Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ದ. ಆಫ್ರಿಕಾ: ಕೋವಿಡ್ ಬಳಿಕ ಚಿನ್ನಸ್ವಾಮಿಯಲ್ಲಿ ಮೊದಲ ಟಿ20 ಪಂದ್ಯ: ಟಿಕೆಟ್ ಬಗೆಗಿನ ಸಂಪೂರ್ಣ ಮಾಹಿತಿ

Ind vs SA 5th t20: chinnaswamy stadium bengaluru ticket details with price

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ದಿನಗಣನೆ ಆರಂಭವಾಗಿದ್ದು ದಕ್ಷಿಣ ಆಪ್ರಿಕಾ ಕ್ರಿಕೆಟ್ ತಂಡ ಈಗಾಗಲೇ ಭಾರತಕ್ಕೆ ತಲುಪಿದೆ. ಜೂನ್ 9ರಿಂದ ಐದು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು ಮೊದಲ ಪಂದ್ಯ ದೆಹಲಿಯಲ್ಲಿ ಆಯೋಜನೆಯಾಗಲಿದೆ. ಕನ್ನಡಿಗ ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸಂಗತಿಯೆಂದರೆ ಈ ಸರಣಿಯ ಅಂತಿಮ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು ಪ್ರೇಕ್ಷಕರ ಸಂಪೂರ್ಣ ಹಾಜರಾತಿಯೊಂದಿಗೆ ಈ ಪಂದ್ಯ ಆಯೋಜೆನಯಾಗಲಿದೆ.

ಈ ಪಂದ್ಯವನ್ನು ಕ್ರೀಡಾಂಗಣದಲ್ಲಿಯೇ ವೀಕ್ಷಿಸಲು ಬಯಸುವ ಕ್ರಿಕೆಟ್ ಪ್ರೇಮಿಗಳಿಗೆ ಟಿಕೆಟ್ ಬಗೆಗಿನ ಮಾಹಿತಿಯನ್ನು ಕೆಎಸ್‌ಸಿಎ ಹಂಚಿಕೊಂಡಿದೆ. ಆಲ್‌ಲೈನ್ ಹಾಗೂ ಕೌಂಟರ್‌ನಲ್ಲಿ ಟಿಕೆಟ್ ಪಡೆದುಕೊಳ್ಳುವ ಅವಕಾಶವನ್ನು ನೀಡಲಾಗಿದ್ದು ಟಿಕೆಟ್ ದರ ಹಾಗೂ ಇತರ ಮಾಹಿತಿಗಳು ಇಲ್ಲಿದೆ.

ಕೋವಿಡ್ ಬಳಿಕ ಚಿನ್ನಸ್ವಾಮಿಯಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯ

ಕೋವಿಡ್ ಬಳಿಕ ಚಿನ್ನಸ್ವಾಮಿಯಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯ

ಇನ್ನು ಕಳೆದ ಎರಡೂವರೆ ವರ್ಷಗಳಿಂದ ವಿಶ್ವಾದ್ಯಂತ ಕೊರೊನಾವೈರಸ್ ದೊಡ್ಡ ಪ್ರಮಾಣದಲ್ಲಿ ಆಘಾತವನ್ನು ನೀಡಿದೆ. ಈ ವೈರಸ್‌ನ ಹಾವಳಿಯ ಬಳಿಕ ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಟಿ20 ಪಂದ್ಯ ಇದೇ ಮೊದಲ ಬಾರಿಗೆ ಆಯೋಜನೆಯಾಗುತ್ತಿದೆ. ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಾಗಿತ್ತು. ಇದೀಗ ಚುಟಕು ಕ್ರಿಕೆಟ್ ಸಮರಕ್ಕೂ ಕ್ರೀಡಾಂಗಣ ಸಜ್ಜಾಗುತ್ತಿದೆ.

ಜೂನ್ 12ರಂದು ಟಿಕೆಟ್ ಮಾರಾಟ

ಜೂನ್ 12ರಂದು ಟಿಕೆಟ್ ಮಾರಾಟ

ಭಾರತ ಹಾಗೂ ದಕ್ಷಿಣ ಆಪ್ರಿಕಾ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯ ಬೆಂಗಳೂರಿನಲ್ಲಿ ಜೂನ್ 19ರಂದು ಭಾನುವಾರ ನಡೆಯಲಿದೆ. ಅದಕ್ಕೂ ಒಂದು ವಾರ ಮುನ್ನ ಈ ಪಂದ್ಯದ ಟಿಕೆಟ್ ಮಾರಾಟವನ್ನು ಮಾಡಲಾಗುತ್ತದೆ. ಅಂದರೆ ಜೂನ್ 12ರಂದು ಟಿಕೆಟ್ ಮಾರಾಟವನ್ನು ಮಾಡಲಾಗುತ್ತದೆ. ಪೇಟಿಎಂ ಜೊತೆಗೆ ಕೆಎಸ್‌ಸಿಎ ಒಪ್ಪಂದವನ್ನು ಮಾಡಿಕೊಂಡಿದ್ದು ಆಲ್‌ಲೈನ್ ಹಾಗೂ ಕೌಂಟರ್‌ನಲ್ಲಿ ಟಿಕೆಟ್ ಮಾರಾಟವನ್ನು ಮಾಡಲಾಗುತ್ತದೆ. ಜೂನ್ 12ರಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಈ ಟಿಕೆಟ್ ಮಾರಾಟ ಮಾಡಲಾಗುತ್ತದೆ ಎಂದು ಕೆಎಸ್‌ಸಿಎ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಕೌಂಟರ್‌ನಲ್ಲಿ ಒಂದೇ ದಿನ ಟಿಕೆಟ್ ಮಾರಾಟ

ಕೌಂಟರ್‌ನಲ್ಲಿ ಒಂದೇ ದಿನ ಟಿಕೆಟ್ ಮಾರಾಟ

ಇನ್ನು ಕೌಂಟರ್‌ನಲ್ಲಿ ಜೂನ್ 12ರಂದು ಒಂದೇ ದಿನ ಟಿಕೆಟ್ ಮಾರಾಟ ಮಾಡಲಾಗುತ್ತದೆ. ಟಿಕೆಟ್ ಬಾಕಿಯಿದ್ದರೆ ಉಳಿದ ಎಲ್ಲಾ ಟಿಕೆಟ್‌ಗಳನ್ನು ಜೂನ್ 13ರಂದು ಆನ್‌ಲೈನ್‌ನಲ್ಲಿ ಟಿಕೆಟ್ ಪಡೆಯುವ ಅವಕಾಶವನ್ನು ನೀಡಲಾಗುತ್ತದೆ ಎಂದು ಕೆಎಸ್‌ಸಿಎ ಮಾಹಿತಿ ನೀಡಿದೆ.

ಟಿಕೆಟ್‌ಗಳ ದರ ಹೀಗಿದೆ

ಟಿಕೆಟ್‌ಗಳ ದರ ಹೀಗಿದೆ

ಇನ್ನು ಈ ಪಂದ್ಯದ ಟಿಕೆಟ್‌ನ ದರ 750ರಿಂದ ಆರಂಭವಾಗಲಿದ್ದು 20,000ದವರೆಗೆ ನಿಗದಿಪಡಿಸಲಾಗಿದೆ. 6000 ರೂಪಾಯಿವರೆಗಿನ ಟಿಕೆಟ್‌ಗಳು ಕೌಂಟರ್‌ನಲ್ಲಿ ಮಾತ್ರವೇ ಲಭ್ಯವಿದ್ದು ಜೂನ್ 12ರಂದು ಕೌಂಟರ್‌ನಲ್ಲಿ ಮಾರಾಟವಾಗದೆ ಉಳಿದ ಟಿಕೆಟ್‌ಗಳು ಮಾತ್ರ ಮರುದಿನ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. 750, 2000, 4000 ಹಾಗೂ 6000 ಬೆಲೆಯ ಟಿಕೆಟ್‌ಗಳು ಮೊದಲ ದಿನ ಕೌಂಟರ್‌ನಲ್ಲಿ ಲಭ್ಯವಾಗಲಿದೆ.

ಜೂನ್ 12ರಂದು ಆನ್‌ಲೈನ್‌ನಲ್ಲಿ ಟಿಕೆಟ್ ಪಡೆಯುವವರಿಗೆ ಗ್ರ್ಯಾಂಡ್ ಟೆರೇಸ್(ಟಿಕೆಟ್ ಬೆಲೆ 6,000 ರೂ.), ಪಿ ಕಾರ್ಪೊರೇಟ್(ಟಿಕೆಟ್ ಬೆಲೆ 10,000 ರೂ) ಪೆವಿಲಿಯನ್ ಟೆರೇಸ್ (ಟಿಕೆಟ್ ಬೆಲೆ 15,000 ರೂ.) ಪಿ 2 ಸ್ಟ್ಯಾಂಡ್(ಟಿಕೆಟ್ ಬೆಲೆ 20,000 ರೂ) ಈ ಟಿಕೆಟ್‌ಗಳೂ ಮಾತ್ರವೇ ಲಭ್ಯವಿರಲಿದೆ.

Story first published: Saturday, June 4, 2022, 19:14 [IST]
Other articles published on Jun 4, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+