
ಆರಂಭದಲ್ಲೇ ಎಡವಿದ ನಾಯಕ ಕೆ.ಎಲ್ ರಾಹುಲ್
ಟೀಂ ಇಂಡಿಯಾಕ್ಕೆ ಆಧಾರವಾಗಬೇಕಿದ್ದ ನಾಯಕ ಕೆ.ಎಲ್ ರಾಹುಲ್ ಬಹುಬೇಗನೆ ವಿಕೆಟ್ ಒಪ್ಪಿಸುವ ಮೂಲಕ ಟೀಂ ಇಂಡಿಯಾಗೆ ಉತ್ತಮ ಆರಂಭ ನೀಡುವಲ್ಲಿ ವಿಫಲಗೊಂಡ್ರು. 17 ಎಸೆತಗಳನ್ನ ಎದುರಿಸಿದ ರಾಹುಲ್ 12 ರನ್‌ಗಳಿಸಿದ್ದಾಗ ಏಡನ್ ಮಕ್ರಾಮ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ರು.

ಎರಡನೇ ವಿಕೆಟ್‌ಗೆ ಜೊತೆಯಾದ ಕೊಹ್ಲಿ-ಧವನ್
ಮೊದಲ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾಗೆ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಆಧಾರವಾಗುವ ಮೂಲಕ ತಂಡವನ್ನ ಗೆಲುವಿನ ದಡದತ್ತ ಕೊಂಡೊಯ್ಯುವ ಭರವಸೆ ಮೂಡಿಸಿದ್ರು. ಒಂದೆಡೆ ಕಂಬ್ಯಾಕ್ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ ಶಿಖರ್ ಧವನ್ 79 ರನ್‌ಗಳಿಸಿದ್ದ ಕೇಶವ್ ಮಹಾರಾಜ ಸ್ಪಿನ್ ಅರಿಯದೆ ಬೌಲ್ಡ್ ಆದ್ರು.
ಇದ್ರ ಬೆನ್ನಲ್ಲೇ ಮಾಜಿ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 63ನೇ ಅರ್ಧಶತಕ ದಾಖಲಿಸಿದ ಬೆನ್ನಲ್ಲೇ 51ರನ್‌ಗೆ ಶಮ್ಸಿಗೆ ವಿಕೆಟ್ ಒಪ್ಪಿಸಿದ್ರು.

ತಂಡಕ್ಕೆ ಆಧಾರವಾಗಲಿಲ್ಲ ಮಧ್ಯಮ ಕ್ರಮಾಂಕ
ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (16), ಶ್ರೇಯಸ್ ಅಯ್ಯರ್ (17), ವೆಂಕಟೇಶ್ ಅಯ್ಯರ್ (2) ರನ್ ದಾಖಲಿಸುವ ಮೂಲಕ ಭಾರತದ ಮಧ್ಯಮ ಕ್ರಮಾಂಕವು ಕುಸಿಯಲ್ಪಟ್ಟಿತು. ಕೊನೆಯಲ್ಲಿ ಶಾರ್ದೂಲ್ ಠಾಕೂರ್ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದ್ರೂ ಸಹ ಅದಾಗಲೇ ಸಮಯ ಮೀರಿತ್ತು. ಪರಿಣಾಮ ಭಾರತ 8 ವಿಕೆಟ್ ನಷ್ಟಕ್ಕೆ 265 ರನ್‌ಗಳಿಸಲಷ್ಟೇ ಸಾಧ್ಯವಾಯಿತು.

ಆರಂಭದಲ್ಲೇ ದ.ಆಫ್ರಿಕಾ ಓಪನರ್ ಜನ್ನೆಮನ್ ಮಲನ್ ಔಟ್
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಪವರ್‌ಪ್ಲೇ ಓವರ್‌ಗಳಲ್ಲೇ ಓಪನರ್ ವಿಕೆಟ್ ಕಳೆದಕೊಂಡು ಆಘಾತ ಅನುಭವಿಸಿತು. ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ 6ರನ್ ಗಳಿಸಿದ್ದ ಜನ್ನೆಮನ್ ಮಲನ್ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.

ಅಶ್ವಿನ್‌ಗೆ ಕ್ಲೀನ್ ಬೌಲ್ಡ್ ಆದ ಕ್ವಿಂಟನ್ ಡಿಕಾಕ್
ಇದಾದ ಬೆನ್ನಲ್ಲಿ ಎರಡನೇ ವಿಕೆಟ್‌ಗೆ ಕ್ವಿಂಟನ್ ಡಿಕಾಕ್ ಮತ್ತು ನಾಯಕ ಟೆಂಬಾ ಬವುಮಾ ಉತ್ತಮ ಜೊತೆಯಾಟದ ಭರವಸೆ ಮೂಡಿಸಿದ್ರು. ಟೆಸ್ಟ್ ಸರಣಿಯಲ್ಲಿ ಅರ್ಧದಲ್ಲೇ ನಿವೃತ್ತಿ ಘೋಷಿಸಿ ರಜೆ ಹೋಗಿದ್ದ ಕ್ವಿಂಟನ್ ಡಿಕಾಕ್ ಕಂಬ್ಯಾಕ್ ಪಂದ್ಯವು 27 ರನ್‌ಗೆ ಮುಕ್ತಾಯಗೊಂಡಿತು. ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸ್ಪಿನ್ ಮರ್ಮವನ್ನ ಅರಿಯದೇ ಡಿಕಾಕ್ ಕ್ಲೀನ್ ಬೌಲ್ಡ್ ಆದ್ರು.
58 ರನ್‌ಗೆ ಎರಡು ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾಗೆ ಇದ್ರ ಬೆನ್ನಲ್ಲೇ ಮತ್ತೊಂದು ಆಘಾತ ಎದುರಾಯಿತು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಏಡನ್ ಮಕ್ರಾಮ್ ಆತುರದ ರನ್ ಕದಿಯಲು ಹೋಗಿ 4 ರನ್‌ಗಳಿಸಿದ್ದಾಗ ರನೌಟ್‌ಗೆ ಬಲಿಯಾದ್ರು. ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಚುರುಕು ಫೀಲ್ಡಿಂಗ್‌ಗೆ ಏಡನ್ ಮಕ್ರಾಮ್ ರನೌಟ್ ಆದ್ರು

ಶತಕ ಸಿಡಿಸಿದ ಟೆಂಬಾ ಬವುಮಾ ಮತ್ತು ರಾಸ್ಸಿ
ಮೂರು ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಪರ ಟೆಂಬಾ ಬವುಮಾ ಮತ್ತು ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ನಾಲ್ಕನೇ ವಿಕೆಟ್‌ಗೆ ದ್ವಿಶಕದ ಜೊತೆಯಾಟದ ಮೂಲಕ ತಂಡಕ್ಕೆ ಆಧಾರವಾದ್ರು.
ಏಕದಿನ ಕ್ರಿಕೆಟ್‌ನಲ್ಲಿ 2ನೇ ಶತಕ ಸಿಡಿಸಿದ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ 134.38 ಸ್ಟ್ರೈಕ್‌ರೇಟ್ ಬ್ಯಾಟ್ ಬೀಸುವ ಮೂಲಕ 96 ಎಸೆತಗಳಲ್ಲಿ ಅಜೇಯ 129 ರನ್ ಕಲೆಹಾಕುವ ಮೂಲಕ
ಮಿಂಚಿನ ಆಟವಾಡಿದ್ರು. ರಾಸ್ಸಿ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್‌ಗಳಿದ್ದವು.
ಇನ್ನು ತಾಳ್ಮೆಯ ಆಟವಾಡಿದ ನಾಯಕ ಟೆಂಬಾ ಬವುಮಾ 143 ಎಸೆತಗಳಲ್ಲಿ 110 ರನ್ ಕಲೆಹಾಕುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಶತಕ ಸಿಡಿಸಿ ತಂಡದ ಮೊತ್ತವನ್ನ 300ರ ಗಡಿ ಸಮೀಪಿಸಲು ನೆರವಾದ್ರು. 110 ರನ್‌ಗಳಿಸಿದ್ದಾಗ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ್ರು. ಈ ಮೂಲಕ ಭಾರತ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆಯ 204ರನ್‌ಗಳ ಜೊತೆಯಾಟವಾಡಿದ ಟೆಂಬಾ ಬವುಮಾ ಹಾಗೂ ರಾಸ್ಸಿ ಜೋಡಿ ಬೇರ್ಪಟ್ಟಿತು.
ಕೊನೆಯಲ್ಲಿ ವೇಗವಾಗಿ ರನ್ ಕಲೆಹಾಕಿದ ರಾಸ್ಸಿ ಅಜೇಯ 129 ಸಿಡಿಸಿ ತಂಡದ ಆ್ಯಂಕರ್ ಇನ್ನಿಂಗ್ಸ್ ಆಡಿದ್ರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಕಲೆಹಾಕಿತು. ಭಾರತ ಪರ ಜಸ್ಪ್ರೀತ್ ಬುಮ್ರಾ 2 ವಿಕೆಟ್, ರವಿಚಂದ್ರನ್ ಅಶ್ವಿನ್ 1 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್, ಯುಜವೇಂದ್ರ ಚಹಾಲ್ ಹಾಗೂ ಶಾರ್ದೂಲ್ ಠಾಕೂರ್ ವಿಕೆಟ್ ಇಲ್ಲದೆ ನಿರಾಸೆಯಿಂದ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ್ರು.
ದಕ್ಷಿಣ ಆಫ್ರಿಕಾದ 297 ಗುರಿ ಬೆನ್ನತ್ತುವಲ್ಲಿ ವಿಫಲಗೊಂಡ ಭಾರತ ಪರ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಬಿಟ್ಟರೆ ಯಾವುದೇ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡದೆ ಹಿಂದೆ ಬಿದ್ದರು. ಕೊನೆಯಲ್ಲಿ ಶಾರ್ದೂಲ್ ಠಾಕೂರ್ ರನ್‌ಗಳಿಸಿದ್ರೂ ಸಹ ಭಾರತವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.


Click it and Unblock the Notifications
