
ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ ಟಾಸ್ ರೆಕಾರ್ಡ್
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿಶೇಷ ಮೈಲುಗಲ್ಲು ತಲುಪಿದ್ದಾರೆ. ಅದೇನಂದ್ರೆ ಹರಿಣಗಳ ವಿರುದ್ಧ ಆಡಿದ ಬಹುತೇಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಕೊಹ್ಲಿ 12 ಟೆಸ್ಟ್ ಪಂದ್ಯಗಳಲ್ಲಿ ಭಾರತದ ನಾಯಕತ್ವ ವಹಿಸಿದ್ದು 10 ಟಾಸ್ ಗೆದ್ದಿದ್ದಾರೆ. ಅಂದ್ರೆ ಶೇಕಡಾ 83.3ರಷ್ಟು ಟಾಸ್ ಜಯಿಸಿದ್ದಾರೆ. ಆದ್ರೆ ಅದೇ ಉಳಿದ 56 ಟೆಸ್ಟ್ ಪಂದ್ಯಗಳಲ್ಲಿ ಇತರೆ ತಂಡಗಳ ವಿರುದ್ಧ ವಿರಾಟ್ 21 ಟಾಸ್ ಗೆದ್ದಿದ್ದು, ಶೇಕಡವಾರು ಪ್ರಮಾಣದಲ್ಲಿ 37.5ರಷ್ಟು ಅನ್ನೋದು ಆಶ್ಚರ್ಯಕ್ಕೆ ಎಡೆಮಾಡಿದೆ.
ವಿರಾಟ್ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇದು 99ನೇ ಪಂದ್ಯವಾಗಿದ್ದು, ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ 50ನೇ ಪಂದ್ಯವನ್ನಾಡಲಿದ್ದಾರೆ.

ದ್ರಾವಿಡ್ ರೆಕಾರ್ಡ್ ಮುರಿಯಲು ಕೊಹ್ಲಿಗೆ 14ರನ್ ಬಾಕಿ
ಸದ್ಯ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ದಾಖಲೆ ಮುರಿಯಲು ವಿರಾಟ್ ಕೊಹ್ಲಿ ಇನ್ನು 14ರನ್‌ಗಳಷ್ಟೇ ಬಾಕಿ ಉಳಿದಿದೆ. ಇದು ಸಾಧ್ಯವಾದಲ್ಲಿ ವಿರಾಟ್ ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಏತನ್ಮಧ್ಯೆ, ಭಾರತೀಯ ಬ್ಯಾಟರ್‌ಗಳ ಪಟ್ಟಿಯನ್ನು ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಎಲ್ಲರಿಗಿಂತ ಮುಂದಿದ್ದು, ಅವರು ಮಳೆಬಿಲ್ಲು ರಾಷ್ಟ್ರದಲ್ಲಿ ಭಾರತಕ್ಕಾಗಿ ಗರಿಷ್ಠ ಮೊತ್ತವನ್ನು ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 46.44 ಸರಾಸರಿಯಲ್ಲಿ 15 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಚಿನ್ ಮೂರು ಶತಕಗಳು ಮತ್ತು ಎರಡು ಅರ್ಧ ಶತಕಗಳದೊಂದಿಗೆ ಒಟ್ಟು 1161 ರನ್ ಗಳಿಸಿದ್ದರು. ದ್ರಾವಿಡ್ 11 ಪಂದ್ಯಗಳಲ್ಲಿ 624 ರನ್ ಗಳಿಸಿದ್ದರೆ, ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೆ 624 ರನ್ ಗಳಿಸಿದ್ದಾರೆ.

5000 ಗಡಿ ಮುಟ್ಟಲು ರಹಾನೆಗೆ 79 ರನ್ ಬೇಕು
ಅಜಿಂಕ್ಯ ರಹಾನೆ (ಭಾರತ) ಟೆಸ್ಟ್ ಕ್ರಿಕೆಟ್‌ನಲ್ಲಿ 5000 ರನ್‌ಗಳ ಮೈಲಿಗಲ್ಲನ್ನು ತಲುಪಲು 79 ರನ್ ಅಗತ್ಯವಿದೆ, ಮುಂಬೈಕರ್ 39 ಸರಾಸರಿಯಲ್ಲಿ 4921 ರನ್ ಗಳಿಸಿದ್ದಾರೆ. ಈತ ಐದು ಸಾವಿರ ಗಡಿ ಮುಟ್ಟಿದ್ದೇ ಆದಲ್ಲಿ ಈ ಸಾಧನೆ ಮಾಡಿದ 13 ನೇ ಭಾರತೀಯ ಬ್ಯಾಟ್ಸ್‌ಮನ್ ಆಗಲಿದ್ದಾರೆ.
ಪ್ರಸ್ತುತ ಉಳಿದ ಎಲ್ಲಾ 12 ಭಾರತೀಯ ಬ್ಯಾಟ್ಸ್‌ಮನ್‌ಗಳಲ್ಲಿ ಸರಾಸರಿ 40 ಕ್ಕಿಂತ ಕಡಿಮೆ ಇದ್ದು 5000+ ರನ್ ಗಳಿಸಿದ ಆಟಗಾರ ಲೆಜೆಂಡರಿ ಕಪಿಲ್ ದೇವ್ ಆಗಿದ್ದರು. ಕಪಿಲ್ ಬ್ಯಾಟಿಂಗ್ ಸರಾಸರಿ 31ರಷ್ಟಿತ್ತು.


Click it and Unblock the Notifications












