For Quick Alerts
ALLOW NOTIFICATIONS  
For Daily Alerts
 

ಡೀನ್ ಎಲ್ಗರ್ ಕೆಚ್ಚೆದೆಯ ಬ್ಯಾಟಿಂಗ್‌ಗೆ ಶರಣಾದ ಟೀಮ್ ಇಂಡಿಯಾ: ಸರಣಿ 1-1ರಿಂದ ಸಮಬಲ

Ind vs SA: 2nd test, South Africa beat India by 7 wickets, series level 1-1, Johannesburg

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಭಾರತವನ್ನು 7 ವಿಕೆಟ್‌ಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮೂರು ಒಂದ್ಯಗಳ ಟೆಸ್ಟ್ ಸರಣಿ 1-1 ಅಂತರದಿಂದ ಸಮಬಲಗೊಂಡಿದೆ. ದಕ್ಷಿಣ ಆಪ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರದರ್ಶಿಸಿದ ಅದ್ಭುತ ಬ್ಯಾಟಿಂಗ್‌ನಿಂದಾಗಿ ದಕ್ಷಿಣ ಆಫ್ರಿಕಾ ತಂಡ ಮಳೆಯ ಅಡ್ಡಿಯ ಹೊರತಾಗಿಯೂ ನಾಲ್ಕನೇ ದಿನದಲ್ಲಿಯೇ ಗೆಲುವಿನ ಸಂಭ್ರಮವನ್ನಾಚರಿಸುವಲ್ಲಿ ಯಶಸ್ವಿಯಾಗಿದೆ.

ಆರಂಭಿಕನಾಗಿ ಕಣಕ್ಕಿಳಿದು ಅಂತಿಮ ಹಂತದವರೆಗೂ ಕ್ರೀಸ್‌ಬಲ್ಲಿ ಭದ್ರವಾಗಿ ನೆಲೆಯೂರಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಈ ಪಂದ್ಯದಲ್ಲಿ ಭಾರತದ ಗೆಲುವಿನ ಕನಸಿಗೆ ಅಡ್ಡಿಯಾದರು. ಜೊತೆಗಾರರಿಂದ ದೊರೆತ ಅದ್ಭುತ ಬೆಂಬಲವನ್ನು ಬಳಸಿಕೊಂಡ ಡೀನ್ ಎಲ್ಗರ್ 240 ರನ್‌ಗಳ ಗುರಿ ಬೆನ್ನಟ್ಟಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತ ತಂಡದ ಭದ್ರ ಕೋಟೆ ಎನಿಸಿದ್ದ ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತಕ್ಕೆ ಮೊದಲ ಸೋಲಿನ ರುಚಿ ತೋರಿಸಿದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದ ದ. ಆಫ್ರಿಕಾ: 2ನೇ ಇನ್ನಿಂಗ್ಸ್‌ನಲ್ಲಿ ಭಾರತ ನೀಡಿದ 240 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಸಾಧಾರಣ ಆರಂಭ ದೊರೆಯಿತು. ಮೊದಲ ವಿಕೆಟ್‌ಗೆ 47 ರನ್‌ಗಳಿಸಿದ್ದಾಗ ದಕ್ಷಿಣ ಆಫ್ರಿಕಾ ತಂಡ 31 ರನ್‌ಗಳಿಸಿದ್ದ ಮಾರ್ಕ್ರಮ್ ವಿಕೆಟ್ ಕಳೆದುಕೊಂಡಿತ್ತು. ನಂತರ 93 ರನ್‌ಗಳಿಗೆ ದಕ್ಷಿಣ ಆಪ್ರಿಕಾ ತಂಡ 2ನೇ ವಿಕೆಟ್ ಕಳೆದುಕೊಂಡಿತು. ನಂತರ ಮೂರನೇ ವಿಕೆಟ್‌ಗೆ ವಾನ್‌ ಡರ್‌ ಡುಸ್ಸೆನ್ ಜೊತೆಗೆ 82 ರನ್‌ಗಳ ಜೊತೆಯಾಟವನ್ನು ನೀಡಿದರು ಎಲ್ಗರ್.

175 ರನ್‌ಗಳಿದ್ದಾಗ ವಾನ್‌ ಡರ್‌ ಡುಸ್ಸೆನ್ ಶಮಿ ಎಸೆತದಲ್ಲಿ ಕ್ಯಾಚ್ ನಿಡಿ ನಿರ್ಗಮಿಸುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಆದರೆ ಬಳಿಕ ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಪಡೆಯುವಲ್ಲಿ ಭಾರತದ ಬೌಲರ್‌ಗಳು ಸಂಪೂರ್ಣವಾಗಿ ವಿಫಲವಾದರು. ನಾಯಕ ಡೀನ್ ಎಲ್ಗರ್ ಹಾಗೂ ಟೆಂಬಾ ಬವುಮಾ ದಕ್ಷಿಣ ಆಪ್ರಿಕಾ ತಂಡವನ್ನು ಗೆಲುವಿನ ದಡ ತಲುಪಿಸಿದರು. ಡೀನ್ ಎಲ್ಗರ್ ಅಜೇಯ 96 ರನ್‌ಗಳಿಸಿದರೆ ಟೆಂಬಾ ಬವುಮಾ 23 ರನ್‌ಗಳ ಕೊಡುಗೆ ನೀಡಿದರು.

ಇನ್ನು ಈ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಪರಿಣಾಮವಾಗಿ ಕೇವಲ 202 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿತ್ತು. ನಾಯಕ ಕೆಎಲ್ ರಾಹುಲ್ (50 ರನ್) ಹಾಗೂ ಆರ್ ಅಶ್ವಿನ್ (46) ಮಾತ್ರವೇ ತಮಡದ ಪರವಾಗಿ ಉತ್ತಮ ಮೊತ್ತವನ್ನು ಗಳಿಸುವಲ್ಲಿ ಸಫಲವಾಗಿದ್ದರು. ಇದಕ್ಕೆ ಪ್ರತಿಯಾಗಿ ದಕ್ಷಿಣ ಆಪ್ರಿಕಾ ತಂಡ 229 ರನ್‌ಗಳನ್ನು ಗಳಿಸಿ ಇನ್ನಿಂಗ್ಸ್ ಅಂತ್ಯಗೊಳಿಸಿತ್ತು. ಭಾರತದ ಪರವಾಗಿ 7ವಿಕೆಟ್‌ಗಳನ್ನು ಪಡೆದು ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಮಿಂಚದರು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿರುವ ಭಾರತ ತಂಡ 266 ರನ್‌ಗಳನ್ನು ಗಳಿಸಿ ಆಲೌಟ್ ಆಯಿತು. ಹೀಗಾಗಿ 240 ರನ್‌ಗಳ ಗುರಿಯನ್ನು ನಿಗದಿಪಡಿಸಿತ್ತು. ಇದನ್ನು ದಕ್ಷಿಣ ಆಫ್ರಿಕಾ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ತಲುಪುವಲ್ಲಿ ಯಶಸ್ವಿಯಾಗಿದೆ.

ಟೀಮ್ ಇಂಡಿಯಾ ಆಡುವ ಬಳಗ ಹೀಗಿದೆ: ಕೆಎಲ್ ರಾಹುಲ್(ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್

ದಕ್ಷಿಣ ಆಫ್ರಿಕಾ ಆಡುವ ಬಳಗ: ಡೀನ್ ಎಲ್ಗರ್(ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್, ಕೈಲ್ ವೆರ್ರೆನ್ನೆ(ವಿಕೆಟ್ ಕೀಪರ್), ಟೆಂಬಾ ಬವುಮಾ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಡುವಾನ್ನೆ ಒಲಿವಿಯರ್,ಲುಂಗಿ ಎನ್‌ಗಿಡಿ

Story first published: Friday, January 7, 2022, 9:32 [IST]
Other articles published on Jan 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+