Ind vs Pak: ಮೊಹಮ್ಮದ್ ರಿಜ್ವಾನ್‌ರನ್ನು ಮೈದಾನದಲ್ಲೇ ಟ್ರೋಲ್ ಮಾಡಿದ ವಿರಾಟ್ ಕೊಹ್ಲಿ!
ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಅಮೋಘ ದಾಖಲೆಯನ್ನು ಮುಂದುವರೆಸಿದೆ. ಇದುವರೆಗೂ ಭಾರತ ಪಾಕಿಸ್ತಾನ ವಿಶ್ವಕಪ್‌ನಲ್ಲಿ 8 ಬಾರಿ ಮುಖಾಮುಖಿಯಾಗಿದ್ದೂ ಎಲ್ಲಾ ಪಂದ್ಯಗಳನ್ನು ಭಾರತ ಗೆದ್ದಿದೆ. ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಗೆಲುವು ಸಾಧಿಸಿತು.
ಭಾರತ ಪಾಕಿಸ್ತಾನ ನಡುವಿನ ಪಂದ್ಯ ಎಂದರೆ ಅದೊಂದು ರೋಚಕ ಹಣಾಹಣಿ, ಆಟಗಾರರ ಸಂಭ್ರಮ, ಛೇಡಿಸುವಿಕೆ ಇದ್ದೇ ಇರುತ್ತದೆ. ಶನಿವಾರ ನಡೆದ ಪಂದ್ಯದಲ್ಲಿ ಕೂಡ ವಿರಾಟ್ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಪಾಕಿಸ್ತಾನದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್‌ರನ್ನು ಟ್ರೋಲ್ ಮಾಡಿದರು.

ಕ್ರೀಸ್‌ಗೆ ಆಗಮಿಸಿದ ನಂತರ ಮೊಹಮ್ಮದ್ ರಿಜ್ವಾನ್ ಸ್ಟ್ರೈಕ್ ತೆಗೆದುಕೊಳ್ಳಲು ಹೆಚ್ಚಿನ ಸಮಯವನ್ನು ತೆಗೆದುಕೊಂಡಿದ್ದರಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕಹ್ಲಿ ತಾಳ್ಮೆ ಕಳೆದುಕೊಂಡರು.
ರಿಜ್ವಾನ್ ವಿರುದ್ಧ ಕೊಹ್ಲಿ ಅಸಮಾಧಾನ
ಹಾರ್ದಿಕ್ ಪಾಂಡ್ಯ ಇಮಾಮ್ - ಉಲ್- ಹಕ್ ಅವರ ವಿಕೆಟ್ ಪಡೆದ ನಂತರ ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ ಮಾಡಲು ಬಂದರು. ಆದರೆ, ತಕ್ಷಣ ಬ್ಯಾಟಿಂಗ್ ಪ್ರಾರಂಭಿಸದ ಅವರು, ಸಿದ್ಧರಾಗಲು ಹೆಚ್ಚಿನ ಸಮಯವನ್ನೇ ತೆಗದುಕೊಂಡರು. ಮೊದಲು ಮೈದಾನದಲ್ಲಿ ಫೀಲ್ಡರ್ ಗಳನ್ನು ನೋಡಲು ಸಮಯ ತೆಗೆದುಕೊಂಡರು, ಗ್ಲೌಸ್ ಸರಿ ಮಾಡಿಕೊಳ್ಳಲು ಇನ್ನಷ್ಟು ಸಮಯವಾಯಿತು.
ಬಿಸಿಲಿನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಭಾರತದ ಆಟಗಾರರು ಕಾಯುತ್ತಾ ನಿಂತರು, ಈ ವೇಳೆ ತಾಳ್ಮೆ ಕಳೆದುಕೊಂಡ ನಾಯಕ ರೋಹಿತ್ ಶರ್ಮಾ ಅಂಪೈರ್ ಬಳಿ ತೆರಳಿ ಹತಾಶೆಯನ್ನು ವ್ಯಕ್ತಪಡಿಸಿದರು.
