Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs PAK Women's T20 World Cup: ಪಂದ್ಯದ ಸಮಯ, ನೇರಪ್ರಸಾರ, ಪ್ಲೇಯಿಂಗ್ ಇಲೆವೆನ್‌, ಪಿಚ್‌ ವರದಿಯ ಮಾಹಿತಿ

ಬರ್ಮಿಂಗ್‌ಹ್ಯಾಮ್‌: ಕ್ರಿಕೆಟ್ ಅಭಿಮಾನಿಗಳಿಗೆ ಭಾನುವಾರದ ರಸದೂಟ ಸಿಗಲಿದೆ. ಮಹಿಳಾ ಟಿ20 ವಿಶ್ವಕಪ್‌ನ ಮಹಾ ಕಾದಾಟದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಮಹಿಳಾ ಟಿ20 ವಿಶ್ವಕಪ್‌ನ 6ನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಗ್ರುಪ್‌ ಎ ನಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ. ಎರಡೂ ತಂಡಗಳ ನಡುವಣ ಹೈವೋಲ್ಟೇಜ್ ಫೈಟ್‌ದಲ್ಲಿ ಸ್ಥಿರ ಪ್ರದರ್ಶನ ನೀಡಿ ಗೆಲುವಿನ ಆರಂಭವನ್ನು ಮಾಡುವ ಕನಸನ್ನು ಹರ್ಮನ್ ಪ್ರೀತ್‌ ಪಡೆ ಕಾಣುತ್ತಿದೆ.

ಶನಿವಾರ ಪಾಕಿಸ್ತಾನದ ಅಭ್ಯಾಸದ ಸಮಯದಲ್ಲಿ ನಾಯಕಿ ಫಾತಿಮಾ ಸನಾ ಅವರ ಬಲಗಾಲಿನಲ್ಲಿ ಗಾಯವಾಗಿದೆ. ಗಾಯದ ನಂತರ ಅವರು ನೋವಿನಿಂದ ಬಳಲುತ್ತಿದ್ದರು. ಇವರು ಮೈದಾನದಿಂದ ಹೊರ ಬರಲು ಫಿಸಿಯೋ ಮತ್ತು ಸಹ ಆಟಗಾರರು ಸಹಾಯ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕಿ ಫಾತಿಮಾ ಸಾನಾ ಹೌದು ಗಾಯವಾಗಿತ್ತು. ಆದರೆ ಈಗ ನಾನು ಫಿಟ್ ಆಗಿದ್ದೇನೆ ಎಂದು ತಿಳಿಸಿದ್ದಾರೆ.

IND vs PAK Women s T20 World Cup

ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿಯರು ಭರ್ಜರಿ ಪ್ರದರ್ಶನ ನೀಡುವ ಇರಾದೆ ಹೊಂದಿದ್ದಾರೆ. ತಮ್ಮ ಮೇಲೆ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭ್ಯಾಸ ನಡೆಸಿವೆ. ಸ್ಮೃತಿ ಮಂಧಾನ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಲು ಸಜ್ಜಾಗಿದ್ದಾರೆ.

ಹೇಗಿರಲಿದೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್?

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್, ಭಾರತಿ ಫುಲ್ಮಾಲಿ, ಶ್ರೇಯಾಂಕ ಪಾಟೀಲ್, ರಾಧಾ ಯಾದವ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್.

ಪಾಕಿಸ್ತಾನ ತಂಡ ಯಾವೆಲ್ಲಾ ಆಟಗಾರ್ತಿಯರಿಗೆ ಅವಕಾಶ ನೀಡಬಹುದು?

ಫಾತಿಮಾ ಸನಾ (ನಾಯಕಿ), ಮುನೀಬಾ ಅಲಿ, ಸಿದ್ರಾ ಅಮೀನ್, ಅಲಿಯಾ ರಿಯಾಜ್, ನಿದಾ ದಾರ್, ಇರಾಮ್ ಜಾವೇದ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್, ಡಯಾನಾ ಬೇಗ್, ಉಮೈಮಾ ಸೊಹೈಲ್, ತುಬಾ ಹಸನ್.

ಬರ್ಮಿಂಗ್‌ಹ್ಯಾಮ್ ಪಿಚ್ ಯಾರಿಗೆ ಸಹಾಯ ಮಾಡುತ್ತದೆ?

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟರ್ ಹಾಗೂ ಬೌಲರ್‌ಗಳಿಬ್ಬರಿಗೂ ಸಮಾನ ನೆರವು ನೀಡುತ್ತದೆ. ಪಂದ್ಯದ ಆರಂಭಿಕ ಓವರ್‌ಗಳಲ್ಲಿ ಬ್ಯಾಟರ್‌ಗಳು ಸುಲಭವಾಗಿ ರನ್ ಗಳಿಸಬಹುದು. ಅಲ್ಲದೆ ವೇಗದ ಬೌಲರ್‌ಗಳಿಗೆ ಆರಂಭದಲ್ಲಿ ಚೆಂಡು ಸ್ವಲ್ಪ ಸ್ವಿಂಗ್ ಸಿಗುವ ಸಾಧ್ಯತೆ ಇದೆ. ಪಂದ್ಯ ಸಾಗಿದಂತೆ ಸ್ಪಿನ್ ಬೌಲರ್‌ಗಳು ಹಾಗೂ ಮಧ್ಯಮ ವೇಗದ ಬೌಲರ್‌ಗಳಿಗೆ ಸಹಾಯ ನೀಡುತ್ತಿದೆ.

ಭಾರತ ಹಾಗೂ ಪಾಕ್‌ ನಡುವಣ ಟಿ20 ಪಂದ್ಯವನ್ನು ನೋಡುವುದು ಎಲ್ಲಿ?

ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವನ್ನು ಭಾರತದಲ್ಲಿ ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ನೋಡಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಈ ಪಂದ್ಯವನ್ನು ಜಿಯೋ ಹಾಟ್‌ ಸ್ಟಾರ್ ಆಪ್‌ನಲ್ಲಿ ವೀಕ್ಷಿಸಬಹುದು.

ಮಹಿಳಾ ಟಿ20 ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯ ನಡೆಯುವ ಸಮಯ ಯಾವಾಗ?

10ನೇ ಆವೃತ್ತಿಯ ಟಿ20 ವಿಶ್ವಕಪ್‌ನ 6ನೇ ಪಂದ್ಯ ಸಂಜೆ 7ಕ್ಕೆ ಆರಂಭವಾಗಲಿದೆ (ಭಾರತೀಯ ಕಾಲಮಾನ), ಪಂದ್ಯಕ್ಕೂ ಅರ್ಧಗಂಟೆ ಮುನ್ನ ಟಾಸ್ ನಡೆಯಲಿದೆ.

Story first published: Sunday, June 14, 2026, 7:45 [IST]
Other articles published on Jun 14, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+