ಭಾರತ 20 ಓವರ್ಗಳಲ್ಲಿ 6 ವಿಕೆಟ್ಗೆ 147 ರನ್
ದೀಪ್ತಿ ಶರ್ಮಾ ಮತ್ತು ಅಮನ್ಜೋತ್ ಕೌರ್ ಆರನೇ ವಿಕೆಟ್ಗೆ ಪ್ರಮುಖ ಅರ್ಧಶತಕದ ಜೊತೆಯಾಟದ ಸಹಾಯದಿಂದ ಭಾರತ ಮಹಿಳಾ ತಂಡವು ತಮ್ಮ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 147 ರನ್ ಗಳಿಸಿದರು. ನಂತರ ಬೌಲಿಂಗ್ನಲ್ಲಿಯೂ ಮಿಂಚಿದ ದೀಪ್ತಿ ಶರ್ಮಾ 30 ರನ್ಗೆ 3 ವಿಕೆಟ್ ಪಡೆದು, ದಕ್ಷಿಣ ಆಫ್ರಿಕಾ ಮಹಿಳಾ ತಂಡ 9 ವಿಕೆಟ್ಗೆ 120 ರನ್ ಗಳಿಸಲಷ್ಟೇ ಶಕ್ತವಾಯಿತು ಮತ್ತು 27 ರನ್ಗಳ ಸೋಲು ಕಂಡಿತು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡ ಪವರ್ಪ್ಲೇನಲ್ಲಿ 7 ರನ್ ಗಳಿಸಿದ್ದ ಹಂಗಾಮಿ ನಾಯಕಿ ಸ್ಮೃತಿ ಮಂಧಾನ ವಿಕೆಟ್ ಪಡೆದು ಭಾರತವನ್ನು 29 ರನ್ 1 ನಲ್ಲಿ ಇರಿಸಿದರು. ನಂತರ ಬಂದ ಹರ್ಲೀನ್ ಡಿಯೋಲ್ 8 ರನ್ ಗಳಿಸಿ ಔಟಾದರು.
ದೀಪ್ತಿ ಶರ್ಮಾ 33 ರನ್ ಹಾಗೂ 30 ರನ್ಗೆ 3 ವಿಕೆಟ್
ಆದರೆ, ಆರಂಭಿಕ ಆಟಗಾರ್ತಿ ಯಾಸ್ತಿಕಾ ಭಾಟಿಯಾ 34 ಎಸೆತಗಳಲ್ಲಿ 35 ರನ್ ಗಳಿಸಿ ಭಾರತ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸಿ ಔಟಾದರು. 12ನೇ ಓವರ್ನಲ್ಲಿ ಭಾರತವು 69 ರನ್ಗೆ 5 ವಿಕೆಟ್ ಕಳೆದುಕೊಂಡು ತತ್ತರಿಸುವಂತೆ ಮಾಡಿತು.
ಆಗ ದೀಪ್ತಿ ಶರ್ಮಾ (33) ಮತ್ತು ಅಮನ್ಜೋತ್ ಕೌರ್ (ಅಜೇಯ 41) ನಡುವಿನ ಆರನೇ ವಿಕೆಟ್ಗೆ ನಿರ್ಣಾಯಕ 76 ರನ್ಗಳ ಜೊತೆಯಾಟದ ಸಹಾಯದಿಂದ ಭಾರತ ತಂಡ ಮತ್ತೆ ಲಯಕ್ಕೆ ಮರಳಿತು ಮತ್ತು ಭಾರತ ಮೂರಂಕಿ ಮೊತ್ತ ದಾಟಲು ನೆರವಾದರು. ಅಂತಿಮವಾಗಿ ಭಾರತವು 6 ವಿಕೆಟ್ಗೆ 147 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ತ್ರಿಕೋನ ಸ್ಪರ್ಧೆಯಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ ಭಾರತ
ಗೆಲುವಿಗಾಗಿ 148 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಒಂದರ ಹಿಂದೆ ಒಂದು ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಭಾರತವು ಅಂತಿಮ ಎರಡು ಓವರ್ಗಳಲ್ಲಿ ಮೂರು ತ್ವರಿತ ವಿಕೆಟ್ಗಳನ್ನು ಪಡೆಯುವುದರೊಂದಿಗೆ 27 ರನ್ಗಳ ಗೆಲುವನ್ನು ಚಿತಪಡಿಸಿತು ಮತ್ತು ತ್ರಿಕೋನ ಸ್ಪರ್ಧೆಯಲ್ಲಿ ಆರಂಭಿಕ ಮುನ್ನಡೆ ಸಾಧಿಸಿತು.
ಫೆಬ್ರವರಿ 10ರಿಂದ 26 ರವರೆಗೆ ಕೇಪ್ ಟೌನ್, ಪಾರ್ಲ್ ಮತ್ತು ಗ್ಕೆಬರ್ಹಾದಲ್ಲಿ ನಡೆಯುವ ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಆತಿಥ್ಯದಲ್ಲಿ ತಮ್ಮ ಪ್ರಯಾಣವನ್ನು ಮುಂದುವರೆಸುವ ಮೂಲಕ ದಕ್ಷಿಣ ಆಫ್ರಿಕಾವು ಜನವರಿ 21ರ ಶನಿವಾರದಂದು ವೆಸ್ಟ್ ಇಂಡೀಸ್ ತಂಡವನ್ನು ಇದೇ ಮೈದಾನದಲ್ಲಿ ಎದುರಿಸಲಿದೆ.