Ind vs Pak:ವಿರಾಟ್ ಕೊಹ್ಲಿ ಟಿ ಶರ್ಟ್ ಪಡೆದುಕೊಂಡಿದ್ದಕ್ಕೆ ಬಾಬರ್ ಆಜಮ್ ವಿರುದ್ಧ ಕಿಡಿ ಕಾರಿದ ವಾಸಿಂ ಅಕ್ರಮ್
ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಪಂದ್ಯದ ಬಳಿಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ವಿರಾಟ್ ಕೊಹ್ಲಿ ಬಳಿ ಟಿ ಶರ್ಟ್ ಪಡೆದುಕೊಂಡರು, ಪಾಕ್ ತಂಡದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಬಾಬರ್ ವಿರುದ್ಧ ಕಿಡಿ ಕಾರಿದರು.
ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಪಾಕಿಸ್ತಾನ ವಿರುದ್ಧ 8-0 ಗೆಲುವಿನ ದಾಖಲೆ ಹೊಂದಿದೆ. ಪಾಕಿಸ್ತಾನ ತಂಡದ ಸೋಲಿನ ಬಗ್ಗೆ ಪಾಕ್ ಅಭಿಮಾನಿಗಳು ಬೇಸರಗೊಂಡಿರುವಾಗ ಬಾಬರ್ ಅಜಂ ನಡೆದುಕೊಂಡ ರೀತಿ ಸರಿಯಿಲ್ಲ ಎಂದು ವಾಸಿಂ ಅಕ್ರಮ್ ಬೇಸರ ಹೊರಹಾಕಿದ್ದಾರೆ.

ಸೋಲಿನ ಹತಾಶೆಯಲ್ಲಿದ್ದ ಪಾಕಿಸ್ತಾನ ತಂಡದ ಅಭಿಮಾನಿಗಳಿಗೆ, ಪಾಕ್ ತಂಡದ ನಾಯಕ ಬಾಬರ್ ಮತ್ತು ಭಾರತದ ವಿರಾಟ್ ಕೊಹ್ಲಿಯನ್ನು ಒಳಗೊಂಡ ಗೆಸ್ಚರ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದು ಗಾಯದ ಮೇಲೆ ಉಪ್ಪು ಹಾಕಿದಂತಾಗಿದೆ. ಕೊಹ್ಲಿ ಟೀಂ ಇಂಡಿಯಾದ ಒಂದೆರಡು ಶರ್ಟ್‌ಗಳನ್ನು ಬಾಬರ್‌ಗೆ ಹಸ್ತಾಂತರಿಸುವುದನ್ನು ನೋಡಿ,ಪಾಕಿಸ್ತಾನದ ದಂತಕಥೆ ವಾಸಿಂ ಅಕ್ರಮ್ ಕೂಡ ಆಕ್ರೋಶಗೊಂಡರು.
ಇದನ್ನು ಸಾರ್ವಜನಿಕವಾಗಿ ಮಾಡಬೇಡಿ
ಎ-ಸ್ಪೋರ್ಟ್ಸ್‌ನಲ್ಲಿನ ಚಾಟ್‌ನಲ್ಲಿ ಮಾತನಾಡಿದ ಅಕ್ರಂ, ಬಾಬರ್ ಅಜಮ್ ಮೈದಾನದಲ್ಲಿ ಕ್ಯಾಮೆರಾ ಎದುರು ಕೊಹ್ಲಿಯಿಂದ ಟೀ-ಶರ್ಟ್‌ಗಳನ್ನು ಪಡೆದಿದ್ದಾರೆ, ಈ ದೃಶ್ಯವನ್ನು ಪ್ರಪಂಚದಾದ್ಯಂತದ ಟಿವಿಗಳಲ್ಲಿ ಪದೇ ಪದೇ ಪ್ಲೇ ಮಾಡಲಾಗುತ್ತಿದೆ. ಬಾಬರ್ ಕೊಹ್ಲಿಗೆ ಶರ್ಟ್‌ಗಳನ್ನು ಕೇಳಬೇಕಿದ್ದರೂ, ಅದನ್ನು ಕ್ಯಾಮೆರಾಗಳ ಮುಂದೆ ಅಲ್ಲ ಬದಲಾಗಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾಡಬೇಕಾಗಿತ್ತು ಎಂದರು.
ಇದನ್ನು ಅವರು ಇಂದು ಮಾಡಬಾರದಿತ್ತು, ಅವರ ಚಿಕ್ಕಪ್ಪನ ಮಗ ಕೊಹ್ಲಿಯ ಟಿ ಶರ್ಟ್ ಪಡೆದುಕೊಂಡು ಬರಲು ಹೇಳಿದ್ದರೆ ಅದನ್ನು ನಂತರ ಮಾಡಲಿ. ಡ್ರೆಸ್ಸಿಂಗ್ ರೂಮ್‌ಗೆ ಹೋಗಿ ಟಿ ಶರ್ಟ್ ಪಡೆದುಕೊಳ್ಳಲಿ ಸಾರ್ವಜನಿಕವಾಗಿ ಹೀಗೆ ಮಾಡಬಾರದು ಎಂದು ಹೇಳಿದರು.
ಸೋಲಿನ ನಂತರ ಬಾಬರ್ ಹೇಳಿದ್ದೇನು?
ಪಂದ್ಯದ ನಂತರ ಮಾತನಾಡಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ತಮ್ಮ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು ಎಂದು ಒಪ್ಪಿಕೊಂಡರು. ನಾವು ಸುಲಭವಾಗಿ 280-290 ರನ್ ಗಳಿಸಬಹುದಾಗಿತ್ತು, ಆದರೆ ಕೇವಲ 191 ರನ್ ಗಳಿಸಿದ್ದು ಸೋಲಿಗೆ ಕಾರಣ ಎಂದರು.
ನಾವು ಉತ್ತಮ ಆರಂಭ ಪಡೆದುಕೊಂಡೆವು, ನಾನು ಇಮಾಮ್ ಉಲ್ ಹಕ್ ನಡುವೆ ಉತ್ತಮ ಜೊತೆಯಾಟ ಇತ್ತು, ನಾನು ಮತ್ತು ರಿಜ್ವಾನ್ ಮಾಮೂಲಿನಂತೆ ಆಡಲು ಬಯಸಿದ್ದೆವು, ಆದರೆ ಮಧ್ಯಮ ಕ್ರಮಾಂಕ ದಿಢೀರ್ ಕುಸಿತ ಕಂಡಿತು, ಇನ್ನಿಂಗ್ಸ್ ಅನ್ನು ಸರಿಯಾಗಿ ಮುಗಿಸಲು ಆಗಲಿಲ್ಲ, 280-290 ರನ್ ಕಲೆಹಾಕುವ ಗುರಿ ಹೊಂದಿದ್ದೆವು, ಆದರೆ ಅದು ಆಗಲಿಲ್ಲ, ರೋಹಿತ್ ಶರ್ಮಾ ಅತ್ಯುತ್ತಮ ಇನ್ನಿಂಗ್ಸ್ ಆಡಿದರು ಎಂದು ಬಾಬರ್ ಹೇಳಿದರು.
ರೋಹಿತ್ ಶರ್ಮಾ ಹೇಳಿದ್ದೇನು?
ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಇದು 190 ಪಿಚ್ ಅಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನದ ಬ್ಯಾಟರ್‌ಗಳನ್ನು ಟೀಕಿಸಿದರು. ಇಂದು ಬೌಲರ್‌ಗಳು ನಮಗೆ ಪಂದ್ಯವನ್ನು ಗೆಲ್ಲಿಸಿದ್ದಾರೆ. ಇದು 190 ಪಿಚ್ ಎಂದು ನಾನು ಭಾವಿಸುವುದಿಲ್ಲ. ಒಂದು ಹಂತದಲ್ಲಿ ನಾವು 280 ಗುರಿ ಸಿಗಬಹುದು ಅಂದುಕೊಂಡಿದ್ದವೆ. ಅವರು ಆಡಿದ ರೀತಿ ಬಹಳಷ್ಟು ಹೇಳುತ್ತದೆ. ನಮ್ಮ ಪ್ರದರ್ಶನಕ್ಕೆ ನಾವೇ ಹೆಮ್ಮೆ ಪಡುತ್ತೇವೆ. 6 ಜನ ಉತ್ತಮ ಬೌಲರ್ ಗಳನ್ನು ನಾವು ಹೊಂದಿದ್ದೇವೆ, ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್ ಮಾಡಿದ್ದು ಅನುಕೂಲವಾಗಿದೆ ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications