ಲಿ ನಾಲ್ವರು ಸ್ಪಿನ್ ಬೌಲರ್‌ಗಳು ಇದ್ದಾರೆ. ಅದರಲ್ಲಿ ಮಿಸ್ಟರಿ ಸ್ಪಿನ್ ಬೌಲರ್ ಉಸ್ಮಾನ್ ತಾರೀಕ್ ತಮ್ಮ ವಿಭಿನ್ನ ಬೌಲಿಂಗ್ ಶೈಲಿಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಇವರನ್ನು ಕಟ್ಟಿ ಹಾಕಲು ಟೀಮ್ ಇಂಡಿಯಾ ಸಹ ದೊಡ್ಡ ಯೋಜನೆಯನ್ನು ರೂಪಿಸಿಕೊಂಡಿದೆ. ಸಾಮಾನ್ಯವಾಗಿ ಒಬ್ಬ ವಿಭಿನ್ನ ಶೈಲಿಯ ಬೌಲರ್ ಎದುರಾಳಿ ತಂಡದಲ್ಲಿದ್ದರೆ ಅವರ ಸ್ಟೈಲ್‌ಗೆ ಹೊಂದುವ ಬೌಲರ್ ಹುಡುಕಿ ಅವರಿಂದ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿ ಬ್ಯಾಟರ್‌ಗಳಿಗೆ ಅಭ್ಯಾಸ ಮಾಡಿಸುತ್ತಾರೆ.
ಉಸ್ಮಾನ್ ತಾರೀಕ್ ನಿಂತು ಸಮಯ ಪಡೆದು ಬೌಲಿಂಗ್ ಮಾಡುವುದರಿಂದ ಇವರನ್ನು ಎದುರಿಸುವುದು ತುಂಬ ಕಷ್ಟ. ಇದನ್ನು ಅರಿತ ಟೀಮ್ ಇಂಡಿಯಾ ಬ್ಯಾಟರ್‌ಗಳಿಗೆ ಉಸ್ಮಾನ್ ತಾರೀಕ್ ಬೌಲಿಂಗ್ ಅಭ್ಯಾಸ ಮಾಡಿಸಲು ಸೂರ್ಯಕುಮಾರ್ ಯಾದವ್ ಅವರೇ ಬೌಲ್ ಹಿಡಿದು ಕಣಕ್ಕೆ ಇಳಿದರು. ಅಲ್ಲದೆ ಟೀಮ್ ಇಂಡಿಯಾ ಬ್ಯಾಟರ್‌ಗಳಿಗೆ ಉಸ್ಮಾನ್ ತಾರೀಕ್ ಅವರ ಆಕ್ಷನ್ ರೀತಿ ಬೌಲ್ ಮಾಡಿ ಅಭ್ಯಾಸ ಮಾಡಿಸಿದರು.
ಉಸ್ಮಾನ್ ಸಾಧನೆ
ಉಸ್ಮಾನ್ ತಾರೀಕ್ ಈ ವಿಶ್ವಕಪ್‌ನಲ್ಲಿ ಆಡಿದ ಒಂದು ಪಂದ್ಯದಲ್ಲಿ 3 ವಿಕೆಟ್ ಪಡೆದಿದ್ದಾರೆ. 28 ವರ್ಷದ ಉಸ್ಮಾನ್ ಪಾಕ್ ಪರ 4 ಪಂದ್ಯದಲ್ಲಿ 11 ವಿಕೆಟ್ ಕಬಳಿಸಿದ್ದಾರೆ.
ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸಾಧನೆ
ಟಿ20 ವಿಶ್ವಕಪ್‌ನಲ್ಲಿ ಭಾರತ ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಆಡಿದ ಮೊದಲ ಪಂದ್ಯದಲ್ಲಿ ಯುಎಸ್‌ಎ ತಂಡವನ್ನು 29 ರನ್‌ಗಳಿಂದ ಮಣಿಸಿದ ಸೂರ್ಯ ಪಡೆ, ಎರಡನೇ ಪಂದ್ಯದಲ್ಲಿ ನಮೀಬಿಯಾ ತಂಡವನ್ನು 93 ರನ್‌ಗಳಿಂದ ಸೋಲಿಸಿ ಅಬ್ಬರಿಸಿದೆ. ಇನ್ನು ಲೀಗ್ ಹಂತದ ಮೂರನೇ ಪಂದ್ಯದಲ್ಲಿ ಜಯ ಸಾಧಿಸಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications