ಭಾರತ vs ದ.ಆಫ್ರಿಕಾ: ಪ್ರತಿ 10 ಓವರ್‌ಗಳಿಗೆ ಒಮ್ಮೆ ಡ್ರಿಂಕ್ಸ್ ಬ್ರೇಕ್, ಕಾರಣ ಏನು?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಅಂತರಾಷ್ಟ್ರೀಯ ಸರಣಿ ಗುರುವಾರದಿಂದ (ಜೂ.09) ಆರಂಭವಾಗಲಿದೆ. ಈ ಸರಣಿಗಾಗಿ ಉಭಯ ತಂಡಗಳು ಸಾಕಷ್ಟು ತಯಾರಿ ನಡೆಸಿದ್ದು, ಮೊದಲ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಆತಿಥ್ಯ ವಹಿಸಿದೆ.
ರಾತ್ರಿ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಸ್ಟಾರ್ ಆಟಗಾರರು ಲಭ್ಯವಿಲ್ಲ. ಸರಣಿ ಆರಂಭಕ್ಕೂ ಮುನ್ನ ನಾಯಕ ಕೆಎಲ್ ರಾಹುಲ್ ಹಾಗೂ ಸ್ಟಾರ್ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಗಾಯಗೊಂಡು ತಂಡವನ್ನು ತೊರೆದಿದ್ದರು. ರಿಷಬ್ ಪಂತ್ ತಂಡದ ನಾಯಕತ್ವವನ್ನು ತಾತ್ಕಾಲಿಕವಾಗಿ ವಹಿಸಿಕೊಂಡರು.

ದೆಹಲಿಯಲ್ಲಿ ಬಿಸಿಲಿನ ದಗೆ, ಆಟಗಾರರ ಪರದಾಟ
ರಾಜಧಾನಿ ದೆಹಲಿಯಲ್ಲಿ ಬಿಸಿಲಿನ ದಗೆಯಿಂದಾಗಿ ಜನರ ಪರದಾಟದ ಜೊತೆಗೆ, ಮೈದಾನದಲ್ಲಿ ಆಟಗಾರರು ಸವಾಲನ್ನ ಎದುರಿಸಬೇಕಾಗಿದೆ. ಏಕೆಂದರೆ ಇಲ್ಲಿನ ವಾತಾವರಣವೇ ಅಂತಹದ್ದು. ವಿಪರೀತ ಚಳಿ, ಉಷ್ಣಾಂಶ ಜೊತೆಗೆ ಮಳೆಯನ್ನು ಸಹ ಕಾಣಬಹುದು.
ಪ್ರಸ್ತುತ ದೆಹಲಿಯಲ್ಲಿ ಬೆಳಿಗ್ಗೆ ತಾಪಮಾನವು 36 ರಿಂದ 38 ಡಿಗ್ರಿಗಳವರೆಗೆ ಇರುತ್ತದೆ. ಮಧ್ಯಾಹ್ನ ಹೆಚ್ಚು ತೀವ್ರವಾಗುತ್ತಿದೆ. ಮಧ್ಯಾಹ್ನ 3ರಿಂದ 4ರ ನಡುವೆ ಗರಿಷ್ಠ ತಾಪಮಾನ 43ರಿಂದ 44 ಡಿಗ್ರಿ ತಲುಪುತ್ತಿದೆ. ಕೆಲವು ದಿನಗಳ ಕಾಲ ಇದೇ ರೀತಿಯ ವಾತಾವರಣ ಕಂಡುಬರುತ್ತಿದ್ದು, ಪಶ್ಚಿಮದಿಂದ ಬರುವ ಶಾಖದ ಅಲೆಗಳಿಂದ ದೆಹಲಿಯ ಜನರು ಹೆಚ್ಚು ತೊಂದರೆಗಳನ್ನು ಎದುರಿಸುತ್ತಿದ್ದಾರೆ.
IND vs SA: ಮೊದಲ ಟಿ20 ಪಂದ್ಯದ ಡ್ರೀಮ್ ಟೀಂ ಮತ್ತು ಸಂಭಾವ್ಯ ಆಡುವ 11ರ ಬಳಗ

ಆಟಗಾರರಿಗೆ ನೆರವಾಗಲು ಬಿಸಿಸಿಐ ನಿಯಮ ಬದಲಾವಣೆ ನಿರ್ಧಾರ
ದೆಹಲಿಯಲ್ಲಿನ ಬಿಸಿಲಿನ ದಗೆ ಹತ್ತಿಕ್ಕಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಬಿಸಿಯ ಹೊಡೆತಕ್ಕೆ ಸರ್ವಾನುಮತದಿಂದ ನಿಯಮವನ್ನ ಬದಲಿಸಿದೆ.
ಮೊದಲ ಟಿ20 ಪಂದ್ಯದಲ್ಲಿ ಪ್ರತಿ 10 ಓವರ್‌ಗಳಿಗೆ ಒಮ್ಮೆ ಡ್ರಿಂಕ್ಸ್ ಬ್ರೇಕ್ ತೆಗೆದುಕೊಳ್ಳಲಾಗುತ್ತದೆ. ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾದ ಮನವಿ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ತಮ್ಮ ಪ್ರಸ್ತಾವನೆಗಳ ಬಗ್ಗೆ ಬಿಸಿಸಿಐ ಸಕಾರಾತ್ಮಕ ನಿರ್ಧಾರ ಕೈಗೊಂಡಿದ್ದು, ಪ್ರತಿ 10 ಓವರ್‌ಗಳಿಗೆ ಡ್ರಿಂಕ್ಸ್ ಬ್ರೇಕ್ ನೀಡಲು ಒಪ್ಪಿಗೆ ನೀಡಿದೆ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ ತಿಳಿಸಿದೆ.
Ind vs SA: ಟಿ20 ನಾಯಕನಾಗಿ ಎಂಎಸ್ ಧೋನಿ, ವಿರಾಟ್ ಕೊಹ್ಲಿಯನ್ನು ಮೀರಿಸಲಿದ್ದಾರೆ ರಿಷಭ್ ಪಂತ್

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ರೀತಿಯ ನಿಯಮವಿಲ್ಲ!
ಸಾಮಾನ್ಯವಾಗಿ ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಡ್ರಿಂಕ್ಸ್ ಬ್ರೇಕ್ ಇರುವುದಿಲ್ಲ. ಎರಡೂ ತಂಡಗಳು ಏಕಕಾಲದಲ್ಲಿ 20 ಓವರ್‌ಗಳನ್ನು ಆಡುತ್ತವೆ. ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳು ಇದಕ್ಕೆ ಹೊರತಾಗಿವೆ. ಪ್ರತಿ ಎಂಟು ಓವರ್‌ಗಳಿಗೆ ಒಂದು ಟೈಮ್ ಔಟ್ ಇರುತ್ತದೆ. ಇದು ಐಪಿಎಲ್ ನಿರ್ವಹಣಾ ಸಮಿತಿಯ ಸ್ವಂತ ನಿರ್ಧಾರವಾಗಿತ್ತು. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅನ್ವಯಿಸುವುದಿಲ್ಲ. ದೆಹಲಿಯ ಹವಾಮಾನ ವೈಪರೀತ್ಯವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ನಿಯಮಗಳನ್ನು ಬದಲಾಯಿಸಿದೆ.

ದೆಹಲಿಗೆ ಮಾತ್ರ ಈ ನಿಯಮ ಸೀಮಿತವೇ ತಿಳಿದಿಲ್ಲ!
10 ಓವರ್‌ಗಳಿಗೆ ಒಮ್ಮೆ ಡ್ರಿಂಕ್ಸ್ ಬ್ರೇಕ್ ನಿಯಮವು ಕೇವಲ ಒಂದು ಪಂದ್ಯಕ್ಕೆ ಮಾತ್ರ ಸೀಮಿತವಾಗಿದೆಯೇ? ಅಥವಾ .. ಉಳಿದ ನಾಲ್ಕು ಪಂದ್ಯಗಳಿಗೂ ಈ ನಿಯಮ ಮುಂದುವರಿಯುವುದೇ? ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ. ಬಿಸಿಸಿಐ ಅಧಿಕಾರಿಗಳು ಸ್ಥಳೀಯ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾಲಕಾಲಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ತೋರುತ್ತದೆ.
ಎರಡನೇ ಪಂದ್ಯ ಒಡಿಶಾದ ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮೂರನೇ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದೆ. ನಾಲ್ಕನೇ ಪಂದ್ಯ ರಾಜ್‌ಕೋಟ್‌ನಲ್ಲಿ ಮತ್ತು ಐದನೇ ಪಂದ್ಯ ಬೆಂಗಳೂರಿಗೆ ನಿಗದಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications