ಭಾರತ vs ಪಾಕಿಸ್ತಾನ ಪಂದ್ಯಕ್ಕಾಗಿ ಆಸ್ಪತ್ರೆ ಬೆಡ್‌ಗಳನ್ನು ಬುಕ್ ಮಾಡುತ್ತಿರುವ ಅಭಿಮಾನಿಗಳು!!
ಈ ಬಾರಿಯ ವಿಶ್ವಕಪ್ ಟೂರ್ನಿ ಭಾರತದಲ್ಲಿ ನಡೆಯಲಿದ್ದು ಈ ಟೂರ್ನಿಯಲ್ಲಿ ನಡೆಯುವ ಭಾರತ vs ಪಾಕಿಸ್ತಾನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಈ ಪಂದ್ಯವನ್ನು ವೀಕ್ಷಿಸಲು ಎಲ್ಲಿಲ್ಲದೆ ಬೇಡಿಕೆ ಸಹಜವಾಗಿಯೇ ಇದೆ. ಇದರ ಮಧ್ಯೆ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಈ ಪಂದ್ಯವನ್ನು ವೀಕ್ಷಿಸುವ ಸಲುವಾಗಿ ಅಭಿಮಾನಿಗಳು ಆಸ್ಪತ್ರೆಯ ಬೆಡ್‌ಗಳನ್ನು ಬುಕ್ ಮಾಡುತ್ತಿದ್ದಾರೆ!!
ಹೌದು, ನೀವು ಓದುತ್ತಿರುವುದು ಸರಿಯಾಗಿಯೇ ಇದೆ. ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಹೋಟೆಲ್ ರೂಮ್‌ಗಳನ್ನು ಬುಕ್ ಮಾಡುವ ಬದಲಿಗೆ ನಗರದ ಆಸ್ಪತ್ರೆಯ ಬೆಡ್‌ಗಳನ್ನು ಬುಕ್ ಮಾಡುತ್ತಿದ್ದಾರೆ. ಅಹ್ಮದಾಬಾದ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ವಿರುದ್ಧ ಈ ಪಂದ್ಯದಂದು ಹೋಟೆಲ್ ರೂಮ್‌ಗೆ ಭಾರೀ ಬೇಡಿಕೆಯಿರುವುದೇ ಕಾರಣ ಎಂದು ವರದಿಯಾಗಿದೆ.

ಅಕ್ಟೋಬರ್ 5ರಂದು ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಈ ಪಂದ್ಯದ ರಾತ್ರಿ ಅಹ್ಮದಾಬಾದ್‌ನ ಹೋಟೆಲ್‌ಗಳ ರೂಮ್‌ಗಳಿಗೆ ಭಾರೀ ಬೇಡಿಕೆಯಿದ್ದು 50,000 ರೂಪಾಯಿವರೆಗೆ ರೂಮ್ ದರ ಏರಿಕೆಯಾಗಿದೆ. ಇಷ್ಟು ದುಬಾರಿ ಮಟ್ಟಕ್ಕೆ ಹೋಟೆಲ್ ರೂಮ್‌ಗಳ ದರ ತಲುಪಿರುವ ಕಾರಣದಿಂದಾಗಿ ಕ್ರಿಕೆಟ್ ಅಭಿಮಾನಿಗಳು ಪರ್ಯಾಯ ಮಾರ್ಗವನ್ನು ಕಂಡಿಕೊಂಡಿದ್ದು ಆಸ್ಪತ್ರೆಗಳ ಬೆಡ್‌ಗಳನ್ನು ಬುಕ್ ಮಾಡುತ್ತಿದ್ದಾರೆ.
ಆಸ್ಪತ್ರೆಯ ಅಧಿಕಾರಿಗಳು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯುವ ದಿನ ಆಸ್ಪತ್ರೆಗಳಲ್ಲಿ ಒಂದು ಅಥವಾ ಎರಡು ರಾತ್ರಿಗಳ ಕಾಲ ಉಳಿದುಕೊಳ್ಳಲು ಸಾಧ್ಯವಾಗುವಂತಾ ಸೌಲಭ್ಯಗಳ ಬಗ್ಗೆ ವಿಚಾರಣೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಗಳಲ್ಲಿ ಕಡಿಮೆ ದರವಿದ್ದು ಆಹಾರವನ್ನು ಕೂಡ ಈ ಪ್ಯಾಕೇಜ್ ಹೊಂದಿದೆ. ಅಲ್ಲದೆ ರೋಗಿಯ ಜೊತೆಗೆ ಮತ್ತೋರ್ವ ವ್ಯಕ್ತಿಗೂ ಇರಲು ಅವಕಾಶ ದೊರೆಯುತ್ತದೆ ಎನ್ನುವುದು ಈ ರೀತಿಯಾಗಿ ವಿಚಾರಣೆ ನಡೆಸುತ್ತಿರುವ ಅಭಿಮಾನಿಗಳ ಲೆಕ್ಕಾಚಾರ.
"ಆಸ್ಪತ್ರೆಯಾಗಿರುವ ಕಾರಣದಿಂದಾಗಿ ಫುಲ್ ಬಾಡಿ ಚೆಕಪ್‌ಗಾಗಿ ವಿಚಾರಿಸುತ್ತಿದ್ದು ರಾತ್ರಿಯಿಡೀ ಉಳಿದುಕೊಳ್ಳಲು ಬೇಡಿಕೆಗಳು ಬರುತ್ತಿವೆ. ಆಗ ಅವರ ಎರಡು ಉದ್ದೇಶಗಳು ಈಡೇರಿದಂತಾಗುತ್ತದೆ ಲಾಡ್ಜ್‌ಗಳಲ್ಲಿ ಹೋಟೆಲ್‌ಗಾಗಿ ದುಬಾರಿ ವೆಚ್ಚ ಉಳಿಯುವ ಜೊತೆಗೆ ಹೆಲ್ತ್ ಚೆಕಪ್ ಕೂಡ ಪೂರ್ಣವಾಗುತ್ತದೆ" ಎಂದು ಸ್ಥಳೀಯ ಆಸ್ಪತ್ರೆಯ ವೈದ್ಯ ಡಾ. ಪರಸ್ ಶಾ ಹೇಳಿಕೆಯನ್ನು ಉಲ್ಲೇಖಿಸಿ 'ಸ್ಪೋರ್ಟ್ಸ್ ಟೈಗರ್' ವರದಿ ಮಾಡಿದೆ
"ಸಂಪೂರ್ಣ ಬಾಡಿ ಚೆಕಪ್ ಪ್ಯಾಕೇಜ್ ಇರುವ ಕಾರಣ ಅಕ್ಟೋಬರ್ 15ರ ಆಸುಪಾಸಿನಲ್ಲಿ 20-48 ಗಂಟೆಗಳ ಉಳಿದುಕೊಳ್ಳುವ ವಿಚಾರಣೆಗಳು ಹೆಚ್ಚಾಗಿ ಬರುತ್ತಿದೆ. ಇದು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿರುವ ಕಾರಣದಿಂದಾಗಿಯೇ ಈ ಬಗ್ಗೆ ವಿಚಾರಿಸುತ್ತಿದ್ದಾರೆ. ಹೀಗಾಗಿ ನಾವು ಬೇರೆ ಹೆಲ್ತ್ ಪ್ಯಾಕೇಜ್‌ಗಳನ್ನು ಹಪರತರುವ ಬಗ್ಗೆ ಯಫಚಿಸುತ್ತಿದ್ದೇವೆ" ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ನಿಕಿಲ್ ಲಾಲಾ ತಿಳಿಸಿದ್ದಾರೆ.
2011ರ ಬಳಿಕ ಭಾರತ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯನ್ನು ಆಯೋಜನೆ ಮಾಡುತ್ತಿದೆ. 2011ರಲ್ಲಿ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಮೊಹಾಲಿಯಲ್ಲಿ ಎದುರಿಸಿ ಗೆಲುವು ಸಾಧಿಸಿದ್ದ ಭಾರತ ಬಳಿಕ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಆಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಇನ್ನು ಭಾರತ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಈವರೆಗೆ ಸೋಲು ಅನುಭವಿಸಿದ ದಾಖಲೆಯಿಲ್ಲ.
ಇನ್ನು ಪಾಕಿಸ್ತಾನ ತಂಡವನ್ನು 2016ರ ಬಳಿಕ ಮೊದಲ ಬಾರಿಗೆ ಭಾರತದಲ್ಲಿ ಟೀಮ್ ಇಂಡಿಯಾ ಎದುರಿಸುತ್ತಿದೆ. ವಿಶ್ವಕಪ್‌ನಂಥಾ ಟೂರ್ನಿಯಲ್ಲಿ ಈ ಎರಡು ತಮಡಗಳು ಮುಖಾಮುಖಿಯಾಗುವ ಇಂಥಾ ಅಪರೂಪದ ಪಂದ್ಯವನ್ನು ನೇರವಾಗಿ ನೋಡಲು ಬಯಸುವ ಅಭಿಮಾನಿಗಳಿಗೆ ಈ ಅವಕಾಶ ಕಳೆದುಕೊಳ್ಳಲು ಕ್ರಿಕೆಟ್ ಅಭಿಮಾನಿಗಳಿಗೆ ಇಷ್ಟವಿಲ್ಲ. ಹೀಗಾಗಿ ಈ ಪಂದ್ಯದ ಮೇಲಿನ ನಿರೀಕ್ಷೆ ಹೆಚ್ಚಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications