IND vs SA: ಕೇವಲ 3 ಪಂದ್ಯಗಳ ನಂತರ 2016ರ ವಿಶ್ವಕಪ್‌ಗೆ ಆಯ್ಕೆ ಮಾಡಿದ ಧೋನಿಯನ್ನು ಸ್ಮರಿಸಿದ ಹಾರ್ದಿಕ್

ಟೀಂ ಇಂಡಿಯಾ ಆಲ್‌ರೌಂಡರ್ ಮತ್ತು ಐಪಿಎಲ್ 2022 ವಿಜೇತ ನಾಯಕ ಹಾರ್ದಿಕ್ ಪಾಂಡ್ಯ ಅವರು ಗುರುವಾರ (ಜೂನ್ 9) ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಎದುರಿಸುವ ಸಲುವಾಗಿ ಮೆನ್-ಇನ್-ಬ್ಲೂ ತಂಡವನ್ನು ಸೇರಿಕೊಂಡಿದ್ದಾರೆ.
ಟೀಮ್ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ ಇಲ್ಲಿಯವರೆಗೆ 63 ಏಕದಿನ ಮತ್ತು 54 ಟಿ20 ಪಂದ್ಯಗಳನ್ನು ಆಡಿದ್ದಾರೆ. ಹಾರ್ದಿಕ್ ಪಾಂಡ್ಯ ಸೋಮವಾರ (ಜೂನ್ 6) ಮೊದಲ ಅಭ್ಯಾಸ ಅವಧಿಯನ್ನು ತಪ್ಪಿಸಿಕೊಂಡಿದ್ದರು. ಆದರೆ ಮಂಗಳವಾರ (ಜೂನ್ 7) ತಂಡವನ್ನು ಕೂಡಿಕೊಂಡು ಅಭ್ಯಾಸವನ್ನು ಪುನರಾರಂಭಿಸುವ ನಿರೀಕ್ಷೆಯಿದೆ.
ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರಿಂದ ಪಡೆದ ಬೆಂಬಲವನ್ನು ಹಾರ್ದಿಕ್ ಪಾಂಡ್ಯ ಸ್ಮರಿಸಿಕೊಂಡಿದ್ದಾರೆ. ಧೋನಿ ನಾಯಕತ್ವದಲ್ಲಿ ಆಡಿರುವುದು ಅದೃಷ್ಟ ಮತ್ತು ಆಶೀರ್ವಾದ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ವಿಶ್ವಕಪ್ ತಂಡಕ್ಕೆ ಆಯ್ಕೆಗೊಂಡಾಗ ರೋಮಾಂಚನಗೊಂಡಿದ್ದೆ
SGTV ಪಾಡ್‌ಕ್ಯಾಸ್ಟ್‌ನೊಂದಿಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ, "ತಾವು 2016ರಲ್ಲಿ ಆಡಿದ ತಮ್ಮ 3ನೇ ಅಂತಾರಾಷ್ಟ್ರೀಯ ಪಂದ್ಯವನ್ನು ನೆನಪಿಸಿಕೊಳ್ಳುತ್ತೇನೆ. ಭಾರತ ತಂಡದ ನಾಯಕ ಎಂಎಸ್ ಧೋನಿ ಅವರು ತಮ್ಮನ್ನು ವಿಶ್ವಕಪ್ ತಂಡದಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಸುದ್ದಿಯನ್ನು ತಿಳಿಸಿದಾಗ ರೋಮಾಂಚನಗೊಂಡಿದ್ದೆ. ನಾನು ಭಾರತ ತಂಡಕ್ಕೆ ಸೇರಿದಾಗ, ಸುರೇಶ್ ರೈನಾ, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಆಶಿಶ್ ನೆಹ್ರಾ ಹೀಗೆ ಹಲವು ಆಟಗಾರರು ನಾನು ಭಾರತಕ್ಕಾಗಿ ಆಡುವ ಮೊದಲೇ ಅವರು ಸ್ಟಾರ್ ಆಗಿದ್ದರು. ನಾನು ಅವರ ಜೊತೆ ಆಡುತ್ತಿರುವುದು ದೊಡ್ಡ ವಿಷಯವಾಗಿತ್ತು," ಎಂದು ಹೇಳಿದರು.

ಮಹಿ ಭಾಯ್ ನನ್ನ ಮೇಲೆ ಹೆಚ್ಚಿನ ನಂಬಿಕೆಯನ್ನು ತೋರಿಸಿದರು
"ನಿಸ್ಸಂಶಯವಾಗಿ ನಾನು ನನ್ನ ಮೊದಲ ಓವರ್‌ನಲ್ಲಿ 21 ರನ್‌ಗಳನ್ನು ನೀಡಿದ ಮೊದಲ ಕ್ರಿಕೆಟಿಗ ಎಂದು ನಾನು ಭಾವಿಸುತ್ತೇನೆ. ಇದು ನನ್ನ ಕೊನೆಯ ಓವರ್ ಆಗಿರುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸಿದೆ. ಆದರೆ ಎಂಎಸ್ ಧೋನಿ ನಾಯಕತ್ವದಲ್ಲಿ ಆಡಲು ನಾನು ತುಂಬಾ ಆಶೀರ್ವಾದ ಮತ್ತು ಅದೃಷ್ಟಶಾಲಿಯಾಗಿದ್ದೆ. ಮಹಿ ಭಾಯ್ ಅವರು ನನ್ನ ಮೇಲೆ ಹೆಚ್ಚಿನ ನಂಬಿಕೆಯನ್ನು ತೋರಿಸಿದರು. ಆಗ ಅವರು ನೀಡಿದ ಬೆಂಬಲದಿಂದ ನಾನು ಇಂದು ಇಲ್ಲಿಗೆ ಬಂದು ತಲುಪಿದ್ದೇನೆ," ಎಂದು ನೆನಪಿಸಿಕೊಂಡರು.
2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ, ಹಾರ್ದಿಕ್ ಪಾಂಡ್ಯ ತಮ್ಮ ಮೊದಲ ಓವರ್‌ನಲ್ಲಿ 21 ರನ್ ನೀಡಿದ್ದರು. ಹೊಸಬರಿಗೆ ಮತ್ತೊಂದು ಅವಕಾಶ ನೀಡಲು ಹಿಂಜರಿಯದ ಯಾವುದೇ ನಾಯಕನಂತೆ, ಎಂಎಸ್ ಧೋನಿ ಅವರು ಹಾರ್ದಿಕ್ ಪಾಂಡ್ಯ ಮೇಲೆ ವಿಶ್ವಾಸವನ್ನು ತೋರಿಸಿದರು. ನಂತರದ ಮೂರು ಓವರ್‌ಗಳಲ್ಲಿ 2/37 ರೊಂದಿಗೆ ಹಾರ್ದಿಕ್ ತಮ್ಮ ಕೋಟಾ ಪೂರ್ಣಗೊಳಿಸಿ ನಂಬಿಕೆ ಉಳಿಸಿಕೊಂಡರು.

ನೀವು ವಿಶ್ವಕಪ್ ತಂಡದಲ್ಲಿ ಆಡುತ್ತೀರಿ ಎಂದ ಧೋನಿ
ನನ್ನ ಅಂತರಾಷ್ಟ್ರೀಯ ವೃತ್ತಿಜೀವನದ ಮೂರನೇ ಪಂದ್ಯದ ನಂತರ ಧೋನಿ ಭಾಯ್, ನನಗೆ ನೀವು ವಿಶ್ವಕಪ್ ತಂಡದಲ್ಲಿ ಆಡುತ್ತೀರಿ ಎಂದು ಹೇಳಿದರು. ಹಾಗಾಗಿ ನನಗೆ ಅಂದು ವಿಶ್ವಕಪ್ ಆಡಲು ಅವಕಾಶ ಸಿಕ್ಕಿತು. ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ನಾನು ಬ್ಯಾಟಿಂಗ್ ಕೂಡ ಮಾಡಲಿಲ್ಲ ಆದರೆ ನೀವು ನಿಮ್ಮನ್ನು ವ್ಯಕ್ತಪಡಿಸಿದ್ದೀರಿ ಎಂದು ಧೋನಿ ಭಾಯ್ ನನಗೆ ಭರವಸೆ ನೀಡಿದರು. ತಮ್ಮ ಕನಸು ನನಸಾದ ಅನುಭವವನ್ನು ಹಾರ್ದಿಕ್ ಪಾಂಡ್ಯ ಹಂಚಿಕೊಂಡರು.
ಜೂನ್ 9ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಆಡುತ್ತಿದ್ದಾರೆ. ಅವರು ತಮ್ಮ ಚೊಚ್ಚಲ ನಾಯಕತ್ವದಲ್ಲಿ ಐಪಿಎಲ್ ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಜಯ ಗಳಿಸುವ ಮೂಲಕ ಗುಜರಾತ್ ಟೈಟನ್ಸ್ ತಂಡವನ್ನು ಐಪಿಎಲ್ 2022 ಚಾಂಪಿಯನ್ ಮಾಡಿದರು

ಟಿ20 ಸರಣಿಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು
ಭಾರತ ಸ್ಕ್ವಾಡ್: ಕೆಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ/ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್
ದಕ್ಷಿಣ ಆಫ್ರಿಕಾ ಟಿ20 ಬಳಗ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಕ್ ನಾರ್ಕಿಯಾ, ವಾಯ್ನೆ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ಟಬ್ರೈಜ್ ಶಮ್ಸಿ, ಸ್ಟೀಸ್ಟನ್ ಸ್ಟಬ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಜಾನ್ಸೆನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications