
ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಭಾನುವಾರ ಚಾಲನೆ ಪಡೆಯಲಿದೆ. ಈ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದ ಆಡುವ ಬಳಗ ಹೇಗಿರಬೇಕು ಎಂಬ ಬಗ್ಗೆ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗಿದೆ. ಅದರಲ್ಲೂ ತಂಡದ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಆಟಗಾರ ಯಾರು ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ತಂಡಕ್ಕೆ ಸಲಹೆಯೊಂದನ್ನು ನೀಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧಧ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಓರ್ವ ಆಟಗಾರನನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳುವುದು ಸೂಕ್ತವಲ್ಲ ಎಂಬ ಮಾತನ್ನು ನೇರವಾಗಿ ಹೇಳಿದ್ದಾರೆ ಆಕಾಶ್ ಚೋಪ್ರ. ಭಾರತದ ಅನುಭವಿ ಆಟಗಾರನನ್ನು ಬಾಕ್ಸಿಂಗ್ ಡೇ ಟೆಸ್ಟ್‌ನಿಂದ ಹೊರಗಿಡಬೇಕೆಂದು ಆಕಾಶ್ ಚೋಪ್ರ ಅಭಿಪ್ರಾಯವನ್ನು ಹೇಳಿದ್ದಾರೆ.
ಫಾರ್ಮ್‌ನಲ್ಲಿಲ್ಲದ ರಹಾನೆ ಬೇಡ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಅನುಭವಿ ಆಟಗಾರನಾದ ಅಜಿಂಕ್ಯಾ ರಹಾಣೆ ಅವರನ್ನು ಆಡಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ಆಕಾಶ್ ಚೋಪ್ರ ವ್ಯಕ್ತಪಡಿಸಿದ್ದಾರೆ. ಮೊದಲ ಪಂದ್ಯದಲ್ಲಿ ಭಾರತ ಆಡು ಬ್ಯಾಟರ್‌ಗಳೊಂದಿಗೆ ಕಣಕ್ಕಿಳಿಯುವ ನಿರ್ಧಾರವನ್ನು ತೆಗೆದುಕೊಂಡರು ಕೂಡ ಫಾರ್ಮ್‌ನಲ್ಲಿಲ್ಲದ ಅಜಿಂಕ್ಯಾ ರಹಾನೆಯನ್ನು ಆಡಿಸುವುದು ಸರಿಯಲ್ಲ ಎಂದಿದ್ದಾರೆ.
"ದಕ್ಷಿಣ ಆಫ್ರಿಕಾ ವಿರುದ್ಧಧ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕಿರುವ ಪ್ರಮುಖ ಪ್ರಶ್ನೆಯೆಂದರೆ ಎಷ್ಟು ಬ್ಯಾಟರ್‌ಗಳೊಂದಿಗೆ ಕಣಕ್ಕಿಳಿಯುವುದು ಎಂಬುದಾಗಿದೆ. ಆರಿ ಬ್ಯಾಟರ್‌ಗಳನ್ನು ಆಡಿಸಿದರೂ ಅಜಿಂಕ್ಯಾ ರಹಾನೆಯನ್ನು ನಾನು ಆಯ್ಕೆ ಮಾಡಲು ಬಯಸುವುದಿಲ್ಲ. ನಾನು ಹನುಮ ವಿಹಾರಿಯನ್ನು ಆಯ್ಕೆ ಮಾಡುತ್ತೇನೆ ಯಾಕೆಂದರೆ ನಾನು ಹನುಮ ವಿಹಾರಿ ಅಲ್ಲಿತ ಪರಿಸ್ಥೊತೊಗೆ ಒಗ್ಗಿಕೊಂಡಿದ್ದು ಅಲ್ಲಿ ರವರು ರನ್ ಕೂಡ ಗಳಿಸಿದ್ದಾರೆ" ಎಂದು ಆಕಾಶ್ ಚೋಪ್ರ ಹೇಳಿದ್ದಾರೆ.
ನೀವು ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶವನ್ನು ನೀಡಿದ್ದು ಅವರು ಮೊದಲ ಪಂದ್ಯದಲ್ಲಿಯೇ ಶತಕ ಮತ್ತು ಅರ್ಧಶತಕವನ್ನು ಗಳಿಸಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ರಹಾನೆ ಸಹಜವಾಗಿ ಹಿರಿಯ ಆಟಗಾರ. ಆದರೆ ಅವರು ಇನ್ನು ಮುಂದೆ ತಂಡದ ಉಪನಾಯಕನಲ್ಲ. ಈ ಸರಣಿಯಲ್ಲಿ ನಾನು ಆರು ಬ್ಯಾಟರ್‌ಗಳೊಮದಿಗೆ ಟೀಮ್ ಇಂಡಿಯಾ ಆಡುವುದನ್ನು ಬಯಸುತ್ತೇನೆ ಮತ್ತು ನಾನು ಶ್ರೇಯಸ್ ಅಯ್ಯರ್ ಮತ್ತು ಹನುಮ ವಿಹಾರಿ ಆಡುವ ಬಳಗದಲ್ಲಿ ಇರುವುದನ್ನು ನೋಡಲು ಇಷ್ಟ ಪಡುತ್ತೇನೆ" ಎಂದು ಆಕಾಶ್ ಚೋಪ್ರ ಹೇಳಿಕೊಂಡಿದ್ದಾರೆ.
ಇನ್ನು ಟೀಮ್ ಇಂಡಿಯಾದ ಉಪ ನಾಯಕ ಕೂಡ ಕೆಎಲ್ ರಾಹುಲ್ ಈ ಪಂದ್ಯದಲ್ಲಿ ಐವರು ಬೌಲರ್‌ಗಳೊಮದಿಗೆ ಕಣಕ್ಕಿಳಿಯುವುದರ ಬಗ್ಗೆ ಸುಳಿವನ್ನು ನೀಡಿದ್ದರು. ಹೀಗಾಗಿ ಶಾರ್ದೂಲ್ ಠಾಕೂರ್ ಭಾರತಕ್ಕೆ ಅತ್ಯುತ್ತಮ ಆಯ್ಕೆಯಾಗಲಿದ್ದಾರೆ ಎಂದಿದ್ದಾರೆ. ಶಾರ್ದೂಲ್ ಠಾಕೂರ್ ಇಂಗ್ಲೆಂಡ್ ವಿರುದ್ಧಧ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಆಡಿದ್ದು ಇದರಲ್ಲಿ 14 ವಿಕೆಟ್ ಸಂಪಾದಿಸಿದ್ದಾರೆ. ಅಲ್ಲದೆ ಇಂಗ್ಲೆಂಡ್‌ನ ಕಠಿಣ ಪಿಚ್‌ನಲ್ಲಿ ಎರಡು ಅರ್ಧ ಶತಕವನ್ನು ಕೂಡ ಬಾರಿಸಿದ್ದಾರೆ.
ಆಕಾಶ್ ಚೋಪ್ರಾ ಆಯ್ಕೆಯ ಆಡುವ ಬಳಗ: ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.