ಇನ್ನು ವಿರಾಟ್ ಕೊಹ್ಲಿಯಂತೂ ತಮ್ಮದೇ ಶೈಲಿಯಲ್ಲಿ ರಿಜ್ವಾನ್‌ರನ್ನು ಅಣಕಿಸಿದರು. ರಿಜ್ವಾನ್ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವುದನ್ನು ಟ್ರೋಲ್ ಮಾಡಲು, ತಮ್ಮ ಕೈನಲ್ಲಿ ಗಡಿಯಾರ ಇದೆ ಎನ್ನುವಂತೆ ನೋಡುತ್ತಾ ನಿಂತರು, ಇದು ಸಮಯ ಆಗುತ್ತಿದೆ ಎನ್ನುವ ರೀತಿಯಲ್ಲಿ ರಿಜ್ವಾನ್‌ಗೆ ಸಂದೇಶ ಕೊಟ್ಟರು.
ಇದನ್ನು ನೋಡಿದ ವೀಕ್ಷಕ ವಿವರಣೆಗಾರ ಮೈಕೆಲ್ ಅಥರ್ಟನ್, "ರೋಹಿತ್ ಸಂತೋಷವಾಗಿಲ್ಲ. ಅವರು ಅಂಪೈರ್‌ನೊಂದಿಗೆ ಮಾತನಾಡುತ್ತಿದ್ದಾರೆ 'ಇದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ನಾನು ನಂತರ ದಂಡ ವಿಧಿಸಲು ಬಯಸುವುದಿಲ್ಲ'. ವಿರಾಟ್ ಕಾಲ್ಪನಿಕ ಗಡಿಯಾರವನ್ನು ನೋಡುತ್ತಿದ್ದಾರೆ," ಎಂದು ಅವರು ಹೇಳಿದರು.
ಸಮಯ ಕೂಡ ಮುಖ್ಯ
ಹೊಸ ಓವರ್-ರೇಟ್ ನಿಯಮದ ಪ್ರಕಾರ, ಫೀಲ್ಡಿಂಗ್ ತಂಡವು ಇನಿಂಗ್ಸ್‌ನ ಅಂತಿಮ ಓವರ್‌ನ ಮೊದಲ ಚೆಂಡನ್ನು ಗೊತ್ತುಪಡಿಸಿದ ಅಥವಾ ಮರುನಿಗದಿಪಡಿಸಿದ ಸಮಯದಲ್ಲಿ ಎಸೆಯಬೇಕು. ಹಾಗೆ ಮಾಡಲು ಸಾಧ್ಯವಾಗದಿದ್ದರೆ, ಇನ್ನಿಂಗ್ಸ್‌ನ ಉಳಿದ ಓವರ್‌ಗಳಿಗೆ 30-ಯಾರ್ಡ್ ವೃತ್ತದ ಹೊರಗೆ ಒಬ್ಬ ಕಡಿಮೆ ಫೀಲ್ಡರ್‌ಗೆ ಅವಕಾಶ ನೀಡಲಾಗುತ್ತದೆ.
ರಿಜ್ವಾನ್ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ. ಶ್ರೀಲಂಕಾ ವಿರುದ್ಧದ ಪಾಕಿಸ್ತಾನದ ವಿಶ್ವಕಪ್ ಪಂದ್ಯದ ವೇಳೆ, ಗಾಯಗೊಂಡಂತೆ ನಟಿಸಿ ಹೆಚ್ಚಿನ ಸಮಯ ಕಳೆದಿದ್ದರು, ಪಂದ್ಯದ ನಂತರ ಕೆಲವೊಮ್ಮ ಅದು ನಾಟಕವಾಗಿರುತ್ತದೆ ಎಂದು ಒಪ್ಪಿಕೊಳ್ಳುವ ಮೂಲಕ ಟೀಕೆಗೆ ಗುರಿಯಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications